ದೊಡ್ಡಬಳ್ಳಾಪುರ,ಜು.29- ಶ್ರಾವಣ ಮಾಸದ ಮೊದಲನೆ ಹಬ್ಬ ನಾಗರಪಂಚಮಿ ಹಿನ್ನೆಲೆಯಲ್ಲಿ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಘಾಟಿ ಸುಬ್ರಹಣ್ಯ ಕ್ಷೇತ್ರಕ್ಕೆ ಭಕ್ತರ ದಂಡೇ ಹರಿದುಬಂದಿತ್ತು.ಇಂದು ಮುಂಜಾನೆಯಿಂದಲೇ ಸುಬ್ರಹಣ್ಯ ಸ್ವಾಮಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ವಿವಿಧ ಬಗೆಯ ಹೂಗಳಿಂದ ಗರ್ಭಗುಡಿಯನ್ನು ಅಲಂಕಾರ ಮಾಡಲಾಗಿತ್ತು.
ನಾಗರಪಂಚಮಿ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ನಡೆಸಲಾಗಿದ್ದು, ಘಾಟಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ನಾಗರಪಂಚಮಿಯಂದು ಪೂಜೆಯನ್ನು ನೆರವೇರಿಸಿ, ತನಿಯೆರೆದರೆ ಸರ್ಪದೋಷ ನಿವಾರಣೆಯಾಗುತ್ತದೆ ಎನ್ನುವ ಪ್ರತೀತಿಯಿದೆ. ಈ ಕಾರಣದಿಂದಾಗಿ ಕ್ಷೈತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ, ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
10 ಸಾವಿರಕ್ಕು ಹೆಚ್ಚು ನಾಗರಕಲ್ಲುಗಳು:
ರಾಜ್ಯದಲ್ಲಿ ಕುಕ್ಕೆ ಸುಬ್ರಹಣ್ಯ ಕ್ಷೇತ್ರದೊಂದಿಗೆ ಸರ್ಪದೋಷ ನಿವಾರಣೆಗೆ ಖ್ಯಾತಿ ಹೊಂದಿರುವ ಘಾಟಿ ಸುಬ್ರಹಣ್ಯ ಕ್ಷೇತ್ರದಲ್ಲಿ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿನ ನಾಗರಕಲ್ಲುಗಳು.ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳನ್ನು ಭಕ್ತರು ದೇವಸ್ಥಾನದ ಸುತ್ತ ಮುತ್ತ ಪ್ರತಿಷ್ಠಾಪಿಸಿದ್ದು, ನಾಗರಪಂಚಮಿಯಂದು ವಿಶೇಷ ಪೂಜೆ ಸಲ್ಲಿಸುವ ವಾಡಿಕೆ ಇಲ್ಲಿ ರೂಢಿಯಾಗಿದೆ. ಜತೆಗೆ, ನಾಗರಪಂಚಮಿ ದಿನ ನಾಗರಕಲ್ಲುಗಳಿಗೆ ಕ್ಷಿರಾಭಿಷೇಕ ನೆರವೇರಿಸುವುದು ಇಲ್ಲಿನ ಮತ್ತೊಂದು ಆಕರ್ಷಣೆಯಾಗಿದೆ.
- ನೆಹರು-ಕಾಂಗ್ರೆಸ್ ಇತಿಹಾಸ ಬಿಚ್ಚಿಟ್ಟ ಮೋದಿ, ಅಮಿತ್ ಶಾ ವಿರುದ್ಧ ಜೈರಾಮ್ ರಮೇಶ್ ಆಕ್ರೋಶ
- ಇಸ್ರೇಲ್-ಪ್ಯಾಲೆಸ್ತಾನ್ ಸಂಘರ್ಷ ತಡೆಗೆ ಪ್ರಾಯೋಗಿಕ ಪರಿಹಾರ ಬೇಕು ; ಭಾರತ
- ಆಗಸ್ಟ್ ಮೊದಲ ವಾರದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸಾಧ್ಯತೆ
- ಆ.1ರಿಂದ ಯುಪಿಐ ಬಳಕೆಗೆ ಹೊಸ ನಿಯಮ
- ಧರ್ಮಸ್ಥಳ ಪ್ರಕರಣ : ಶವಗಳಿಗಾಗಿ ಇನ್ನೆರೆಡು ಹೊಸ ಸ್ಥಳಗಳಲ್ಲೂ ಉತ್ಖನನ ಆರಂಭ