ಬೆಳಗಾವಿ,ಜು.26- ತನ್ನ ಪತ್ನಿ ಹಾಗೂ ಅಳಿಯನ ಎದುರಲ್ಲೇ ಕತ್ತು ಕೊಯ್ದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಇಂದು ನಡೆದಿದೆ.
ಮಲ್ಲಪ್ಪ ಕಟಬುಗೋಳ(34) ತನ್ನ ಕತ್ತನ್ನು ತಾನೇ ಕೊಯ್ದುಕೊಂಡು ಆತಹತ್ಯೆ ಮಾಡಿಕೊಂಡವನು.
ನಿನ್ನೆಯಷ್ಟೇ ಮನೆಯಲ್ಲಿದ್ದ ಅಕ್ಕಿ ಮಾರಿ ಸಾರಾಯಿ ಕುಡಿದು ಬಂದು ಗಂಡ ಗಲಾಟೆ ಮಾಡಿದ್ದ ಎನ್ನಲಾಗಿದೆ. ರಾತ್ರಿಯಿಡೀ ಹೆಂಡತಿ ರೇಖಾ ಜೊತೆಗೆ ಗಲಾಟೆ ಮಾಡಿ ಹಲ್ಲೆ ಸಹ ಮಾಡಿದ್ದಾನೆ. ಸಹೋದರನನ್ನು ಕರೆಸಿ ಪತ್ನಿ ಬುದ್ದಿ ಹೇಳಿಸಿದ್ದಳು. ಈ ವೇಳೆ ಅಳಿಯ ಮಲ್ಲಿಕಾರ್ಜುನ ಮಾವನ ಮೇಲೆ ಕಟ್ಟಿಗೆಯಿಂದ ಹೆದರಿಕೆ ಹುಟ್ಟಿಸಲು ಹಲ್ಲೆ ಮಾಡಿದ್ದಾನೆ ನಂತರ ಮನೆಯಲ್ಲಿದ್ದ ಕುಡಗೋಲು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ನೀನು ಸತ್ತರೆ ಅಕ್ಕ ಚೆನ್ನಾಗಿ ಇರುತ್ತಾಳೆ ಎಂದು ಅಳಿಯ ಮಲ್ಲಿಕಾರ್ಜುನ ಹೇಳಿದಾಗ ಕ್ಷಣಾರ್ಧದಲ್ಲೇ ಕತ್ತು ಕೊಯ್ದುಕೊಂಡು ತೀವ್ರ ರಕ್ತಸ್ರಾವವಾಗಿ ಮಲ್ಲಪ್ಪ ಮೃತಪಟ್ಟಿದ್ದಾನೆ. ಮಲ್ಲಪ್ಪ ಸಾಯುತ್ತಿದ್ದಂತೆ ಸ್ಥಳದಲ್ಲಿದ್ದ ಅಳಿಯ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆತಹತ್ಯೆಗೆ ಪ್ರಚೋದನೆ ಕೇಸ್ ದಾಖಲಿಸಿಕೊಂಡು ಪೊಲೀಸರ ತನಿಖೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಸ್ಥಳಾಂತರಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅಳಿಯ ಮಲ್ಲಿಕಾರ್ಜುನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
- ರಷ್ಯಾದ ಕಮ್ಚಟ್ಕಾ ಪ್ರದೇಶದ ಪೂರ್ವ ಕರಾವಳಿಯಲ್ಲಿ 7.0 ತೀವ್ರತೆಯ ಭೂಕಂಪ
- ಕುಸಿದ ಹೂವಿನ ಬೆಲೆ, ಸಂಕಷ್ಟದಲ್ಲಿ ಬೆಳೆಗಾರರು
- ರಷ್ಯಾದ ಅತಿದೊಡ್ಡ ತೈಲ ಟರ್ಮಿನಲ್ ಮೇಲೆ ಉಕ್ರೇನ್ ಡ್ರೋನ್ ದಾಳಿ
- ಗುಜರಾತ್ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಕನಿಷ್ಠ 307 ಏಷ್ಯಾಟಿಕ್ ಸಿಂಹಗಳ ಸಾವು
- ಬೆಂಗಳೂರಲ್ಲಿ ಸರಣಿ ಅಪಘಾತ : ಇಬ್ಬರ ಸಾವು