ಲುಧಿಯಾನ,ಜು.28– ಪಿಕಪ್ ವಾಹನವು ಕಾಲುವೆಗೆ ಉರಳಿ ನಾಲ್ವರು ಸಾವನ್ನಪ್ಪಿರುವ ಘಟನೆ ಪಂಜಾಬ್‌ನ ಲುಧಿಯಾನ ಜಿಲ್ಲೆಯ ಜಾಗೇರಾ ಸೇತುವೆ ಬಳಿ ನಡೆದಿದೆ.ಹಿಮಾಚಲ ಪ್ರದೇಶದ ಮಾತಾ ನೈನಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ಸುಮಾರು 25 ಭಕ್ತರ ಗುಂಪು ವಾಪಸಾಗುವ ವೇಳೆ ರಾತ್ರಿ ಸಿರ್ಹಿಂದ್ ಕಾಲುವೆಗೆ ಬಿದ್ದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ.ಕಾಲುವೆಯ ದಂಡೆಯಲ್ಲಿ ಮತ್ತೊಂದು ವಾಹನವನ್ನು ಹಿಂದಿಕ್ಕುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿದೆ ಉಪ ಪೊಲೀಸ್ ಆಯುಕ್ತ ಹಿಮಾಂಶು ಜೈನ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜ್ಯೋತಿ ಯಾದವ್ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.
ಹೆಚ್ಚಿನ ಭಕ್ತರನ್ನು ರಕ್ಷಿಸಲಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಆದಾಗ್ಯೂ, ಅಧಿಕಾರಿಗಳ ಪ್ರಕಾರ, ಮೂವರು ಇನ್ನೂ ನಾಪತ್ತೆಯಾಗಿದ್ದಾರೆ.
ಈವರೆಗೆ ನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
- ಜಾತಿ, ಅಪರಾಧ, ಭ್ರಷ್ಟಾಚಾರ ಸಮಾಜದ ಪಿಡುಗು : ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್
- ಬದಲಾಗುತ್ತಿದೆ ದೇಶದ ಜನಸಂಖ್ಯಾಶಾಸ್ತ್ರ : ಪ್ರಧಾನಿ ಮೋದಿ ಕಳವಳ
- ಲಂಡನ್ನಲ್ಲಿ ವಲಸಿಗರ ವಿರುದ್ಧ ರೊಚ್ಚಿಗೆದ್ದ ಬೃಹತ್ ಬಲಪಂಥೀಯರು, ಬೃಹತ್ ಪ್ರತಿಭಟನೆ
- ಪಾನಿಪುರಿ ತಿನ್ನಲು ಹೋಗಿ ಪ್ರಾಣ ಕಳೆದುಕೊಂಡ..!
- ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ನೂಪುರ್ಗೆ ಬೆಳ್ಳಿ, ಪೂಜಾಗೆ ಕಂಚಿನ ಪದಕ ಜೈಸಿನ್ಗೆ ಚಿನ್ನ