Sunday, August 3, 2025
Homeಮನರಂಜನೆಡಾ.ರಾಜ್‌ಕುಮಾರ್‌ ಅವರ ಸಹೋದರಿ ನಾಗಮ್ಮ ನಿಧನ

ಡಾ.ರಾಜ್‌ಕುಮಾರ್‌ ಅವರ ಸಹೋದರಿ ನಾಗಮ್ಮ ನಿಧನ

Dr. Rajkumar's sister Nagamma passes away

ಬೆಂಗಳೂರು,ಅ.1- ಪದಭೂಷಣ ಡಾ.ರಾಜ್‌ಕುಮಾರ್‌ ಅವರ ಸಹೋದರಿ ನಾಗಮ್ಮ(92)ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಗಾಜನೂರಿನ ಮನೆಯಲ್ಲಿ ವಾಸವಾಗಿದ್ದ ನಾಗಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಇಂದು ಕೊನೆಯುಸಿರೆಳೆದಿದ್ದಾರೆ.

ಶಿವಣ್ಣ ದಂಪತಿ ಇತೀಚೆಗಷ್ಟೇ ನಾಗಮ ಅವರನ್ನ ಭೇಟಿಯಾಗಿದ್ದರು.ಸದ್ಯಗೋವಾದಲ್ಲಿರುವ ನಟ ಶಿವಣ್ಣ ಬೆಂಗಳೂರಿನತ್ತ ಬರುತ್ತಿದ್ದಾರೆ ಕುಟುಂಬ ಮೂಲಗಳು ತಿಳಿಸಿವೆ . ಸದ್ಯ ರಾಘವೇಂದ್ರ ರಾಜ್‌ಕುಮಾರ್‌, ಅಶ್ವಿನಿ ಪುನಿತ್‌ ರಾಜ್‌ಕುಮಾರ್‌ ಹಾಗು ಕುಟುಂಬ ಸದಸ್ಯರು ಗಾಜಾನುರಿಗೆ ತೆರಳಿದ್ದಾರೆ. ನಾಳೆ ಅಂತ್ಯಕ್ರಿಯೆ ನಡೆಯಲಿದೆ ಹಲವರು ಕಲಾವಿದರು ನಾಗಮ ನಿಧನಕ್ಕೆ ಕಂಬನಿ ಮಡಿದಿದ್ದಾರೆ.

ಡಾ.ರಾಜ್‌ಕುಮಾರ್‌ ಅವರಿಗೆ ಅಚ್ಚುಮೆಚ್ಚನ ಸಹೋದರಿಯಾಗಿದ್ದ ನಾಗಮ ಸದಾ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದರು,ಕುಟುಂಬದ ಆಧಾರವಾಗಿದ್ದರು.ಪುನಿತ್‌ ರಾಜ್‌ಕುಮಾರ್‌ರನ್ನು ಅಡಿಸಿ ಬೆಳೆಸಿದ್ದರು,ಪುನಿತ್‌ ನಿಧನದ ವೇಳೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.ಚಿತ್ರರಂಗದ ಗಣ್ಯರು,ರಾಜ್‌ ಅಭಿಮಾನಿಗಳು ಸಹ ಈ ಗಾಜನೂರಿನತ್ತ ತೆರಳುತ್ತಿದ್ದಾರೆ.

RELATED ARTICLES

Latest News