ಬೆಂಗಳೂರು,ಜು.22- ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆ ನಗರದಲ್ಲಿ ವಾಸವಾಗಿದ್ದುಕೊಂಡು ಡ್ರಗ್‌ಪೆಡ್ಲಿಂಗ್‌ನಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಒಂಬತ್ತು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿದೇಶಿ ಪ್ರಜೆಗಳ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಿಸಿಬಿಯ ಮಾದಕದ್ರವ್ಯ ನಿಗ್ರಹದಳದ ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರೆಸಿ ನಗರದ ವಿವಿಧೆಡೆ ಅನಧಿಕೃತವಾಗಿ ವಾಸವಾಗಿದ್ದ ಒಂಬತ್ತು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.
ವಿವಿಧ ವೀಸಾಗಳಡಿ ಭಾರತ ದೇಶಕ್ಕೆ ಬಂದು ವೀಸಾ ಅವಧಿ ಮುಗಿದಿದ್ದರೂ ಸಹ ನಗರದಲ್ಲಿ ನೆಲೆಸಿದ್ದ ಒಂಬತ್ತು ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಿ ಡಿಟೆನ್ಷನ್ ಸೆಂಟರ್‌ಗೆ ಬಿಡಲಾಗಿದೆ.
ಈ ಪೈಕಿ ನಾಲ್ವರು ನೈಜೀರಿಯಾ ದೇಶದವರಾಗಿದ್ದು, ಒಬ್ಬ ಸುಡಾನ್ ದೇಶದವನು, ಮತ್ತೊಬ್ಬ ಕಾಂಗೋ ದೇಶ ಹಾಗೂ ಇನ್ನಿಬ್ಬರು ಘಾನಾ ದೇಶದ ಪ್ರಜೆಗಳಾಗಿರುತ್ತಾರೆ. ಈ ಪೈಕಿ ನೈಜೀರಿಯಾ ದೇಶದ ಒಬ್ಬ ಪ್ರಜೆಯನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದ್ದು, ಉಳಿದವರನ್ನು ಅವರುಗಳ ದೇಶಕ್ಕೆ ಕಳುಹಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
- ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ : ಅಶೋಕ್ ವಾಗ್ದಾಳಿ
- ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಬಂಧನ
- ಧರ್ಮಸ್ಥಳ ಬುರುಡೆ ಪ್ರಕರಣದ ಹಿಂದೆ ಕೇರಳದ ಕಮ್ಯುನಿಸ್ಟ್ ಸಂಸದನ ಪಾತ್ರದ ಶಂಕೆ..?
- ಬಾನು ಮುಸ್ತಾಕ್ ಅವರಿಂದ ದಸರಾ ಉದ್ಘಾಟನೆ ಪ್ರಶ್ನಿಸಿ ಹೈಕೋರ್ಟ್ ಮೊರೆಹೋದ ಪ್ರತಾಪ್ ಸಿಂಹ
- ಮಳೆ-ಪ್ರವಾಹ ಪೀಡಿತ ರಾಜ್ಯಗಳಿಗೆ ಶೀಘ್ರವೇ ಪ್ರಧಾನಿ ಮೋದಿ ಭೇಟಿ