Sunday, July 27, 2025
Homeರಾಷ್ಟ್ರೀಯ | Nationalಕುಡುಕ ಗಂಡನ ಕಾಟ ಮತ್ತು ಬಡತನಕ್ಕೆ ಬೇಸತ್ತು ಮೂವರು ಹೆಣ್ಣು ಮಕ್ಕಳಿಗೆ ವಿಷವಿಟ್ಟು ಕೊಂದ ತಾಯಿ

ಕುಡುಕ ಗಂಡನ ಕಾಟ ಮತ್ತು ಬಡತನಕ್ಕೆ ಬೇಸತ್ತು ಮೂವರು ಹೆಣ್ಣು ಮಕ್ಕಳಿಗೆ ವಿಷವಿಟ್ಟು ಕೊಂದ ತಾಯಿ

Fed Up Of Husband's Drinking Habits, Thane Woman Poisons 3 Daughters To Death

ಥಾಣೆ,ಜು.27- ಕೌಟುಂಬಿಕ ಸಮಸ್ಯೆಗಳಿಂದ ನೊಂದ ಮಹಿಳೆ ತಾನು ಹೆತ್ತ ಮೂವರು ಹೆಣ್ಣು ಮಕ್ಕಳಿಗೆ ವಿಷಪ್ರಾಶನ ಮಾಡಿ ಕೊಲೆ ಮಾಡಿರುವ ಘಟನೆ ನಗರದ ಶಹಾಪುರ ಪ್ರದೇಶದ ಅಸ್ನೋಲಿ ಗ್ರಾಮದಲ್ಲಿ ನಡೆದಿದೆ.

ಸಂಧ್ಯಾ ಸಂದೀಪ್‌ ಬೆರೆ(27) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಹಾರದಲ್ಲಿ ಕೀಟನಾಶಕವನ್ನು ಬೆರೆಸಿ ತನ್ನ 5, 8 ಮತ್ತು 10 ವರ್ಷದ ಹೆಣ್ಣುಮಕ್ಕಳಿಗೆ ತಿನ್ನಿಸಿದ್ದಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಕ್ಕಳಿಗೆ ವಾಂತಿ ಮತ್ತು ತಲೆತಿರುಗುವಿಕೆ ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅವರ ಸ್ಥಿತಿ ಹದಗೆಟ್ಟಂತೆ, ಅವರಲ್ಲಿ ಇಬ್ಬರು ನಂತರ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಜುಲೈ 24 ಮತ್ತು ಜುಲೈ 25 ರಂದು ನಿಧನರಾದರು. ಮತ್ತೊಬ್ಬ ಬಾಲಕಿಯನ್ನು ನಾಸಿಕ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಅಲ್ಲಿ ಅವರು ಜುಲೈ 24 ರಂದು ಸಾವನ್ನಪ್ಪಿದರು ಎಂದು ಅಧಿಕಾರಿ ತಿಳಿಸಿದ್ದಾರೆ. ಆರಂಭದಲ್ಲಿ, ಖಿನವ್‌ಲಿ ಪೊಲೀಸರು ಆಕಸಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದರು.ಆದಾಗ್ಯೂ, ಕಳೆದ ರಾತ್ರಿ ಶವಪರೀಕ್ಷೆ ವರದಿಯಲ್ಲಿ ಮಕ್ಕಳ ದೇಹದಲ್ಲಿ ವಿಷದ ಅಂಶ ಇರುವುದನ್ನು ದೃಢಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಣಾಯಕ ಸಾಕ್ಷ್ಯಗಳ ಆಧಾರದ ಮೇಲೆ ತ್ವರಿತ ಕಾರ್ಯನಿರ್ವಹಿಸಿ ಪೊಲೀಸರು ಮಕ್ಕಳ ತಾಯಿಯನ್ನುಇಂದು ಮುಂಜಾನೆ 2 ಗಂಟೆ ಸುಮಾರಿಗೆ ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿತೆಗೆ ತನ್ನ ಗಂಡನ ಮದ್ಯಪಾನ ಚಟ ಸೇರಿದಂತೆ ಕೌಟುಂಬಿಕ ಸಮಸ್ಯೆಕಾಡಿತ್ತು ಇದರಿಂದ ಅವಳು ತನ್ನ ಗಂಡನಿಂದ ಬೇರ್ಪಟ್ಟಿದ್ದಳು ಮತ್ತು ತನ್ನ ಮೂವರು ಹೆಣ್ಣುಮಕ್ಕಳನ್ನು ನೋಡಿಕೊಳ್ಳಲು ಹೆಣಗಾಡುತ್ತಿದ್ದಳು ಎಂದು ಅವರು ಹೇಳಿದರು.

ಆಕೆಯನ್ನು ವಿಚಾರಣೆಗಾಗಿ ಆರಂಭದಲ್ಲಿ ವಶಕ್ಕೆ ಪಡೆಯಲಾಯಿತು ಮತ್ತು ಶವಪರೀಕ್ಷೆಯ ವರದಿಗಳು ಬಂದ ನಂತರ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

RELATED ARTICLES

Latest News