ವಾಷಿಂಗ್ಟನ್,ಜು.27– ಅಮೆರಿಕದಲ್ಲಿ ಯುವಕನೋರ್ವ ಮಿಚಿಗನ್ ರಾಜ್ಯದ ಟ್ರಾವರ್ಸ್ ಸಿಟಿಯ ವಾಲಾರ್ಟ್ ಮಾಲ್‌ನ ಹೊರಗೆ ಕನಿಷ್ಠ 11 ಜನರಿಗೆ ಇರಿದಿದ್ದು, 11 ಗಾಯಾಳುಗಳ ಪೈಕಿ ಆರು ಜನರ ಸ್ಥಿತಿ ಗಂಭೀರವಾಗಿದೆ.
ಉತ್ತರ ಮಿಚಿಗನ್‌ನಲ್ಲಿರುವ ಪ್ರದೇಶದ ಅತಿದೊಡ್ಡ ಆಸ್ಪತ್ರೆಯಲ್ಲಿ 11 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುನ್ಸನ್ ಹೆಲ್ತ್‌ಕೇರ್ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದೆ. ವಕ್ತಾರೆ ಮೇಗನ್ ಬ್ರೌನ್ ಅವರೆಲ್ಲರೂ ಇರಿತಕ್ಕೆ ಒಳಗಾದ ಬಲಿಪಶುಗಳೆಂದು ಹೇಳಿದ್ದಾರೆ.ಅಧಿಕಾರಿಗಳು ಒಬ್ಬ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ.
ಉತ್ತರ ಮಿಚಿಗನ್‌ನ ಅತಿದೊಡ್ಡ ಆರೋಗ್ಯ ರಕ್ಷಣಾ ವ್ಯವಸ್ಥೆಯಾದ ಮುನ್ಸನ್ ಹೆಲ್ತ್‌ಕೇರ್‌ಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು 11 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಓರ್ವ ಶಂಕಿತನನ್ನು ಬಂಧಿಸಲಾಗಿದೆ ಎಂದು ಗ್ರ್ಯಾಂಡ್ ಟ್ರಾವರ್ಸ್ ಕೌಂಟಿ ಶೆರಿಫ್ ಮೈಕೆಲ್ ಶಿಯಾ ವರದಿಗಾರರಿಗೆ ತಿಳಿಸಿದರು.
ಘಟನೆಯ ನಂತರ ಅಂಗಡಿಯ ಹೊರಗೆ ತುರ್ತು ವಾಹನಗಳು ಮತ್ತು ಸಮವಸ್ತ್ರ ಧರಿಸಿದ ವ್ಯಕ್ತಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯ ನೀಡುವುದು ಕಂಡುಬಂದಿ ಟ್ರಾವರ್ಸ್ ಸಿಟಿಯಿಂದ ಸುಮಾರು 25 ಮೈಲುಗಳಷ್ಟು ದೂರದಲ್ಲಿರುವ ಹಾನರ್‌ನಲ್ಲಿ ವಾಸಿಸುವ 36 ವರ್ಷದ ಟಿಫಾನಿ ಡಿಫೆಲ್, ತನ್ನ ಸುತ್ತಲೂ ಅವ್ಯವಸ್ಥೆ ಭುಗಿಲೆದ್ದಿರುವುದನ್ನು ನೋಡಿದಾಗ ತಾನು ಪಾರ್ಕಿಂಗ್ ಸ್ಥಳದಲ್ಲಿದ್ದೆ ಎಂದು ಹೇಳುತ್ತಾರೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಕೆಂಪುಶರ್ಟ್ ಧರಿಸಿದ ವ್ಯಕ್ತಿ ವಾಲಾರ್ಟ್‌ನಲ್ಲಿ ಜನರಿಗೆ ಚಾಕುವಿನಿಂದ ಇರಿಯುತ್ತಿರುವ ದೃಶ್ಯ ಕಂಡು ಬಂದಿದೆ.
ತಕ್ಷಣ ಅಲ್ಲೇ ಇದ್ದ ವ್ಯಕ್ತಿಯೋರ್ವ ತಕ್ಷಣ ಅವನನ್ನು ಹೊಡೆದು ಕೈಯಲ್ಲಿದ್ದ ಚಾಕುವನ್ನು ಕಿತ್ತೆಸೆದ. ಅಲ್ಲದೇ ಆತನನ್ನು ಚೆನ್ನಾಗಿ ಥಳಿಸಿದ. ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆತನೋರ್ವ ವಿದೇಶಿ ಯುವಕ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಆ ದೃಶ್ಯ ನಿಜವಾಗಿಯೂ ಭಯಾನಕವಾಗಿತ್ತು. ನಾನು ಮತ್ತು ನನ್ನ ಸಹೋದರಿ ಭಯಭೀತರಾಗಿದ್ದೆವು ಎಂದು ಅವರು ಹೇಳಿದರು.
ತನಿಖೆಯಲ್ಲಿ ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮುಂದುವರಿಸುವುದಾಗಿ ವಾಲಾರ್ಟ್ ಹೇಳಿಕೆಯಲ್ಲಿ ತಿಳಿಸಿದೆ. ಟ್ರಾವರ್ಸ್ ಸಿಟಿ ಮಿಚಿಗನ್ ಸರೋವರದ ಕರಾವಳಿಯಲ್ಲಿ ಜನಪ್ರಿಯ ರಜಾ ತಾಣವಾಗಿದೆ. ಇದು ಚೆರ್ರಿ ಉತ್ಸವ, ವೈನರಿಗಳು ಮತ್ತು ಲೈಟ್‌ಹೌಸ್‌ಗಳಿಗೆ ಹೆಸರುವಾಸಿಯಾಗಿದೆ ಮತ್ತು ಸ್ಲೀಪಿಂಗ್ ಬೇರ್ ಡ್ಯೂನ್‌್ಸ ನ್ಯಾಷನಲ್ ಲೇಕ್‌ಶೋರ್‌ನಿಂದ ಪೂರ್ವಕ್ಕೆ ಸುಮಾರು 25 ಮೈಲಿ (40 ಕಿಲೋಮೀಟರ್) ದೂರದಲ್ಲಿದೆ.
- ಬೆಂಗಳೂರು : ಟೆಕ್ಕಿ ಮನೆಯಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
- ಕುಡುಕ ಗಂಡನ ಕಾಟ ಮತ್ತು ಬಡತನಕ್ಕೆ ಬೇಸತ್ತು ಮೂವರು ಹೆಣ್ಣು ಮಕ್ಕಳಿಗೆ ವಿಷವಿಟ್ಟು ಕೊಂದ ತಾಯಿ
- SHOCKING : ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಕೋಟ್ಯಂತರ ರೂ. ಬೆಲೆಯ ಮಾದಕ ವಸ್ತು ವಶ
- ಅಮೆರಿಕದಲ್ಲಿ 11 ಮಂದಿಗೆ ಇರಿದ ಯುವಕ, 6 ಜನರ ಸ್ಥಿತಿ ಗಂಭೀರ
- ರಾಜ್ಯದಲ್ಲಿ ಗೊಬ್ಬರ ಅಭಾವ : ನಾಳೆಯಿಂದ ಬಿಜೆಪಿ ಹೋರಾಟ