ಬೆಂಗಳೂರು,ಜು.25- ಕೇಂದ್ರ ಚುನಾವಣಾ ಅಯೋಗ ತರಾತುರಿಯಲ್ಲಿ ಲೋಕಸಭಾ ಚುನಾವಣೆಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ದತ್ತಾಂಶಗಳನ್ನು ಅಳಿಸಿಹಾಕಿದ್ದೇಕೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣಾ ಮತಯಂತ್ರಗಳ ಮೇಲೆ ಅನುಮಾನಗಳಿವೆ. ರಾಹುಲ್‌ಗಾಂಧಿ ಅವರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇದೆ. ಸೂಕ್ತ ಸಂದರ್ಭದಲ್ಲಿ ಅವರು ಅದನ್ನು ಬಹಿರಂಗಪಡಿಸಿದ್ದಾರೆ ಎಂದರು.
ಚುನಾವಣಾ ಆಯೋಗದ ಮೇಲೆ ಪದೇಪದೇ ಉಂಟಾಗುವ ಕೆಲಸಗಳಾಗುತ್ತಿವೆ. ಲೋಕಸಭೆ ಚುನಾವಣೆಗೆ ಸಂಬಂಧ ಪಟ್ಟಂತೆ ಸಿಸಿಟಿವಿ ಕ್ಯಾಮೆರಾ ಹಾಗೂ ಇತರ ದತ್ತಾಂಶಗಳನ್ನು ಆಯೋಗ 45 ದಿನಗಳಲ್ಲೇ ಅಳಿಸಿ ಹಾಕಿದೆ. ಇಷ್ಟು ಆತುರ ಏನಿತ್ತು ಮತ್ತು ಅದರ ಹಿಂದೆ ಯಾರಿದ್ದಾರೆ ಎಂದು ಸ್ವಾಭಾವಿಕ ಪ್ರಶ್ನೆ ಕಾಡುತ್ತಿದೆ ಎಂದರು.
ತಾವು ಇತ್ತೀಚೆಗೆ ಅಧಿಕಾರಿಗಳ ನಿಯೋಗದ ಜೊತೆ ದೆಹಲಿಗೆ ಭೇಟಿ ನೀಡಿದ್ದು, ಅಲ್ಲಿ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿದ್ದೇನೆ. ಕೇಂದ್ರದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರಿಗೆ ಬಂದು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಸಮೀಕ್ಷೆ ನಡೆಸಿದರು. ಅದರ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ಮಾಡಿದ್ದೇವೆ.
ನಿರ್ಧಿಷ್ಠ ಸ್ಥಳವನ್ನು ಗುರುತಿಸಿದರೆ, ಮುಖ್ಯಮಂತ್ರಿ ಅವರ ಜೊತೆ ಚರ್ಚೆ ಮಾಡಿ ಮುಂದಿನ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದ್ದೇನೆ. ಹಾಗೆಯೇ ಮೈಸೂರು, ವಿಜಯಪುರ, ಶಿವಮೊಗ್ಗ, ಹಾಸನ, ಕಲಬುರಗಿ ವಿಮಾನ ನಿಲ್ದಾಣಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಶಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಜಾತಿ ಜನಗಣತಿಯ ಬಗ್ಗೆ ಬಿಜೆಪಿ ಅವರು ದ್ವಿಮುಖ ನಿಲುವು ಅನುಸರಿಸುತ್ತಿದ್ದಾರೆ. ಈ ಹಿಂದೆ ನಡೆದಿದ್ದ ಸಮೀಕ್ಷೆಯನ್ನು ಕೈಬಿಡಬೇಕು. ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಬಿಜೆಪಿ ಅವರು ಅಗ್ರಹಿಸಿದರು. ಈಗ ಹೊಸ ಸಮೀಕ್ಷೆ ನಡೆಸಲು ಮುಂದಾದರೆ ಅದನ್ನು ವಿರೋಧಿಸುತ್ತಿದ್ದಾರೆ. ಈ ದಂಧ್ವ ನೀತಿಯನ್ನು ಕೈ ಬಿಡಬೇಕು ಎಂದರು.
ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಆಣೆಕಟ್ಟೆ ನಿರ್ಮಾಣಕ್ಕೆ ಸಂಬಂಧ ಪಟ್ಟಂತೆ ಕೇಂದ್ರ ಸರ್ಕಾರ ಈಗಾಗಲೇ ಔಪಚಾರಿಕ ಅನುಮತಿ ನೀಡಿತ್ತು.ಗೋವಾದ ತಕರಾರು ಸರಿಯಲ್ಲ. ಕೇಂದ್ರ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆ. ಇದನ್ನು ದುರುಪಯೋಗ ಪಡಿಸಿಕೊಂಡು ಯೋಜನೆಗೆ ಅಡ್ಡಿಪಡಿಸಲಾಗಿದೆ. ರಾಜ್ಯದಿಂದ ಕೇಂದ್ರದಲ್ಲಿ ಸಚಿವರಾಗಿರುವವರು, ಸಂಸದರು ರಾಜ್ಯದ ಪರವಾಗಿ ಧ್ವನಿ ಎತ್ತಬೇಕು ಸರ್ವಪಕ್ಷ ಸಭೆಯ ಬಗ್ಗೆ ಉಪಮುಖ್ಯಮಂತ್ರಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
- ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ 15 “ಸುಪ್ರೀಂ” ಮಾರ್ಗಸೂಚಿ ಬಿಡುಗಡೆ
- ಚುನಾವಣಾ ಅಕ್ರಮ : ಕಾಂಗ್ರೆಸ್ ನಾಯಕರ ಆರೋಪಗಳಿಗೆ ಡಿ.ಕೆ.ಸುರೇಶ್ ಸಹಮತಿ
- ಎನ್ಡಿಎ ಸರ್ಕಾರದಿಂದ ಚುನಾವಣಾ ಆಯೋಗ ದುರುಪಯೋಗದ ವಿರುದ್ಧ ದೇಶಾದ್ಯಂತ ಅಭಿಯಾನ : ಸಿದ್ದರಾಮಯ್ಯ
- ಬೆಂಗಳೂರು : ಜ್ಯುವೆಲರಿ ಅಂಗಡಿಯಲ್ಲಿ ಪಿಸ್ತೂಲ್ನಿಂದ ಬೆದರಿಸಿ ಚಿನ್ನಾಭರಣ ಲೂಟಿ
- ತನ್ನ ಪತ್ನಿ ಹಾಗೂ ಅಳಿಯನ ಎದುರಲ್ಲೇ ಕತ್ತು ಕುಯ್ದುಕೊಂಡು ಪತಿ ಆತ್ಮಹತ್ಯೆ