Sunday, July 27, 2025
Homeಅಂತಾರಾಷ್ಟ್ರೀಯ | Internationalಥೈಲ್ಯಾಂಡ್- ಕಾಂಬೋಡಿಯಾ ನಡುವೆ ಕದನ ವಿರಾಮ

ಥೈಲ್ಯಾಂಡ್- ಕಾಂಬೋಡಿಯಾ ನಡುವೆ ಕದನ ವಿರಾಮ

Ceasefire between Thailand and Cambodia

ವಿಶ್ವಸಂಸ್ಥೆ, ಜು.26- ಥೈಲ್ಯಾಂಡ್ ಜೊತೆ ನಡೆಯುತ್ತಿದ್ದ ಸಂಘರ್ಷದ ಕದನ ವಿರಾಮಕ್ಕೆ ಕಾಂಬೋಡಿಯಾ ಒಪ್ಪಿಗೆ ಸೂಚಿಸಿದೆ ಎಂದು ವಿಶ್ವಸಂಸ್ಥೆಯ ಕಾಂಬೋಡಿಯಾ ರಾಯಭಾರಿ ಹೇಳಿದ್ದಾರೆ.

ನೆರೆಹೊರೆಯ ರಾಷ್ಟ್ರಗಳ ನಡುವಿನ ಎರಡು ದಿನಗಳ ಪರಸ್ಪರ ದಾಳಿಯ ಬಳಿಕ ಬ್ಯಾಂಕಾಕ್ ಕೂಡ ಮಾತು ಕತೆಗೆ ಸಹಮತ ವ್ಯಕ್ತಪಡಿಸಿದೆ.ದೀರ್ಘಕಾಲದ ಗಡಿ ವಿವಾದದ ಹಿನ್ನೆಲೆಯಲ್ಲಿ ಗುರುವಾರ ಜೆಟ್‌ಗಳು, ಟ್ಯಾಂಕರ್ ಮತ್ತು ಭೂ ಸೇನಾಪಡೆಗಳೊಂದಿಗೆ ಕಾಂಬೋಡಿಯಾ-ಥೈಲ್ಯಾಂಡ್ ದೇಶಗಳು ತೀವ್ರ ದಾಳಿ ಆರಂಭಿಸಿದ್ದವು.

ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ನಡೆಸಿತ್ತು. ಕಾಂಬೋಡಿಯಾ ಬೇಷರತ್ತಾಗಿ ತಕ್ಷಣದ ಕದನ ವಿರಾಮಕ್ಕೆ ಆಗ್ರಹಿಸಿದೆ. ನಾವು ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡುತ್ತೇವೆ ಎಂದು ಕೌನ್ಸಿಲ್‌ನ ರಹಸ್ಯ ಸಭೆ ಬಳಿಕ ವಿಶ್ವ ಸಂಸ್ಥೆಯ ರಾಯಭಾರಿ ಛಿಯಾ-ಕಿಯಾ ಹೇಳಿದರು.

ಈ ಸಭೆಯಲ್ಲಿ ಕಾಂಬೋಡಿಯಾ-ಥೈಲಾಂಡ್‌ನ ಪ್ರತಿನಿಗಳು ಭಾಗವಹಿಸಿದ್ದರು. ನಿನ್ನೆ ಕೂಡ ಎರಡು ದೇಶಗಳ ಗಡಿಯಲ್ಲಿ ಫಿರಂಗಿ ದಾಳಿಯ ಸದ್ದು ಕೇಳಿ ಬಂದಿತು. ವೃದ್ದರೊಬ್ಬರು ಸಾವನ್ನಪ್ಪಿ, ಐವರು ಗಾಯಗೊಂಡಿದ್ದರು. ಯುದ್ಧ ಭೀತಿಯ ಹಿನ್ನೆಲೆಯಲ್ಲಿ ಥೈಲ್ಯಾಂಡ್ ಗಡಿ ಪ್ರದೇಶದಲ್ಲಿ 1,38,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಥೈಲ್ಯಾಂಡ್‌ನಲ್ಲಿ 14 ನಾಗರಿಕರು, ಒಬ್ಬ ಸೈನಿಕ ಸೇರಿದಂತೆ 15 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಬೆಳಗಿನ ಜಾವ ಹಲವು ಕಡೆಗಳಲ್ಲಿ ಮತ್ತೆ ಹೋರಾಟ ಆರಂಭವಾಗಿತ್ತು. ಪ್ರಸ್ತುತ ಕದನ ವಿರಾಮಕ್ಕೆ ಕಾಂಬೋಡಿಯಾ ಒಪ್ಪಿಗೆ ಸೂಚಿಸಿದೆ.

ಭಾರತೀಯರಿಗೆ ಎಚ್ಚರಿಕೆ:
ಉಭಯ ದೇಶಗಳ ಸೈನಿಕರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾರತ ನಿನ್ನೆ ಥೈಲ್ಯಾಂಡ್‌ನಲ್ಲಿರುವ ತನ್ನನಾಗರಿಕರಿಗೆ ಎಚ್ಚರಿಕೆ ನೀಡಿ, 7 ಪ್ರಾಂತ್ಯಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಸೂಚಿಸಿದೆ. ಥಾಯ್ ರಾಜಧಾನಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ಎಲ್ಲಾ ಭಾರತೀಯ ಪ್ರಯಾಣಿಕರು ತೊಂದರೆಗೊಳಗಾದ ಪ್ರದೇಶಗಳಲ್ಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಮುನ್ನ ದೇಶದ ಅಕಾರಿಗಳಿಂದ ಮಾಹಿತಿ ಪಡೆಯುವಂತೆ ಸೂಚಿಸಿದೆ.

RELATED ARTICLES

Latest News