ನವದೆಹಲಿ, ಜು.25- ನವೀಕರಿಸಬಹು ದಾದ ಇಂಧನ ವಲಯಕ್ಕೆ ಉತ್ತೇಜನ ನೀಡಿದ್ದರ ಫಲವಾಗಿ 4 ಲಕ್ಷ ಕೋಟಿ ರೂ. ಉಳಿತಾಯ ಆಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು. ನವದೆಹಲಿಯಲ್ಲಿ ನಡೆದ ಮೆರ್ಕಾಮ್ ಇಂಡಿಯಾ ನವೀಕರಿಸಬಹುದಾದ ಶೃಂಗಸಭೆಯನ್ನು (2025) ಉದ್ದೇಶಿಸಿ ಮಾತನಾಡಿದ ಅವರು, ನವೀಕರಿಸಬಹುದಾದ ಇಂಧನ ವಿಸ್ತರಣೆಗೆ ಆದ್ಯತೆ ನೀಡಿದ್ದರಿಂದ ಪಳೆಯುಳಿಕೆ ಇಂಧನ ಆಮದು ತಗ್ಗಿದೆ. ಅಲ್ಲದೇ, ಪರಿಸರ ಮಾಲಿನ್ಯ ಸಂಬಂಧಿತ ವೆಚ್ಚವನ್ನು ಸಹ ತಪ್ಪಿಸಿದೆ ಎಂದರು.
ಈ ಮೂಲಕ ಸುಮಾರು 4 ಲಕ್ಷ ಕೋಟಿ ರೂ. ಆರ್ಥಿಕ ಉಳಿತಾಯಕ್ಕೆ ನೆರವಾಗಿದೆ ಎಂದು ಹೇಳಿದರು. ಅಂತರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ ಅಧ್ಯಯನದ ಪ್ರಕಾರ ನವೀಕರಿಸಬಹುದಾದ ಇಂಧನದಿದಾಗಿ ದೇಶದಲ್ಲಿ 14.9 ಬಿಲಿಯನ್ ಡಾಲರ್ ಪಳೆಯುಳಿಕೆ ಇಂಧನ ಆಮದು ಕಡಿಮೆಯಾಗಿದೆ. 410.9 ಮಿಲಿಯನ್ ಟನ್ ಹೊರಸೂಸುವಿಕೆ ಸಹ ತಗ್ಗಿದೆ ಮತ್ತು 31.7 ಬಿಲಿಯನ್ ಡಾಲರ್ ಮೌಲ್ಯದಷ್ಟು ಆರೋಗ್ಯ ಮತ್ತು ವಾಯುಮಾಲಿನ್ಯದಿಂದ ಪ್ರಯೋಜನವಾಗಿದೆ ಎಂದರು.
ಪ್ರಧಾನಮಂತ್ರಿ ಸೂರ್ಯ ಘರ್ ಮಫ್‌್ತ ಬಿಜ್ಲಿ ಯೋಜನೆಯಡಿ 58.7 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಈಗಾಗಲೇ 17.2 ಲಕ್ಷ ಘಟಕಗಳು ಪೂರ್ಣಗೊಂಡಿವೆ. ಈ ವಲಯದಲ್ಲಿ 30 ಗಿಗಾವ್ಯಾಟ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸೌ ಗಾಗಿ 5,400 ಕೋಟಿ ರೂ. ಕಾರ್ಯಸಾಧ್ಯತಾ ಅಂತರ ನಿಧಿ ಯೋಜನೆ ಸಹ ಆರಂಭಿಸಲಾಗಿದೆ. ಇದು 33,000 ಕೋಟಿ ರೂ. ಅಷ್ಟು ಹೂಡಿಕೆ ಆಕರ್ಷಿಸುವ ನಿರೀಕ್ಷೆಯಿದೆ ಎಂದು ವಿವರಿಸಿದರು.
2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಗ್ರ ಪ್ರಸರಣ ಯೋಜನೆ ಹಾಕಿಕೊಳ್ಳಲಾಗಿದೆ. ವಿದ್ಯುತ್ ಸಚಿವಾಲಯ, ಸಿಇಎ, ಸಿಟಿಯು ಮತ್ತು ಪವರ್‌ಗ್ರಿಡ್‌ನೊಂದಿಗೆ ಸಮನ್ವಯದಿಂದ ಯೋಜನೆ ರೂಪಿಸಲಾಗಿದೆ. 24,000 ಕೋಟಿ ರೂ. ವೆಚ್ಚದ ಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಯೋಜನೆ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಯಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ಎಂಎಸ್‌ಎಂಇ ಮತ್ತು ನವೋದ್ಯಮಗಳಿಗೆ ಶುದ್ಧ ಇಂಧನ ನಾವೀನ್ಯತೆಗಾಗಿ ಅಧಿಕಾರ ನೀಡಲಾಗುತ್ತಿದೆ. ಅಲ್ಲದೇ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ 19,744 ಕೋಟಿ ರೂ. ವೆಚ್ಚ, 3,000 ಮೆಗಾವ್ಯಾಟ್ ಎಲೆಕ್ಟ್ರೋಲೈಸರ್ ಸಾಮರ್ಥ್ಯದ ಹಂಚಿಕೆ ಮತ್ತು ವರ್ಷಕ್ಕೆ 8.6 ಲಕ್ಷ ಟನ್‌ಗೂ ಹೆಚ್ಚು ಹಸಿರು ಹೈಡ್ರೋಜನ್ ಉತ್ಪಾದನೆ ಅನುಮೋದನೆಯೊಂದಿಗೆ ವೇಗದ ಪ್ರಗತಿ ಸಾಧಿಸುತ್ತಿದೆ ಎಂದು ತಿಳಿಸಿದರು.
- ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ 15 “ಸುಪ್ರೀಂ” ಮಾರ್ಗಸೂಚಿ ಬಿಡುಗಡೆ
- ಚುನಾವಣಾ ಅಕ್ರಮ : ಕಾಂಗ್ರೆಸ್ ನಾಯಕರ ಆರೋಪಗಳಿಗೆ ಡಿ.ಕೆ.ಸುರೇಶ್ ಸಹಮತಿ
- ಎನ್ಡಿಎ ಸರ್ಕಾರದಿಂದ ಚುನಾವಣಾ ಆಯೋಗ ದುರುಪಯೋಗದ ವಿರುದ್ಧ ದೇಶಾದ್ಯಂತ ಅಭಿಯಾನ : ಸಿದ್ದರಾಮಯ್ಯ
- ಬೆಂಗಳೂರು : ಜ್ಯುವೆಲರಿ ಅಂಗಡಿಯಲ್ಲಿ ಪಿಸ್ತೂಲ್ನಿಂದ ಬೆದರಿಸಿ ಚಿನ್ನಾಭರಣ ಲೂಟಿ
- ತನ್ನ ಪತ್ನಿ ಹಾಗೂ ಅಳಿಯನ ಎದುರಲ್ಲೇ ಕತ್ತು ಕುಯ್ದುಕೊಂಡು ಪತಿ ಆತ್ಮಹತ್ಯೆ