Sunday, July 27, 2025
Homeಬೆಂಗಳೂರುಅಸಭ್ಯ ರೀತಿಯಲ್ಲಿ ಯುವತಿಯರ ಫೋಟೋ-ವಿಡಿಯೋ ತೆಗೆಯುತ್ತಿದ್ದ ವಿಕೃತಕಾಮಿ ಹುಸೇನ್‌ ಬಂಧನ

ಅಸಭ್ಯ ರೀತಿಯಲ್ಲಿ ಯುವತಿಯರ ಫೋಟೋ-ವಿಡಿಯೋ ತೆಗೆಯುತ್ತಿದ್ದ ವಿಕೃತಕಾಮಿ ಹುಸೇನ್‌ ಬಂಧನ

Hussain arrested for taking indecent photos and videos of young women

ಬೆಂಗಳೂರು,ಜು.24-ಯುವತಿಯರ ಫೋಟೋ, ವಿಡಿಯೋ ತೆಗೆದು ಅಸಭ್ಯ ರೀತಿಯಲ್ಲಿ ಕಾಣುವಂತೆ ಸಾಮಾಜಿಕ ಜಾಲ ತಾಣದಲ್ಲಿ ಹಾಕುತ್ತಿದ್ದ ವಿಕೃತ ಕಾಮಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ದಿಲವರ್‌ ಹುಸೇನ್‌ (19) ಬಂಧಿತ ವಿಕೃತ ಕಾಮಿ.

ಈತ ನಗರದ ಎಂಜಿ ರಸ್ತೆ ಮತ್ತು ಬ್ರಿಗೇಡ್‌ ರಸ್ತೆಗಳಲ್ಲಿ ಯುವತಿಯರ ಅನುಮತಿ ಇಲ್ಲದೆ ಅವರಿಗೆ ಗೊತ್ತಾಗದಂತೆ ಫೋಟೋ, ವಿಡಿಯೋವನ್ನು ಸೆರೆ ಹಿಡಿದು, ತನಗೆ ಬೇಕಾದಂತೆ ಎಡಿಟ್‌ ಮಾಡಿ ಹೆಚ್ಚು ಲೈಕ್‌ಗಳಿಸಲು ಆ ಫೋಟೋಗಳನ್ನು ಬೆಂಗಳೂರು ನೈಟ್‌ಲೈಫ್‌ ಎಂದು ಬರೆದು ಬಂಗಾಳಿ ಹಾಡುಗಳನ್ನು ಸೇರಿಸಿ ದಿಲ್ಬರ್‌ ಜಾನಿ ಎಂಬ ಇಸ್ಸ್ಟಾಗ್ರಾಂ ಪೇಜ್‌ನಲ್ಲಿ ಅಪ್ಲೋಡ್‌ ಮಾಡುತ್ತಿದ್ದನು.

ಈ ಬಗ್ಗೆ ಅಶೋಕನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಖಚಿತ ಮಾಹಿತಿಗಳನ್ನು ಕಲೆ ಹಾಕಿ ಆರೋಪಿಯನ್ನು ಬಂಧಿಸಿ, ಆತನ ಮೊಬೈಲ್‌ ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

RELATED ARTICLES

Latest News