ದೊಡ್ಡಬಳ್ಳಾಪುರ,ಜು.29- ದಾಳಿಗೆ ಬಂದ ಚಿರತೆ ಸಾಕು ನಾಯಿಗಳ ಆರ್ಭಟಕ್ಕೆ ಬೆದರಿ ಪರಾರಿಯಾಗಿರುವ ಘಟನೆ ತಾಲೂಕಿನ ಮಾಕಳಿ ಬಳಿ ನಡೆದಿದೆ.ಬೆಂಗಳೂರು ಮೂಲದ ಸುರೇಂದ್ರ ಎನ್ನುವವರಿಗೆ ಸೇರಿದ ತೋಟದಲ್ಲಿರುವ ಸಾಕು ನಾಯಿಗಳ ಮೇಲೆ ಚಿರತೆ ದಾಳಿ ನಡೆಸಲು ಪದೇ ಪದೇ ಪ್ರಯತ್ನ ನಡೆಸಿದೆ. ಆದರೆ ನಾಯಿಗಳ ಆರ್ಭಟಕ್ಕೆ ಚಿರತೆಯ ದಾಳಿ ಯತ್ನ ವಿಫಲವಾಗಿದೆ.
ಈ ದೃಶ್ಯ ತೋಟದಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ದೊಡ್ಡಬಳ್ಳಾಪುರ ತಾಲೂಕಿನ ಘಾಟಿ, ಮಾಕಳಿ, ಉಜ್ಜನಿ, ಹುಲುಕುಡಿ ಬೆಟ್ಟದ ಸಾಲಿನಲ್ಲಿ ವನ್ಯಜೀವಿಗಳು ಹೆಚ್ಚಾಗಿದ್ದು, ಇತ್ತೀಚಿಗೆ ಬೆಟ್ಟಕ್ಕೆ ಸಮೀಪದ ತೋಟಗಳಿಗೆ ನುಗ್ಗಿ ಹಾವಳಿ ಸೃಷ್ಟಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
- ಪೊಲೀಸರ ವೈಫಲ್ಯವೇ ದುರಂತಕ್ಕೆ ಕಾರಣ : ರೇವಣ್ಣ ಆಕ್ರೋಶ
- ಮೊಸಳೆಹೊಸಹಳ್ಳಿ ದುರಂತ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕು
- ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಎಫ್ಐಆರ್ ಅನಿವಾರ್ಯ : ಸಿಎಂ
- ಗಣೇಶೋತ್ಸವ ದುರಂತ : 9 ಜನರನ್ನು ಬಲಿಪಡೆದ ಟ್ರಕ್ ಚಾಲಕನ ವಿಚಾರಣೆ
- ಹಾಸನ ಗಣೇಶೋತ್ಸವ ದುರಂತ : 10 ಲಕ್ಷ ಪರಿಹಾರಕ್ಕೆ ಅಶೋಕ್ ಆಗ್ರಹ