ಬೆಂಗಳೂರು, ಜು.30– ಬಿಬಿಎಂಪಿ ಖಜಾನೆಗೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿರುವ ಆರೋಪಕ್ಕೆ ಗುರಿಯಾಗಿರುವ ಡಾ ಸವಿತಾ ಎಸ್.ಕೆ ಅವರನ್ನು ಮಹದೇವಪುರ ಆರೋಗ್ಯಾಧಿಕಾರಿಯನ್ನಾಗಿ ನೇಮಿಸಿರುವುದನ್ನು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ತೀವ್ರವಾಗಿ ಖಂಡಿಸಿದೆ.
ಕೋಟ್ಯಂತರ ರೂ. ನಷ್ಟ ಉಂಟು ಮಾಡಿರುವ ಸವಿತಾ ಅವರನ್ನು ಮಹದೇವಪುರ ಆರೋಗ್ಯಾಧಿಕಾರಿ ಹುದ್ದೆಯಿಂದ ಮುಕ್ತಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಅಮೃತ್‌ರಾಜ್ ಎಚ್ಚರಿಸಿದ್ದಾರೆ.
ಸವಿತಾ ಅವರು ಆರ್.ಆರ್ ನಗರ, ಬೊಮ್ಮನಹಳ್ಳಿ ಮತ್ತು ಪೂರ್ವ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೋವಿಡ್-19 ಸಂದರ್ಭದಲ್ಲಿ ಸಾಕಷ್ಟು ಗೋಲ್‌ಮಾಲ್ ಮಾಡಿದ್ದರು. ಹೀಗಾಗಿ ಅವರನ್ನು ನ್ಯಾಷನಲ್ ಪ್ರೋಗ್ರಾಮ್ ಆಫ್ ಕ್ರೈಮೆಟ್ ಚೆಂಚ್ ಹೂಮನ್ ಹಲ್ಸ್ ವಿಭಾಗಕ್ಕೆ ವರ್ಗಾಹಿಸಲಾಗಿದ್ದು, ಆದರೆ ಉಲ್ಲೇಖ(1) ರ ಪ್ರಕಾರ ಡಾ॥ ಸವಿತಾ ಎಸ್.ಕೆ ರವರನ್ನು ಆರೋಗ್ಯಾಧಿಕಾರಿ ಮಹದೇವಪುರಕ್ಕೆ ವರ್ಗಾವಣೆ ಮಾಡಿದ್ದು, ಕಾನೂನು ಬಾಹಿರವಾಗಿರುತ್ತದೆ.
ಅವರ ವಿರುದ್ದ ಅಪರ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಯಲ್ಲಿ ಮೂರು ಗಂಭೀರವಾದ ಆರೋಪದ ಅಡಿಯಲ್ಲಿ ಇಲಾಖಾ ವಿಚಾರಣೆ ಪ್ರಕ್ರಿಯೆಯಲ್ಲಿರುತ್ತದೆ. ಹಾಗೂ ವೃಂದ ಮತ್ತೆ ನೇಮಕಾತಿ ನಿಯಾಮವಳಿ 2020 ರ ಪ್ರಕಾರ ಎ ಶ್ರೇಣಿ ಅಧಿಕಾರಿಯನ್ನು ವರ್ಗಾಹಿಸುವ ಅಧಿಕಾರವು ಮಾನ್ಯ ಅಪರ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಗೆ ಮಾತ್ರ ಅಧಿಕಾರವಿರುತ್ತದೆ.
ಈ ಹಿಂದೆ ಡಾ ಸವಿತಾ ಎಸ್.ಕೆ ರವರು ನ್ಯಾಷನಲ್ ಪ್ರೋಗ್ರಾಮ್ ಆಫ್ ಕೈಮೆಟ್ ಚೆಂಚ್ ಹುಮನ್ ಹೆಲ್ತ್ ವಿಭಾಗಕ್ಕೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ ಸಂದರ್ಭದಲ್ಲಿ ಪಾಲಿಕೆ ವತಿಯಿಂದ ನೇಮಿಸಿದ ವಕೀಲ ಸಂಜೀವ್ ಅವರು ಮಾನ್ಯ ನ್ಯಾಯಾಧೀಶರ ಗಮನಕ್ಕೆ ತಂದು ಡಾಸವಿತಾ ಎಸ್.ಕೆ ರವರ ವಿರುದ್ಧ ಮೂರು ಗಂಭೀರವಾದ ಹಣ ದುರುಪಯೋಗ ಮಾಡಿರುವ ಆರೋಪಗಳು ಇಲಾಖಾ ವಿಚಾರಣೆ ಹಂತದಲ್ಲಿ ಇರುವುದರಿಂದ, ತಡೆಯಾಜ್ಞೆ ಅಥವಾ ವರ್ಗಾವಣೆ ಆದೇಶವನ್ನು ನೀಡಬಾರದೆಂದು ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಲಯ ತಡೆಯಾಜ್ಞೆ ಆದೇಶ ನೀಡಿರಲಿಲ್ಲ.
ಆದರೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಆಡಳಿತ ಶಾಖೆಯಿಂದ ಯಾವುದೇ ರೀತಿ ಮಾಹಿತಿಯನ್ನು ಪಡೆಯದೆ ಸವಿತಾ ಅವರನ್ನು ಮಹದೇವಪುರ ವಲಯಕ್ಕೆ ವರ್ಗಾಹಿಸಲು ಅಭಿಪ್ರಾಯ ನೀಡಿರುವುದು ಕಾನೂನು ಬಾಹಿರವಾಗಿರುತ್ತದೆ. ಮಾತ್ರವಲ್ಲ, ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿಗಳು ಇಲಾಖಾ ವಿಚಾರಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.ಆದ್ದರಿಂದ ಅವರ ನೇಮಕವನ್ನು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
- 35 ವರ್ಷಗಳ ಸುದೀರ್ಘ ಸೇವೆ ತೃಪ್ತಿ ತಂದಿದೆ : ಡಿಜಿಪಿ ಮಾಲಿನಿ ಕೃಷ್ಣಮೂರ್ತಿ
- 2035ರ ವೇಳೆಗೆ 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿಸುವ ಗುರಿ : ಸಚಿವ ಭೋಸರಾಜು
- ಶ್ರಾವಣಕ್ಕೆ ದುಬಾರಿಯಾದ ತೆಂಗಿನಕಾಯಿ
- ಬೆಂಗಳೂರಲ್ಲಿ ಪೊಲೀಸರಿಂದ ವಾಹನ ಟೋಯಿಂಗ್ : ಗೃಹ ಸಚಿವ ಪರಮೇಶ್ವರ್
- ಬೆಂಗಳೂರು : ಗಂಡನ ಮೇಲಿನ ಕೋಪಕ್ಕೆ ವಿಷವುಣಿಸಿ ಮಗುವನ್ನು ಕೊಂದ ತಾಯಿ