ನವದೆಹಲಿ,ಜು.23- ತಮ ಸರ್ಕಾರಿ ನಿವಾಸದಲ್ಲಿ ಆಪಾರ ಪ್ರಮಾಣದ ನಗದು ಸುಟ್ಟು ಹಾಕಿದ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿದ ಆಂತರಿಕ ತನಿಖಾ ಸಮಿತಿಯ ವರದಿಯನ್ನು
ಅಸಿಂಧುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಇಂದು ಹಿಂದೆ ಸರಿದಿದ್ದಾರೆ. ನಗದು ಪತ್ತೆ ಪ್ರಕರಣದಲ್ಲಿ ನ್ಯಾಯಮೂರ್ತಿ ವರ್ಮಾ ಅವರನ್ನು ಸಂಸದೀಯ ಸಮಿತಿಯು ತಪ್ಪಿತಸ್ಥರೆಂದು ಆರೋಪಿಸಿದೆ.
ಕಪಿಲ್ ಸಿಬಲ್, ಮುಕುಲ್ ರೋಹಟ್ಗಿ, ರಾಕೇಶ್ ದ್ವಿವೇದಿ, ಸಿದ್ಧಾರ್ಥ್ ಲುತ್ರಾ ಮತ್ತು ಸಿದ್ಧಾರ್ಥ್ ಅಗರ್ವಾಲ್ ಸೇರಿದಂತೆ ಹಿರಿಯ ವಕೀಲರು ನ್ಯಾಯಮೂರ್ತಿ ವರ್ಮಾ ಪರವಾಗಿ ಹಾಜರಾಗಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಪರವಾಗಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನಾನು ಕೂಡ ಸಮಿತಿಯ ಭಾಗವಾಗಿದ್ದರಿಂದ ಈ ವಿಷಯವನ್ನು ಕೈಗೆತ್ತಿಕೊಳ್ಳಲು ನನಗೆ ಸಾಧ್ಯವಾಗುವುದಿಲ್ಲ. ನಾವು ಅದನ್ನು ಪಟ್ಟಿ ಮಾಡುತ್ತೇವೆ. ನಾನು ಪೀಠವನ್ನು ರಚಿಸಬೇಕಾಗುತ್ತದೆ ಎಂದು ಹೇಳಿದರು. ಕೆಲವು ಸಾಂವಿಧಾನಿಕ ಸಮಸ್ಯೆಗಳಿವೆ. ಸಾಧ್ಯವಾದಷ್ಟು ಬೇಗ ಪೀಠವನ್ನು ರಚಿಸುವಂತೆ ನಾನು ನಿಮನ್ನು ವಿನಂತಿಸುತ್ತೇನೆ ಎಂದು ವಕೀಲರು ಮನವಿ ಮಾಡಿದರು.
ಮನವಿಗೆ ಪ್ರತಿಕ್ರಿಯಿಸಿದ ಸಿಜೆಐ, ಆ ವಿಷಯವನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲದಿರಬಹುದು,ನಾವು ಕೇವಲ ನಿರ್ಧಾರ ತೆಗೆದುಕೊಂಡು ಪೀಠ ರಚಿಸುತ್ತೇವೆ ಎಂದು ವಕೀಲರಿಗೆ ತಿಳಿಸಿದರು.ಸಿಜೆಐ ನೇತೃತ್ವ ವಹಿಸಿದ್ದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಜೋಯಲ್ಯ ಬಾಗ್ಚಿ ಕೂಡ ಇದ್ದರು.
ಮೇ 8 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತಮ ವಿರುದ್ಧ ದೋಷಾರೋಪಣೆಯನ್ನು ಆರಂಭಿಸುವಂತೆ ಸಂಸತ್ತನ್ನು ಒತ್ತಾಯಿಸಿ ಮಾಡಿದ್ದ ಶಿಫಾರಸನ್ನು ರದ್ದುಗೊಳಿಸುವಂತೆ ವರ್ಮಾ ಕೋರಿದ್ದಾರೆ.ನಿರ್ದಿಷ್ಟ ಪುರಾವೆಗಳ ಕೊರತೆಯಿದ್ದರೂ ಪ್ರತಿಕೂಲ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಪುರಾವೆಗಳ ಹೊಣೆಯನ್ನು ತನ್ನ ಮೇಲೆ ಪರಿಣಾಮಕಾರಿಯಾಗಿ ವರ್ಗಾಯಿಸುವ ಮೂಲಕ ಸಮಿತಿಯು ಪೂರ್ವನಿರ್ಧರಿತ ವಿಧಾನದೊಂದಿಗೆ ಕಾರ್ಯನಿರ್ವಹಿಸಿದೆ ಎಂದು ಅವರು ಪ್ರತಿಪಾದಿಸಿದರು.
ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಮಾಡಿದ ಶಿಫಾರಸನ್ನು ಅವರು ಪ್ರಶ್ನಿಸಿ, ತಮ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.ಮಾರ್ಚ್ 14 ರಂದು ನಡೆದ ಅಗ್ನಿಶಾಮಕ ಕಾರ್ಯಾಚರಣೆಯ ಸಮಯದಲ್ಲಿ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದ ಔಟ್‌ಹೌಸ್‌ನಲ್ಲಿ ಪತ್ತೆಯಾದ ಆಘಾತಕಾರಿ ನಗದು ಸಂಗ್ರಹದಿಂದ ಈ ಪ್ರಕರಣ ಹುಟ್ಟಿಕೊಂಡಿದೆ.
ಈ ಘಟನೆಯು ಸಾರ್ವಜನಿಕರ ಆಕೋಶಕ್ಕೆ ಕಾರಣವಾಯಿತು. ಅಂದಿನ ಮುಖ್ಯ ನ್ಯಾಯಮೂರ್ತಿ ಖನ್ನಾ ಅವರು ನ್ಯಾಯಮೂರ್ತಿ ಶೀಲ್ ನಾಗು (ಆಗ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ), ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ (ಆಗ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ) ಮತ್ತು ನ್ಯಾಯಮೂರ್ತಿ ಅನು ಶಿವರಾಮನ್ (ನ್ಯಾಯಾಧೀಶರು, ಕರ್ನಾಟಕ ಹೈಕೋರ್ಟ್) ಅವರನ್ನು ಒಳಗೊಂಡ ಆಂತರಿಕ ತನಿಖಾ ಸಮಿತಿಯನ್ನು ರಚಿಸಿದ್ದರು.
ಇದರ ನಂತರ, ನ್ಯಾಯಮೂರ್ತಿ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವಾಪಸ್ ಕಳುಹಿಸಲಾಯಿತು ಮತ್ತು ವಿಚಾರಣೆಯ ಫಲಿತಾಂಶ ಬರುವವರೆಗೂ ನ್ಯಾಯಾಂಗ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿತ್ತು.
- ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ, ರೈತರು ಆತಂಕ ಪಡಬೇಕಾಗಿಲ್ಲ : ಸಚಿವ ಚಲುವರಾಯಸ್ವಾಮಿ
- ಕ್ಷುಲ್ಲಕ ವಿಚಾರಕ್ಕೆ ಕಿರಿಕ್ : ಹಲ್ಲೆಗೊಳಗಾಗಿದ್ದ ಫುಡ್ ಡೆಲಿವರಿ ಬಾಯ್ ಸಾವು
- ಇತಿಹಾಸದಲ್ಲೇ ಇದೇ ಮೊದಲು : ಮಹಿಳಾ ಚೆಸ್ ವಿಶ್ವಕಪ್ ಫಿನಾಲೆಯಲ್ಲಿ ಭಾರತೀಯರು ಮುಖಾಮುಖಿ
- ರಾಜ್ಯಸಭಾ ಸದಸ್ಯರಾಗಿ ನಟ ಕಮಲಹಾಸನ್ ಪ್ರಮಾಣ ವಚನ ಸ್ವೀಕಾರ
- ಚುನಾವಣಾ ಆಯೋಗದ ವಿರುದ್ಧ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ