Monday, July 28, 2025
Homeರಾಷ್ಟ್ರೀಯ | Nationalಬಿಹಾರ ವಿಧಾನಸಭೆ ಚುನಾವಣೆ : ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ ಮತದಾರರ ಪಟ್ಟಿ ಪರಿಷ್ಕರಣೆ

ಬಿಹಾರ ವಿಧಾನಸಭೆ ಚುನಾವಣೆ : ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ ಮತದಾರರ ಪಟ್ಟಿ ಪರಿಷ್ಕರಣೆ

Bihar Assembly Elections: Voter list revision sparks huge debate across the country

ಬೆಂಗಳೂರು,ಜು.27– ಬಿಹಾರ ರಾಜ್ಯದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ತೆಗೆದು ಹಾಕಿರುವ ವಿಚಾರ ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಭಾರತದ ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಅಳಿಸಿ ಹಾಕಿರುವ ವಿಚಾರದ ಬಗ್ಗೆ ಆರೋಪ, ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಈ ವಿಚಾರದಲ್ಲಿ ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಚುನಾವಣಾ ಆಯೋಗ ಅನರ್ಹರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂಬ ಸಮರ್ಥನೆ ಮಾಡಿಕೊಂಡಿದೆ.

ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ವಿಚಾರದಲ್ಲಿ ತೀವ್ರ ಜಿಜ್ಞಾಸೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಏನಾಗಿತ್ತು ಎಂಬ ಮಾಹಿತಿಯನ್ನು ಅವಲೋಕಿಸಬಹುದಾಗಿದೆ.

2024ರ ಏಪ್ರಿಲ್‌ನಲ್ಲಿ ಲೋಕಸಭೆಗೆ ಚುನಾವಣೆ ನಡೆದಿತ್ತು. ಅದಕ್ಕೂ ಮುನ್ನ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಿಸಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ 5,42,54,500 ಮತದಾರರು ಇದ್ದರು. ಇವರಲ್ಲಿ 2,71,66,220 ಪುರುಷ, 2,70,83,347 ಮಹಿಳಾ ಹಾಗೂ 4,933 ತೃತೀಯ ಲಿಂಗದ ಮತದಾರರು ಇದ್ದರು.

2023ರ ವಿಧಾನಸಭೆ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ ನಂತರ 2024ರ ಲೋಕಸಭೆ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವವರೆಗೆ ರಾಜ್ಯದಲ್ಲಿ 35,02,328 ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು.

ಇದೇ ಅವಧಿಯಲ್ಲಿ 11,14,257 ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. 13,43,123 ಮತದಾರರನ್ನು ಮಾರ್ಪಡು ಮಾಡಲಾಗಿತ್ತು. ಮತದಾರರ ನೋಂದಣಿ ನಿಯಮಗಳು 1960ರ ನಿಯಮ 16ರ ಪ್ರಕಾರ ಮತದಾರರ ನೊಂದಣಾಧಿಕಾರಿಗಳು ತಮ ಕಚೇರಿಗಳ ಸೂಚನಾಫಲಕಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಕಟಿಸಿ ಆಕ್ಷೇಪಣೆಗಳನ್ನು ಸಲ್ಲಿಸಲು ಸಾಕಷ್ಟು ಪ್ರಚಾರ ನೀಡಿದ ನಂತರ ಅಂತಿಮ ಪಟ್ಟಿ ಪ್ರಕಟಿಸಲಾಗಿತ್ತು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ನಮೂನೆ 6, 6ಎ, ನಮೂನೆ 8 ಮೂಲಕ ಸ್ವೀಕಾರ ಮಾಡಿ ಮತದಾರರ ಕೋರಿಕೆಯಂತೆ ಮಾರ್ಪಡು ಮಾಡಲಾಗಿತ್ತು. ಅಂತಿಮ ಪಟ್ಟಿಯ ಪ್ರಕಾರ, ರಾಜ್ಯದಲ್ಲಿ 2,30,313 ಮಂದಿ ಮತದಾರರು ಮರಣ ಹೊಂದಿದ್ದರು. 2,19,303 ಮತದಾರರು ಸ್ಥಳಾಂತರಗೊಂಡಿದ್ದರೆ, 94,781 ಮತದಾರರು ಗೈರು ಹಾಜರಾಗಿದ್ದರು.

ಅಲ್ಲದೆ 1,25,053 ಮತದಾರರ ಹೆಸರುಗಳು ಪುನರಾವರ್ತಿತವಾಗಿದ್ದವು. ಇತರೆ 3,007 ಮತದಾರರು ಸೇರಿದಂತೆ ಒಟ್ಟು 6,72,452 ಮತದಾರರನ್ನು ವರ್ಗೀಕರಿಸಲಾಗಿತ್ತು. 4,72,263 ಮಾರ್ಪಡಾದ ಮತದಾರರ ಪಟ್ಟಿಯಲ್ಲಿ 87,571 ಮತದಾರರು ವಲಸೆ ಹೋಗಿದ್ದರು. 3,70,671 ಮತದಾರರು ತಿದ್ದುಪಡಿ ಮಾಡಿಕೊಂಡಿದ್ದರು.

ವಯಸ್ಸನ್ನು 95 ಮಂದಿ, ವಿಳಾಸವನ್ನು 86,910, ಸಂಬಂಧಿಯ ತಿದ್ದುಪಡಿಯನ್ನು 93,808 ಹಾಗೂ ಸಂಬಂಧದ ತಿದ್ದುಪಡಿಯನ್ನು 32,056 ಮಂದಿ ಮತದಾರರು ತಿದ್ದುಪಡಿ ಮಾಡಿಕೊಂಡಿದ್ದರು.

1,85,456 ಮಂದಿ ಭಾವಚಿತ್ರ, 1,58,385 ಮಂದಿ ಹೆಸರು, 1,71,713 ಮೊಬೈಲ್‌ ಸಂಖ್ಯೆ, 3,533 ಲಿಂಗ, 1,22,500 ಮಂದಿ ಜನ ದಿನಾಂಕ, 28,294 ಮಂದಿ ಬದಲಿ ಮತದಾರರ ಗುರುತಿನಚೀಟಿ ಹಾಗೂ 8,044 ಮಂದಿ ವಿಕಲಚೇತನ ಮತದಾರರನ್ನು ಗುರುತಿಸಲು ತಿದ್ದುಪಡಿ ಮಾಡಿಕೊಂಡಿದ್ದರು.

RELATED ARTICLES

Latest News