Saturday, August 2, 2025
Homeರಾಜ್ಯತಿರುಪತಿ ಸನ್ನಿಧಿಯಲ್ಲಿ ಕನ್ನಡಿಗರ ವಿಹಾಹಕ್ಕೆ ಸಿದ್ಧವಾಯ್ತು ಕಲ್ಯಾಣ ಮಂಟಪ

ತಿರುಪತಿ ಸನ್ನಿಧಿಯಲ್ಲಿ ಕನ್ನಡಿಗರ ವಿಹಾಹಕ್ಕೆ ಸಿದ್ಧವಾಯ್ತು ಕಲ್ಯಾಣ ಮಂಟಪ

Kalyana Mantapa ready for Kannadigas' weddings in Tirupati

ತಿರುಪತಿ, ಜು.31- ತಿರುಮಲ ತಿಮಪ್ಪನ ಸನ್ನಿಧಿಯಲ್ಲಿ ವಿವಾಹವಾಗಲಿಚ್ಚಿಸುವ ಕನ್ನಡಿಗರಿಗೆ ಗುಡ್‌ನ್ಯೂಸ್‌‍.ತಿರುಮಲದ ಕರ್ನಾಟಕ ಸರ್ಕಾರ ನಿರ್ಮಿಸಿರುವ ಕಲ್ಯಾಣ ಮಂಟಪ ಇಂದಿನಿಂದ ಸೇವೆಗೆ ಸಿದ್ಧವಾಗಿದೆ. ತಿರುಮಲ ಕಲ್ಯಾಣ ಮಂಟಪದಲ್ಲಿ ಕರ್ನಾಟಕದ ಜೋಡಿಯ ಮೊದಲ ಮದುವೆ ಇಂದು ಆಗುತ್ತಿದ್ದು, ಇನ್ನು ಎಂಟು ಮದುವೆಗಳು ಬುಕ್‌ ಆಗಿವೆ.

ಕಳೆದ ತಿಂಗಳು ತಿರುಮಲದಲ್ಲಿ ರಾಜ್ಯ ಮುಜರಾಯಿ ಇಲಾಖೆ ಕಲ್ಯಾಣ ಮಂಟಪ ಉದ್ಘಾಟನೆ ಮಾಡಿತ್ತು. ಈಗ ಈ ಕಲ್ಯಾಣ ಮಂಟಪದಲ್ಲಿ ಮೊದಲ ಮದುವೆ ಇಂದು ನಡೆಯುತ್ತಿದೆ. ಕರ್ನಾಟಕ ರಾಜ್ಯದ ಜೋಡಿಗಳ ಮೊದಲ ಮದುವೆ ನಡೆಯುತ್ತಿದ್ದು. ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆಗಾಗಿ ರಾಜ್ಯದ ವಿವಿಧ ಜಿಲ್ಲೆಯ 8 ಜೋಡಿ ಮದುವೆಗೆ ಬುಕ್ಕಿಂಗ್‌ ಮಾಡಿದ್ದಾರೆ. ಈ ಕಲ್ಯಾಣ ಮಂಟಪದಲ್ಲಿ 36 ಕೊಠಡಿಗಳು ಇದ್ದು, 500 ಆಸನದ ವ್ಯವಸ್ಥೆ ಇದೆ. ಒಂದು ಮದುವೆಗೆ ಜಿಎಸ್‌‍ಟಿ ಸೇರಿಸಿ ಮೂರುವರೆ ಲಕ್ಷ ರೂ. ಆಗಲಿದೆ.

ಸದ್ಯಕ್ಕೆ ಕಲ್ಯಾಣ ಮಂಟಪಕ್ಕೆ ತೆರಳಿ ಬುಕ್ಕಿಂಗ್‌ ಮಾಡುತ್ತಿದ್ದು, ಶೀಘ್ರದಲ್ಲೇ ಆನ್‌ಲೈನ್‌‍ ವ್ಯವಸ್ಥೆ ಕೂಡ ಜಾರಿ ಮಾಡಲಿದ್ದೇವೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.ಒಟ್ಟಾರೆ ತಿರುಪತಿಗೆ ತೆರಳೋ ಕರ್ನಾಟಕ ಭಕ್ತರು ತಿರುಪತಿಯಲ್ಲೆ ಮದುವೆ ಮಾಡಬೇಕು ಎಂಬ ಇಚ್ಛೆ ಇದ್ದರೆ ಮುಜರಾಯಿ ಇಲಾಖೆ ಅವಕಾಶ ಕಲ್ಪಿಸಿದೆ. ಬುಕ್ಕಿಂಗ್‌ ಮಾಡಿ ತಿರುಮಲದಲ್ಲಿ ಮದುವೆ ಆಗಬಹುದಾಗಿದೆ.

RELATED ARTICLES

Latest News