Sunday, September 14, 2025
Homeರಾಜ್ಯಮನೆಯ ಟೆರೇಸ್‌‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಶವ ಮಹಿಳೆ

ಮನೆಯ ಟೆರೇಸ್‌‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಶವ ಮಹಿಳೆ

Pregnant woman found hanging on terrace of husband's house

ತ್ರಿಶೂರ್‌, ಜುಲೈ 30- ಗರ್ಭಿಣಿ ಮಹಿಳೆ ತನ್ನ ಗಂಡನ ಮನೆಯ ಟೆರೇಸ್‌‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನ ಮೂಡಿಸಿದೆ. ಮೃತರನ್ನು ಫಸೀಲಾ (22)ಎಂದು ಗುರುತಿಸಲಾಗಿದ್ದು, ಅವರು ಇಲ್ಲಿನ ಕೊಟ್ಟಪರಂಬಿಲ್‌ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಗರ್ಭಿಣಿಯಾಗಿದ್ದಳು ಮತ್ತು ಆಕೆಯ ಪತಿ ನೌಫಲ್‌ ಮತ್ತು ಅತ್ತೆಯಿಂದ ಕೌಟುಂಬಿಕ ಕಿರುಕುಳ ಅನುಭವಿಸುತ್ತಿದ್ದರು ಎಂದು ವರದಿಯಾಗಿದೆ.ಮೃತ ಮಹಿಳೆ ಮತ್ತು ಪತಿ ಮತ್ತು ಅವರ ಕುಟುಂಬ ಸದಸ್ಯರ ನಡುವೆ ಕೆಲವು ಸಮಸ್ಯೆಗಳಿದ್ದವು ಇದರಿಂದ ಮಹಿಳೆ ನೇಣು ಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೌಫಲ್‌ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.ಘಟನೆಗೆ ಸಂಬಂಧಿಸಿದಂತೆ ಮೊದಲ ಆರೋಪಿಯಾಗಿ ಪತಿ ಮತ್ತು ಎರಡನೇ ಆರೋಪಿಯಾಗಿ ಅತ್ತೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Latest News