ನವದೆಹಲಿ,ಅ.1-ಪ್ರಾದೇಶಿಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದ ಅಸ್ಸಾಮಿ ನಟಿ ನಂದಿನಿ ಕಶ್ಯಪ್ ಅವರನ್ನು ಹಿಟ್ ಅಂಡ್ ರನ್ ಅಪಘಾತ ಪ್ರಕರಣದಲ್ಲಿ ಬಂಧಿಸಲಾಗಿದೆ.
ಗುವಾಹಟಿಯಲ್ಲಿ ಕಾರು ಅಪಘಾತ ನಡೆಸಿ ಸ್ಥಳದಿಂದ ನಟಿ ನಂದಿನಿ ಪಾರಾರಿಯಾಗಿದ್ದರು.ಘಟನೆಯಲ್ಲಿನ ಸಮಿಯುಲ್ ಹಕ್(21)ಎಂಬ ಯುವಕ ಸಾವನ್ನಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸಾಮಿ ಭಾಕ್ಷೆಯ ರುದ್ರ ಚಿತ್ರ ನಾಯಕಿಯಾಗಿದ್ದ ನಂದಿನಿ ಭಾರಿ ಜನಪ್ರೀಯತೆ ಗಳಿಸಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚುತ್ತಿರುವ ಅಭಿಮಾನಿ ಬಳಗದೊಂದಿಗೆ ಪ್ರಾದೇಶಿಕ ಸಿನಿಮಾದಲ್ಲಿ ಉದಯೋನುಖ ಕಲಾವಿದೆಯಾಗಿದ್ದರು.
ಅವರು ಕೆಲವೇ ಪಾತ್ರಗಳೊಂದಿಗೆ ಭರವಸೆಯ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದರು.
ಗುವಾಹಟಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣದ ಆರೋಪ ಹೊತ್ತಿರುವ ನಟಿಯನ್ನ ಈಗ ಪೊಲೀಸು ಬಂಧನದಲ್ಲಿದ್ದಾರೆ.
ಸಿಸಿಟಿವಿ ದೃಶ್ಯಗಳು ಮತ್ತು ಹಲವಾರು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಜುಲೈ 25 ರಂದು ಬೆಳಗಿನ ಜಾವ 3:02 ಕ್ಕೆ ಗುವಾಹಟಿಯ ದಕ್ಷಿಣಗಾಂವ್ ಪ್ರದೇಶದಲ್ಲಿ ನಂದಿನಿ ಕಶ್ಯಪ್ ಚಲಾಯಿಸುತ್ತಿದ್ದ ಕಾರು ಸಮಿಯುಲ್ ಹಕ್ ಎಂಬ ಯುವಕನಿಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡು ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ .
ಸಮಿಯುಲ್ ಸ್ನೇಹಿತರು ವಾಹನವನ್ನು ಬೆನ್ನಟ್ಟಿದ್ದಾರೆ ಆದರೆ ನಟಿ ವಾಹನ ನಿಲ್ಲಿಸದೆ ಪಾರಾರಿಯಾದ್ದರು. ಸದ್ಯ ಆಕೆಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
- ವೋಟ್ ಚೋರಿ ಆರೋಪ : ಸಹಿ ಸಮೇತ ಮಾಹಿತಿ ನೀಡುವಂತೆ ರಾಹುಲ್ ಗಾಂಧಿಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸೂಚನೆ
- ಒಳಮೀಸಲಾತಿ ಕುರಿತು ಆ.16ರಂದು ವಿಶೇಷ ಸಚಿವ ಸಂಪುಟ ಸಭೆ
- ಟ್ರಂಪ್ನಿಂದ ಆರ್ಥಿಕ ಬ್ಲ್ಯಾಕ್ಮೇಲ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
- ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮನೆ ಮೇಲೆ ಇಡಿ ದಾಳಿ
- ಡಿಸಿಎಂ ಡಿಕೆಶಿ ಚಲಾಯಿಸಿದ್ದ ದ್ವಿಚಕ್ರ ವಾಹನದ ಮೇಲಿದ್ದ ದಂಡ ಪಾವತಿ