ಬೆಂಗಳೂರು, ಆ.1– ಸೋಕಿಂಗ್ ಜೋನ್ ಸ್ಥಾಪಿಸದ ನಗರದ ನೂರಾರು ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ.ಬಿಬಿಎಂಪಿ ವ್ಯಾಪ್ತಿಯ 412 ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ತಂಬಾಕು ನಿಯಂತ್ರಣ ಕಾಯ್ದೆ ಅಡಿ ನೋಟೀಸ್ ಜಾರಿ ಮಾಡಲಾಗಿದೆ.
ಪಾಲಿಕೆ ಅರೋಗ್ಯ ಇಲಾಖೆಯಿಂದ ನೋಟೀಸ್ ಜಾರಿ ಮಾಡಿದ್ದು, ಈ ಕೂಡಲೇ ಧೂಮಪಾನ ವಲಯ ಸ್ಥಾಪಿಸಬೇಕು ಎಂದು ತಾಕೀತು ಮಾಡಲಾಗಿದೆ.ನಗರದ ಬಹುತೇಕ ಬಾರ್, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸ್ಮೋಕಿಂಗ್ ಜೋನ್ ಇಲ್ಲ. ತಂಬಾಕು ನಿಯಂತ್ರಣ ಕಾಯ್ದೆ ಅಡಿ ಸ್ಮೋಕಿಂಗ್ ಜೋನ್ ಕಡ್ಡಾಯ ಹೀಗಾಗಿ ನೋಟೀಸ್ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
30ಕ್ಕಿಂತ ಹೆಚ್ಚಿನ ಆಸನ ಇರುವ ಪಬ್, ಬಾರ್, ರೆಸ್ಟೋರೆಂಟ್ ಮತ್ತು ಹೋಟೆಲ್ ಗಳಲ್ಲಿ ಸೋಕಿಂಗ್ ಜೋನ್ ಸ್ಥಾಪಿಸುವುದು ಕಡ್ಡಾಯ. ಆದರೆ, ನಗರದ ನೂರಾರು ಹೋಟೆಲ್. ಬಾರ್ .ರೆಸ್ಟೋರೆಂಟ್ ಗಳಲ್ಲಿ ಧೂಮಪಾನ ವಲಯ ಇಲ್ಲ.
ಈ ಹಿನ್ನೆಲೆಯಲ್ಲಿ ನಗರದ 412 ಪಬ್, ಬಾರ್, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಪಾಲಿಕೆಯಿಂದ ನೋಟೀಸ್.. ನೋಟೀಸ್ ಜಾರಿ ಮಾಡಿ 7 ದಿನಗಳಲ್ಲಿ ಸ್ಮೋಕಿಂಗ್ ವಲಯ ಸ್ಥಾಪಿಸ ಬೇಕು ಎಂದು ಸೂಚಿಸಲಾಗಿದೆ.ಗಡುವಿನೊಳಗೆ ಸೋಕಿಂಗ್ ಜೋನ್ ಸ್ಥಾಪಿಸದಿದ್ದರೆ, ಅಂತವರ ಟ್ರೇಡ್ ಲೈಸೆನ್ಸ್ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
- ಅಕ್ಕ ಮತ್ತು ತಮ್ಮನನ್ನು ಕೊಂದು ಸುಟ್ಟು ಹಾಕಿದ ಯುವಕ
- ‘ಆಪರೇಷನ್ ಅಖಾಲ್’ ಮೂಲಕ ಮೂವರು ಉಗ್ರರನ್ನು ಹೊಸಕಿಹಾಕಿದ ಸೇನೆ
- ಪತ್ನಿಯೊಂದಿಗೆ ಮಾತನಾಡಿದ ವ್ಯಕ್ತಿಯನ್ನು ಇರಿದುಕೊಂದ ಲಿವ್ ಇನ್ ಪಾರ್ಟನರ್
- ಆ.10 ರಂದು ನಮ್ಮ ಮೆಟ್ರೋದ ಹಳದಿ ಮಾರ್ಗ ಉದ್ಘಾಟಿಸಿ 3ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಪ್ರಧಾನಿ ಮೋದಿ
- ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ನೇಣಿಗೆ ಶರಣು