ಮೈಸೂರು,ಜು.28- ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾದ ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಗರ ಪೊಲೀಸರು ನಗರದಾದ್ಯಂತ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸ್ ಕಮಿಷನರ್ ಸೀಮಾ ಅವರು ಖುದ್ದಾಗಿ ಫೀಲ್ಡ್ ಗೆ ಇಳಿದಿದ್ದು, ಕಳೆದ ರಾತ್ರಿ ಮಂಡಿ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ
ನಡೆಸಿದ ವೇಳೆ 26 ಮಂದಿ ಗಾಂಜಾ ಸೇವಿಸಿದವರು ಪತ್ತೆಯಾಗಿದ್ದಾರೆ. ಇದೇ ವೇಳೆ ಒಬ್ಬ ಮಾರಾಟಗಾರನನ್ನು ವಶಕ್ಕೆ ಪಡೆದಿದ್ದಾರೆ.ಉದಯಗಿರಿ, ಎನ್ ಆರ್ ಮೊಹಲ್ಲಾ, ನಜರ್ ಬಾದ್, ಕೆ ಆರ್ ಮೊಹಲ್ಲಾ,ಮಂಡಿ ಮೊಹಲ್ಲಾ ಸೇರಿದಂತೆ ನಗರದ ಹಲವು ಕಡೆ ಏಕಕಾಲಕ್ಕೆ ಡಿಸಿಪಿಗಳು, ಎಸಿಪಿಗಳು, ಇನ್‌್ಸಪೆಕ್ಟರ್, ಸಬ್ ಇನ್‌್ಸಪೆಕ್ಟರ್ ತಂಡಗಳು ಕಾರ್ಯಾಚರಣೆ ನಡೆಸಿವೆ.
ಈ ತಂಡಗಳು ಏಕಕಾಲಕ್ಕೆ ನಗರದ 59 ಗೋದಾಮುಗಳು, ಹಾಸ್ಟೆಲ್‌ಗಳು ಸೇರಿ ಹಲವು ಕಡೆ ತಪಾಸಣೆ ಮಾಡಿವೆ. ಈ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ 35 ಜನರ ವಿಚಾರಣೆ ನಡೆಸಿದ್ದಾರೆ.
ಅಮಾನತು:ಡ್ರಗ್ಸ್ ಘಟಕ ಪತ್ತೆಯಾದ ನಡುವೆಯೇ ಎನ್.ಆರ್.ಪೊಲೀಸ್ ಠಾಣೆಯ ಇನ್‌್ಸಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅವರನ್ನು ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ.ಸ್ಥಳಕ್ಕೆ ಸಿಸಿಬಿಯಲ್ಲಿದ್ದ ಪೊಲೀಸ್ ನಿರೀಕ್ಷಕರಾದ ಶಬ್ಬೀರ್ ಹುಸೇನ್ ರವರನ್ನು ಪ್ರಭಾರ ಆಗಿ ನೇಮಕ ಮಾಡಲಾಗಿದೆ.
- BIG BREAKING : ಹಾಸನದಲ್ಲಿ ಘೋರ ದುರಂತ, ಗಣೇಶ ಮೂರ್ತಿ ಮೆರವಣಿಗೆ ವೇಳೆ ಟ್ರಕ್ ಹರಿದು 8 ಮಂದಿ ಸಾವು..!
- ವಾರಣಾಸಿ, ಅಯೋಧ್ಯ, ತಿರುಪತಿ ಸೇರಿ ಯಾತ್ರಾ ಸ್ಥಳಗಳಿಗೆ ಬುಕ್ಕಿಂಗ್ ಪ್ರಮಾಣ ಹೆಚ್ಚಳ
- 2 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಜವಳಿ ನೀತಿ ರಚನೆ : ಸಚಿವ ಶಿವಾನಂದ ಪಾಟೀಲ
- ಉಪರಾಷ್ಟ್ರಪತಿ ರಾಧಾಕೃಷ್ಣನ್ ಪ್ರಮಾಣ ವಚನ ಸಂದರ್ಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಧನ್ಕರ್
- ಮದ್ಯದ ಅಮಲಿನಲ್ಲಿ ಪತ್ನಿಯನ್ನು ಇರಿದು ಕೊಂದ ಪತಿ