ಬೆಂಗಳೂರು,ಜು.28- ನಗರದಲ್ಲಿ ರಾತ್ರಿಯಿಂದೀಚೆಗೆ ಎರಡು ಕಡೆ ಮೊಬೈಲ್ ಅಪಹರಣ ಪ್ರಕರಣಗಳು ನಡೆದಿವೆ.ಸುದ್ದಗುಂಟೆಪಾಳ್ಯ:ತಮಿಳುನಾಡಿನಿಂದ ನಗರಕ್ಕೆ ಬಂದಿದ್ದ ಡಿಪ್ಲೋಮ ವಿದ್ಯಾರ್ಥಿ ಹರೀಶ್ ಎಂಬುವವರು ಇಂದು ಬೆಳಗಿನ ಜಾವ 5 ಗಂಟೆ ಸುಮಾರಿನಲ್ಲಿ ಭಾರತಿನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದರು.
ಅವರನ್ನು ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಅಡ್ಡಗಟ್ಟಿ ಹೆದರಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.ಈ ಬಗ್ಗೆ ಹರೀಶ್ ಅವರು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಲಾಸಿಪಾಳ್ಯ:ವ್ಯಕ್ತಿಯೊಬ್ಬರು ರಸ್ತೆ ಬದಿ ನಿಂತುಕೊಂಡು ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ದರೋಡೆಕೋರ ಅವರ ಕೈಯಿಂದ ಮೊಬೈಲ್ ಎಗರಿಸಿಕೊಂಡು ಪರಾರಿಯಾಗಿದ್ದಾನೆ.
ವೈಟ್‌ಫೀಲ್‌್ಡ ನಿವಾಸಿ ಸುರೇಶ್ ಎಂಬುವವರು ರಾತ್ರಿ 11.45 ರಲ್ಲಿ ಲಾಲ್‌ಬಾಗ್ ಬಳಿ ರಸ್ತೆ ಬದಿ ನಿಂತುಕೊಂಡು ಕ್ಯಾಬ್ ಬುಕ್ ಮಾಡುತ್ತಿದ್ದರು.ಆ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಬೈಕ್‌ನಲ್ಲಿ ಬಂದ ದರೋಡೆಕೋರ ಸುರೇಶ್ ಅವರ ಕೈಯಲ್ಲಿದ್ದ ಮೊಬೈಲ್ ಎಗರಿಸಿಕೊಂಡು ಪರಾರಿಯಾಗಿದ್ದಾನೆ.
ಸಹಾಯಕ್ಕಾಗಿ ಕೂಗಿಕೊಂಡರಾದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಅವರು ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಈ ಎರಡು ಪ್ರಕರಣಗಳನ್ನು ಆಯಾಯ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
- ಜಾತಿ, ಅಪರಾಧ, ಭ್ರಷ್ಟಾಚಾರ ಸಮಾಜದ ಪಿಡುಗು : ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್
- ಬದಲಾಗುತ್ತಿದೆ ದೇಶದ ಜನಸಂಖ್ಯಾಶಾಸ್ತ್ರ : ಪ್ರಧಾನಿ ಮೋದಿ ಕಳವಳ
- ಲಂಡನ್ನಲ್ಲಿ ವಲಸಿಗರ ವಿರುದ್ಧ ರೊಚ್ಚಿಗೆದ್ದ ಬೃಹತ್ ಬಲಪಂಥೀಯರು, ಬೃಹತ್ ಪ್ರತಿಭಟನೆ
- ಪಾನಿಪುರಿ ತಿನ್ನಲು ಹೋಗಿ ಪ್ರಾಣ ಕಳೆದುಕೊಂಡ..!
- ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ನೂಪುರ್ಗೆ ಬೆಳ್ಳಿ, ಪೂಜಾಗೆ ಕಂಚಿನ ಪದಕ ಜೈಸಿನ್ಗೆ ಚಿನ್ನ