Sunday, July 27, 2025
Homeಬೆಂಗಳೂರುಬೆಂಗಳೂರು : ಜ್ಯುವೆಲರಿ ಅಂಗಡಿಯಲ್ಲಿ ಪಿಸ್ತೂಲ್‌ನಿಂದ ಬೆದರಿಸಿ ಚಿನ್ನಾಭರಣ ಲೂಟಿ

ಬೆಂಗಳೂರು : ಜ್ಯುವೆಲರಿ ಅಂಗಡಿಯಲ್ಲಿ ಪಿಸ್ತೂಲ್‌ನಿಂದ ಬೆದರಿಸಿ ಚಿನ್ನಾಭರಣ ಲೂಟಿ

Bangalore: Jewellery shop robbed of gold ornaments after threatening it with a pistol

ಬೆಂಗಳೂರು,ಜು.26- ಜ್ಯುವೆಲರಿ ಅಂಗಡಿಯ ಮಾಲೀಕನಿಗೆ ಪಿಸ್ತೂಲ್‌ನಿಂದ ಬೆದರಿಸಿ 180 ಗ್ರಾಂ ಚಿನ್ನಾಭರಣಗಳನ್ನು ದೋಚಿ ದರೋಡೆಕೋರರು ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾಚೋಹಳ್ಳಿ ಗೇಟ್‌ ಸಮೀಪದ ಭೈರವೇಶ್ವರ ಕಾಂಪ್ಲೆಕ್‌್ಸನಲ್ಲಿರುವ ರಾಮ್‌ ಜ್ಯುವೆಲರ್‌ರ‍ಸ ಅಂಗಡಿಯ ಮಾಲೀಕರು ಮೊನ್ನೆ ರಾತ್ರಿ 8.30 ರ ಸುಮಾರಿನಲ್ಲಿ ಅಂಗಡಿ ಬಾಗಿಲು ಹಾಕಲು ಚಿನ್ನಾಭರಣಗಳನ್ನು ತೆಗೆದಿಡುತ್ತಿದ್ದರು.

ಆ ಸಮಯದಲ್ಲಿ ಮೂವರು ಮುಸುಕುದಾರಿ ದರೋಡೆಕೋರರು ಅಂಗಡಿಯೊಳಗೆ ನುಗ್ಗಿ ಪಿಸ್ತೂಲಿನಿಂದ ಅವರನ್ನು ಬೆದರಿಸಿ 180 ಗ್ರಾಂ ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ತುಂಬಿಕೊಂಡಿದ್ದಾರೆ.

ದರೋಡೆಕೋರರಿಂದ ಭಯಬೀತರಾಗಿ ಜ್ಯುವೆಲರಿ ಅಂಗಡಿ ಮಾಲೀಕರು ಕಿರುಚಾಡುತ್ತಿದ್ದುದ್ದನ್ನು ಕೇಳಿ ಪಕ್ಕದ ಅಂಗಡಿಯ ಹುಡುಗರು ಬರುತ್ತಿದ್ದಂತೆ ದರೋಡೆಕೋರರು ಮಾಲೀಕ ಹಾಗೂ ಹುಡುಗರನ್ನು ತಳ್ಳಿಕೊಂಡು ಪರಾರಿಯಾಗಿದ್ದಾರೆ.ತಕ್ಷಣ ಜ್ಯುವೆಲರಿ ಅಂಗಡಿ ಮಾಲೀಕರು ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಗಡಿಯನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಂಗಡಿಯ ಸಿಸಿ ಕ್ಯಾಮೇರಾವನ್ನು ಪರಿಶೀಲಿಸಿದಾಗ ಮೂವರು ದರೋಡೆಕೋರರು ಆಟಿಕೆ ಪಿಸ್ತೂಲ್‌ ತೋರಿಸಿ ಆಭರಣ ದೋಚಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿರುವ ದರೋಡೆಕೋರರ ದೃಶ್ಯಾವಳಿ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿರುವ ಸಿಸಿ ಕ್ಯಾಮೇರಾಗಳಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ದರೋಡೆಕೋರರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.ಕಳೆದ ವರ್ಷ ಇದೇ ರೀತಿ ಬ್ಯಾಡರಹಳ್ಳಿ, ಕೋಡಿಗೆಹಳ್ಳಿ, ಕೆಆರ್‌ಪುರಂ ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲೂ ಜ್ಯುವೆಲರಿ ಅಂಗಡಿಗಳ ದರೋಡೆ ನಡೆದಿದ್ದವು.

RELATED ARTICLES

Latest News