ನವದೆಹಲಿ, ಜು.31– ಪತ್ನಿಯೊಂದಿಗಿನ ಜಗಳದ ನಂತರ ಪತಿ ವ್ಯಕ್ತಿ ಯಮುನಾ ನದಿಗೆ ಹಾರಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ.ಅದೃಷ್ಟವಶಾತ್ ನದಿಯಲ್ಲಿದ್ದ ದೋಣಿ ಚಾಲಕರು ಆತನನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬೈಕ್‌ನಲ್ಲಿ ಬಂದ ಲೋಕೇಂದ್ರ ಸಿಂಗ್ (30). ದೆಹಲಿಯ ಸಿಗ್ನೇಚರ್ ಸೇತುವೆಯಿಂದ ನದಿಗೆ ಹಾರಿದ್ದರು.
ಅಲ್ಲೇ ಇದ್ದ ಕೆಲವು ಅಧಿಕಾರಿಗಳು ನದಿಯಲ್ಲಿ ಮುಳುಗುತ್ತಿರುವ ವ್ಯಕ್ತಿಯನ್ನು ಗಮನಿಸಿ, ಅವರು ಹತ್ತಿರದ ದೋಣಿ ಚಾಲಕರಿಗೆ ಮಾಹಿತಿ ನೀಡಿದರು, ಅವರಲ್ಲಿ ಇಬ್ಬರು ಸ್ಥಳಕ್ಕೆ ಧಾವಿಸಿ ಲೋಕೇಂದ್ರ ಸಿಂಗ್‌ರನ್ನು ನೀರಿನಿಂದ ಹೊರತೆಗೆದರು ಎಂದು ಪೊಲೀಸರು ಹೇಳಿದರು.ತನ್ನ ಹೆಂಡತಿಗೆ ಆತಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇ ಶವನ್ನು ಕಳುಹಿಸಿ ಮಬೈಲ್‌ನ್ನು ಬೈಕ್‌ನಲ್ಲೆ ಬಿಟ್ಟು ಹೋಗಿದ್ದರು.
ಅಸ್ವಸ್ತಗೊಂಡಿದ್ದ ಲೋಕೇಂದ್ರ ಅವರನ್ನು ಮಜ್ನು ಕಾ ತಿಲಾದ ಟಿಬೆಟಿಯನ್ ಶಿಬಿರದಲ್ಲಿರುವ ಔಷಧಾಲಯಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಪ್ರಜ್ಞೆ ಬಂದಿತು. ಪತ್ನಿಯೊಂದಿಗೆ ಜಗಳವಾಡಿದ ನಂತರ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾಗಿ ಮತ್ತು ಆತಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ.ಲೋಕೇಂದ್ರ ಅವರ ಪತ್ನಿ ತನ್ನ ಸಹೋದರನೊಂದಿಗೆ ಸ್ಥಳಕ್ಕೆ ಬಂದು ಮನೆಗೆ ಕರೆದೊಯ್ದರು ಎಂದು ತಿಳಿಸಿದ್ದಾರೆ.
- ಸುರಂಗ ಮಾರ್ಗಕ್ಕೆ ಗಡ್ಕರಿ ಅನುಮತಿ ನೀಡಿದ್ದಾರೆಂಬುದು ಕೇವಲ ವದಂತಿ : ತೇಜಸ್ವಿ ಸೂರ್ಯ
- ಲಾಲ್ಬಾಗ್ನಲ್ಲಿ ಗುಂಡಿ ತೋಡುವ ಕೆಲಸ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ : ಆರ್.ಅಶೋಕ್
- ಸುರಂಗ ರಸ್ತೆ ವಿರೋಧಿಸಿ ಬಿಜೆಪಿ ಪ್ರತಿಭಟನೆಗೆ ಡಿಕೆಶಿ ತಿರುಗೇಟು
- ರಾಜ್ಯದಲ್ಲಿ ನವೆಂಬರ್ ರಾಜಕೀಯ ಕ್ರಾಂತಿ, ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ದೌಡು
- 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಸಸೂತ್ರವಾಗಿ ನಡೆದ ಕೆ-ಸೆಟ್ ಪರೀಕ್ಷೆ
