Sunday, July 27, 2025
Homeಬೆಂಗಳೂರುಬೆಂಗಳೂರು : ಟೆಕ್ಕಿ ಮನೆಯಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಬೆಂಗಳೂರು : ಟೆಕ್ಕಿ ಮನೆಯಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Bangalore: Gold jewellery worth Rs 30 lakh stolen from techie's house

ಬೆಂಗಳೂರು,ಜು.27– ಮುಂಬಾಗಿಲ ಬೀಗ ಒಡೆದು ಸಾ್ಟ್‌ವೇರ್‌ ಎಂಜಿನಿಯರ್‌ರೊಬ್ಬರ ಮನೆಯಲ್ಲಿ ನಗದು ಸೇರಿದಂತೆ 30 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ರಾತ್ರಿ ಜ್ಞಾನಭಾರತಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಲತ್ತಳ್ಳಿಯ ಎನ್‌ಜಿಇಎ್‌‍ ಲೇ ಔಟ್‌ನಲ್ಲಿ ಸಾ್ಟ್‌ವೇರ್‌ ಎಂಜಿನಿಯರ್‌ ನಟೇಶ್‌ ಎಂಬುವವರು ವಾಸವಾಗಿದ್ದಾರೆ, ಇವರು ಮೂಲತಃ ಹಾಸನದವರು. ನಿನ್ನೆ ಮಧ್ಯಾಹ್ನ ಕಾರ್ಯನಿಮಿತ್ತ ಮನೆಗೆ ಬೀಗ ಹಾಕಿ ಇವರು ಮೈಸೂರಿಗೆ ಹೋಗಿದ್ದರು. ರಾತ್ರಿ 11.30ಕ್ಕೆ ವಾಪಸ್‌‍ ಬಂದು ನೋಡಿದಾಗ ಕಳ್ಳರು ಮನೆಯ ಮುಂಬಾಗಿಲ ಬೀಗ ಒಡೆದು ಒಳ ನುಗ್ಗಿರುವುದು ಗೊತ್ತಾಗಿದೆ.

ಒಳಗೆ ಹೋಗಿ ನೋಡಿದಾಗ ಕಳ್ಳರು ಬೀರುವಿನ ಬೀಗ ಒಡೆದು ಅದರಲ್ಲಿದ್ದ ಮೂರು ಲಕ್ಷ ರೂ. ನಗದು ಹಾಗೂ 300 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವುದು ಕಂಡುಬಂದಿದೆ.
ತಕ್ಷಣ ಅವರು ಜ್ಞಾನ ಭಾರತಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

RELATED ARTICLES

Latest News