Sunday, August 3, 2025
Homeರಾಜ್ಯರಾಹುಲ್‌ಗಾಂಧಿ ಪ್ರತಿಭಟನೆಗಾಗಿ ಮರ ಕಡಿದ ಪೊಲೀಸರ ವಿರುದ್ಧ ಎಫ್‌ಐಆರ್‌

ರಾಹುಲ್‌ಗಾಂಧಿ ಪ್ರತಿಭಟನೆಗಾಗಿ ಮರ ಕಡಿದ ಪೊಲೀಸರ ವಿರುದ್ಧ ಎಫ್‌ಐಆರ್‌

FIR against police who cut down trees for Rahul Gandhi protest

ಬೆಂಗಳೂರು, ಆ.2– ಮತಕಳ್ಳತನ ಹೆಸರಿನಲ್ಲಿ ನಗರದಲ್ಲಿ ರಾಹುಲ್‌ಗಾಂಧಿ ನಡೆಸಲು ತೀರ್ಮಾನಿಸಿರುವ ಪ್ರತಿಭಟನೆಗಾಗಿ ಅನುಮತಿ ಇಲ್ಲದೆ ಫ್ರೀಡಂ ಪಾರ್ಕ್‌ನಲ್ಲಿದ್ದ ಮರ ಕಡಿದಿರುವ ಉಪ್ಪಾರಪೇಟೆ ಪೊಲೀಸರ ವಿರುದ್ಧ ಬಿಬಿಎಂಪಿ ಎಫ್‌ಐಆರ್‌ ದಾಖಲಿಸಿದೆ.

ಮರ ಕಡಿದಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಉಪ್ಪಾರಪೇಟ್‌ ಪಿಸಿ ಮಹದೇವಸ್ವಾಮಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದೆ.ಆ.5 ರಂದು ರಾಹುಲ್‌ಗಾಂಧಿ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್‌ನ ಕಾಂಪೌಂಡ್‌ ಒಡೆದು, ಕೆಲ ಮರ ಕಡಿದು ರಸ್ತೆ ನಿರ್ಮಾಣ ಮಾಡಲು ಪೊಲೀಸರು ಮುಂದಾಗಿದ್ದರು.

ಇದೀಗ ರಾಜಕಾರಣಿಗಳ ಸಲುವಾಗಿ ಮರಗಳ ಬುಡಕ್ಕೆ ಕೊಡಲಿ ಇಟ್ಟಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರತಿಭಟನೆಯಲ್ಲಿ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌‍ ರಾಷ್ಟ್ರೀಯ ನಾಯಕರು ಭಾಗಿಯಾಗುತ್ತಿದ್ದಾರೆ.

ಈ ಪ್ರತಿಭಟನೆಯಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಬರುತ್ತಿದ್ದಾರೆ. ಹಾಗಾಗಿ ಪ್ರತಿಭಟನೆಗೆ ಹೆಚ್ಚಿನ ಜಾಗದ ಅವಶ್ಯಕತೆ ಇರುವುದನ್ನು ಮನಗಂಡು ಮರ ಕಡಿದು ಜಾಗ ವಿಸ್ತರಣೆ ಮಾಡಲಾಗುತ್ತಿದೆ.

RELATED ARTICLES

Latest News