Sunday, August 3, 2025
Homeರಾಷ್ಟ್ರೀಯ | Nationalವಿಶ್ವ ಮಟ್ಟದಲ್ಲಿ ಅತ್ಯಂತ ಯಶಸ್ವಿಯಾಗಿ, ನಿಖರವಾಗಿ ನಿಸಾರ್‌ ಉಪಗ್ರಹದ ಉಡಾವಣೆ : ಇಸ್ರೋ ಅಧ್ಯಕ್ಷ

ವಿಶ್ವ ಮಟ್ಟದಲ್ಲಿ ಅತ್ಯಂತ ಯಶಸ್ವಿಯಾಗಿ, ನಿಖರವಾಗಿ ನಿಸಾರ್‌ ಉಪಗ್ರಹದ ಉಡಾವಣೆ : ಇಸ್ರೋ ಅಧ್ಯಕ್ಷ

NISAR launch among world's most precise, says ISRO chief Narayanan

ತಿರುವನಂತಪುರಂ,ಆಗಸ್ಟ್‌ .1- ವಿಶ್ವ ಮಟ್ಟದಲ್ಲಿ ಅತ್ಯಂತ ಯಶಸ್ವಿಯಾಗಿ , ನಿಖರವಾಗಿ ನಿಸಾರ್‌ ಉಪಗ್ರಹದ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್‌ ಹೇಳಿದ್ದಾರೆ
ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಜಿಎಸ್‌‍ಎಲ್‌ವಿ-ಎಫ್‌6 ಮಾರ್ಕ್‌ ವಾಹಕ ಬಳಸಿಕೊಂಡು ಉಪಗ್ರಹವನ್ನು ಯಶಸ್ವಿಯಾಗಿ ನಿರ್ವಹಿರುವುದು ನಾಸಾಗೂ ಅಚ್ಚರಿ ಮೂಡಿಸಿತು ಜೊತೆಗೆ ಇದು ಅವರಿಗೂ ಊಹಿಸಲಾಗದ ಇಸ್ರೋ ಸಾಧನೆಯಾಗಿದೆ ಎಂದು ಎಂದು ತಿಳಿಸಿದ್ದಾರೆ.

ಕಳೆದ ರಾತ್ರಿ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಅವರು ಹರ್ಷ ವ್ಯಕ್ತಪಡಿಸಿದರು.ಭಾರತೀಯರು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಜಿಎಸ್‌‍ಎಲ್‌ವಿ ವಾಹಕವನ್ನು ಬಳಸಿಕೊಂಡು ಯಶಸ್ವಿಯಾಗಿ ಉಡಾವಣೆ ಮಾಡಬಹುದು ಎಂದು ಅರ್ಥಮಾಡಿಕೊಂಡಾಗ ಅವರು ತುಂಬಾ ಉತ್ಸುಕಗೊಂಡಿದ್ದರು,ನಂತರ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿದಾಗ ತುಂಬಾ ಸಂತೋಷಪಟ್ಟರು ಎಂದು ಹೇಳಿದರು.

ನಾರಾಯಣನ್‌ ಅವರ ಪ್ರಕಾರ, ಇದು ವಿಶ್ವದ ಅತ್ಯಂತ ನಿಖರವಾದ ಉಡಾವಣೆಗಳಲ್ಲಿ ಒಂದಾಗಿದ್ದು, ಐದು ಹಂತದ ರಾಕೆಟ್‌ ಪ್ರತಿ ಹಂತದಲ್ಲೂ ದೋಷರಹಿತವಾಗಿ ಕಾರ್ಯನಿರ್ವಹಿಸಿದೆ, ಕೇವಲ ಎರಡರಿಂದ ಮೂರು ಕಿಲೋಮೀಟರ್‌ ಅಂತರದಲ್ಲಿ ಉಪಗ್ರಹವನ್ನು ಅದರ ನಿಖರವಾದ ಕಕ್ಷೆಗೆ ಸೇರಿಸುತ್ತದೆ ಎಂದು ತಿಳಿಸಿದರು.

ಇದು ವಿಶ್ವದಲ್ಲಿ ಇದುವರೆಗೆ ನಡೆಸಿದ ಅತ್ಯಂತ ನಿಖರವಾದ ಉಡಾವಣೆಗಳಲ್ಲಿ ಒಂದಾಗಿದೆ ಎಂಬ ಹೆಗ್ಗಳಿಕೆ ಮೂಡಿಸಿದೆ ಮತ್ತು ಭಾರತ ಮತ್ತು ಅಮೆರಿಕ ಜಂಟಿಯಾಗಿ ನಿರ್ಮಿಸಿದ ಅತ್ಯಂತ ತಾಂತ್ರಿಕವಾಗಿ ತೀವ್ರ ಮತ್ತು ಹೆಚ್ಚು ಉಪಯುಕ್ತವಾದ ಉಪಗ್ರಹವನ್ನು ಭಾರತೀಯ ಲಾಂಚರ್‌ ಬಳಸಿ ಕಕ್ಷೆಯಲ್ಲಿ ಇರಿಸಲಾಗಿದೆ ಇದು ಇಡೀ ದೇಶ ಹೆಮೆಪಡಬಹುದು ಎಂದು ಅವರು ಹೇಳಿದರು.

RELATED ARTICLES

Latest News