ಬೆಂಗಳೂರು, ಜು.25- ನೀವು ಕಟ್ಟಿರುವ ಮನೆ ಅಳತೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದರೆ ನಿಮಗೆ ಕಾದಿದೆ ಗ್ರಹಚಾರ.ಈ ರೀತಿ ತಪ್ಪು ಮಾಹಿತಿ ನೀಡಿರುವ ನಗರದ 26 ಸಾವಿರ ಇ-ಖಾತದಾರರಿಗೆ ಬಿಬಿಎಂಪಿ ಷೋಕಾಸ್ ನೋಟೀಸ್ ಜಾರಿ ಮಾಡಿದ್ದು, ಮಾಡಿರುವ ತಪ್ಪು ಸರಿಪಡಿಸಕೊಳ್ಳದಿದ್ದರೆ, ನಿಮ್ಮ ಇ-ಖಾತೆ ಹಾಗೂ ಮನೆಯನ್ನು ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ನೀವು ಟ್ಯಾಕ್‌್ಸ ಕಡಿಮೆ ಕಟ್ಟಿ, ಟ್ಯಾಕ್ಸ್ ಪಾವತಿಸುವ ಅಳತೆಗಿಂದ ಹೆಚ್ಚಿನ ಭಾಗದಲ್ಲಿ ಮನೆ ನಿರ್ಮಿಸಿದ್ದರೆ ನೀವು ದಂಡ ಪಾವತಿ ಮೂಲಕ ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ನೀವು ಮಾಡಿರುವ ತಪ್ಪನ್ನು ಸರಿಪಡಿಸಿಕೊಂಡು 15 ದಿನಗಳ ಒಳಗೆ ಸೂಕ್ತ ದಾಖಲೆಗಳನ್ನು ಸಮೀಪ ಸಹಾಯಕ ಕಂದಾಯ ಕಚೇರಿಗಳಿಗೆ ಸಲ್ಲಿಸಬೇಕು. ಇಲ್ಲದಿದ್ದರೆ ಕಡಿಮೆ ಅಳತೆ ನೀಡಿರುವ ಮನೆಗಳ ಇ-ಖಾತಾ ಹಾಗೂ ಮನೆಗಳನ್ನು ಸೀಜ್ ಮಾಡಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ವೌದ್ಗಿಲ್ ಎಚ್ಚರಿಸಿದ್ದಾರೆ.
- ನ.2ಕ್ಕೆ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆ, ಕ್ಯಾಮರಾ ಕಣ್ಗಾವಲು
- ಚಿಕ್ಕಮಗಳೂರಲ್ಲಿ ಕಾಡಾನೆ ದಾಳಿ ಇಬ್ಬರು ಬಲಿ
- ವಿಮೆ ಹಣಕ್ಕಾಗಿ ಮಗನನ್ನೇ ಹತ್ಯೆ ಮಾಡಿಸಿದ ತಾಯಿ
- ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವಾಟಾಳ್ ಸಿದ್ಧತೆ
- ಉಪ ವಿಭಾಗಾಧಿಕಾರಿಗೆ ಕೃಷ್ಣಬೈರೇಗೌಡ ತರಾಟೆ

