Wednesday, July 30, 2025
Homeರಾಷ್ಟ್ರೀಯ | Nationalಬುರ್ಖಾ ಗ್ಯಾಂಗ್‌ ಬಂಧನ, 60 ಲಕ್ಷ ರೂ. ಬೆಲೆಯ ಆಭರಣ ವಶಕ್ಕೆ

ಬುರ್ಖಾ ಗ್ಯಾಂಗ್‌ ಬಂಧನ, 60 ಲಕ್ಷ ರೂ. ಬೆಲೆಯ ಆಭರಣ ವಶಕ್ಕೆ

Burkha gang arrested, jewellery worth Rs 60 lakh seized

ಬೆಂಗಳೂರು,ಜು.29- ಬುರ್ಖಾಧರಿಸಿ ಪ್ರಯಾಣಿಕರ ಸೋಗಿನಲ್ಲಿ ಬಸ್‌‍ ಹತ್ತಿ ಮಹಿಳೆಯರ ಬ್ಯಾಗ್‌ಗಳಿಂದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಮೂವರು ಮಹಿಳೆಯರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿ 16 ಲಕ್ಷ ರೂ. ಬೆಲೆಯ 190 ಗ್ರಾಂ ಚಿನ್ನಾಭರಣವನ್ನು ವಶಪಡಿಸಿ ಕೊಂಡಿದ್ದಾರೆ.

ಕಲ್ಬುರ್ಗಿ ಜಿಲ್ಲೆಯ ಅನು, ಪ್ರಾರ್ಥನಾ ಮತ್ತು ಪದ ಬಂಧಿತ ಬುರ್ಖಾ ಗ್ಯಾಂಗ್‌. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದವಾರದ ನಿವಾಸಿಯೊಬ್ಬರು ಹಾಸನಕ್ಕೆ ಹೋಗಲು 8ನೇ ಮೈಲಿ ಬಸ್‌‍ ನಿಲ್ದಾಣದಲ್ಲಿ ಬಸ್‌‍ ಹತ್ತುತ್ತಿದ್ದಾಗ ಮೂವರು ಮಹಿಳೆಯರು ಇವರನ್ನು ತಳ್ಳಿಕೊಂಡು ಬಸ್‌‍ ಹತ್ತಿದ್ದಾರೆ. ಬಸ್‌‍ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಸೀಟ್‌ ಇಲ್ಲವೆಂದು ಗೊಣಗುತ್ತಾ ಬೇರೆ ಬಸ್‌‍ಗೆ ಹೋಗುತ್ತೇವೆ ಎಂದು ಹೇಳಿ ಬಸ್‌‍ ಇಳಿದು ಆ ಮೂವರು ಮಹಿಳೆಯರು ಹೋಗಿದ್ದಾರೆ.

ಈ ಬಸ್‌‍ ನೆಲಮಂಗಲದ ಅರಿಸಿನಕುಂಟೆ ಬಳಿ ಹೋಗುತ್ತಿದ್ದಾಗ, ವ್ಯಾನಿಟಿ ಬ್ಯಾಗ್‌ ಪರಿಶೀಲಿಸಿದಾಗ ಅದರಲ್ಲಿದ್ದ 50 ಗ್ರಾಂ ಆಭರಣ ಇರಲಿಲ್ಲ. ಗಾಬರಿಯಾದ ಮಹಿಳೆ ಪೀಣ್ಯ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದು, ಬಸ್‌‍ನಲ್ಲಿದ್ದ ಮೂವರು ಮಹಿಳೆಯರ ಮೇಲೆ ಅನುಮಾನ ವ್ಯಕ್ತ ಪಡಿಸಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ತುಮಕೂರು ರಸ್ತೆ, 8ನೇ ಮೈಲಿ ಬಸ್‌‍ ನಿಲ್ದಾಣದ ಬಳಿ ಮೂವರು ಬುರ್ಖಾದಾರಿ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಸ್‌‍ನಲ್ಲಿ ಚಿನ್ನಾಭರಣ ಕಳವು ಮಾಡಿರುವುದಾಗಿ ಹಾಗೂ ಇದೇ ರೀತಿ ಪೀಣ್ಯದಲ್ಲಿ ಮೂರು ಕಳವು ಮಾಡಿರುವುದಾಗಿ ಹೇಳಿದ್ದಾರೆ.

ಈ ಮೂವರನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನಾಭರಣಗಳನ್ನು ಯಶವಂತಪುರದ ರೈಲ್ವೆ ಟ್ರ್ಯಾಕ್‌ ಬಳಿಯ ಶೆಡ್‌ನಲ್ಲಿ ಇಟ್ಟಿರುವುದಾಗಿ ಹೇಳಿದ್ದು, ಅದರಂತೆ ಶೆಡ್‌ನಿಂದ 190 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ಅನೀಲ್‌ಕುಮಾರ್‌ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

RELATED ARTICLES

Latest News