Saturday, August 9, 2025
Homeರಾಷ್ಟ್ರೀಯ | Nationalವಾಣಿಜ್ಯ ಗ್ಯಾಸ್ ಸಿಲಿಂಡರ್‌ ಬೆಲೆಯಲ್ಲಿ 33.50ರೂ. ಇಳಿಕೆ

ವಾಣಿಜ್ಯ ಗ್ಯಾಸ್ ಸಿಲಿಂಡರ್‌ ಬೆಲೆಯಲ್ಲಿ 33.50ರೂ. ಇಳಿಕೆ

Commercial cylinder price reduced by Rs 33.50

ನವದೆಹಲಿ, ಆ. 1: ತೈಲ ಸಂಸ್ಥೆಗಳು 19 ಕೆಜಿ ತೂಕದ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 33.50ರೂ.ನಷ್ಟು ಕಡಿತ ಮಾಡಿವೆ. 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 33.50 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಅತಿ ಹೆಚ್ಚು ಕಡಿತ ಮಾಡಲಾಗಿದೆ. ಆದರೆ 14.2 ಕೆಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿದುಬಂದಿದೆ.

19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಈಗ ಪ್ರತಿ ಸಿಲಿಂಡರ್‌ಗೆ 1,800 ರೂ.ಗಳಿಗಿಂತ ಕಡಿಮೆಯಿದ್ದರೆ, ದೆಹಲಿಯಲ್ಲಿ ಇದರ ಬೆಲೆ ಪ್ರತಿ ಸಿಲಿಂಡರ್‌ಗೆ 1,650 ರೂ.ಗಳಿಗಿಂತ ಕಡಿಮೆಯಿದೆ. ಇದಲ್ಲದೆ, ಮುಂಬೈನಲ್ಲಿಯೂ ಈ ಗ್ಯಾಸ್‌‍ ಅಗ್ಗವಾಗಿದೆ ಏಕೆಂದರೆ ಅದರ ಬೆಲೆ ಪ್ರತಿ ಸಿಲಿಂಡರ್‌ಗೆ 1,600 ರೂ.ಗಳಿಗಿಂತ ಕಡಿಮೆಯಿದೆ.

ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆ 1,738 ರೂ. ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಆಗಸ್ಟ್‌ 1, 2025 ರಿಂದ ಪ್ರತಿ ಸಿಲಿಂಡರ್‌ಗೆ 33.5 ರೂ.ಗಳಷ್ಟು ಇಳಿದು 1,631.5 ರೂ.ಗಳಿಗೆ ತಲುಪಿದೆ. ಕಳೆದ ತಿಂಗಳು ಇದರ ಬೆಲೆ ಪ್ರತಿ ಸಿಲಿಂಡರ್‌ಗೆ 1,665 ರೂ.ಗಳಷ್ಟಿತ್ತು. ಕೋಲ್ಕತ್ತಾದಲ್ಲಿ ಆಗಸ್ಟ್‌ 2025 ರಲ್ಲಿ 19 ಕೆಜಿ ಸಿಲಿಂಡರ್‌ ಬೆಲೆ 34.5 ರೂ.ಗಳಷ್ಟು ಇಳಿದು 1,734.5 ರೂ.ಗಳಿಗೆ ತಲುಪಿದೆ, ಆದರೆ ಕಳೆದ ತಿಂಗಳು ಪ್ರತಿ ಸಿಲಿಂಡರ್‌ ಬೆಲೆ 1,769 ರೂ.ಗಳಷ್ಟಿತ್ತು.

RELATED ARTICLES

Latest News