ಬೆಂಗಳೂರು, ಆ.2- ನಗರದಲ್ಲಿ ಮೆಟ್ರೋ ಹಳದಿ ಮಾರ್ಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುವ ಸಾಧ್ಯತೆಗಳಿವೆ.ಆ.15 ರಿಂದ ಹಳದಿ ಮಾರ್ಗ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದ್ದು, ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದ ನಡುವಿನ 19.15 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗಕ್ಕೆ ರೈಲ್ವೆ ಸುರಕ್ಷತಾ ಆಯೋಗದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಜುಲೈ 22 ರಂದು ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿಯಿಂದ ಸುರಕ್ಷತಾ ಪರೀಕ್ಷೆ ನಡೆಸಿ, ವಿದ್ಯುತ್ ಸರಬರಾಜು ವ್ಯವಸ್ಥೆ, ಸಿಗ್ನಲಿಂಗ್, ಹಳಿಗಳು ಮತ್ತು ವಯಾಡಕ್ಟ್‌ಗಳುಗಳ ಸುರಕ್ಣತಾ ಪರೀಕ್ಷಿಸಿದ್ದರು.ಮೂರು ಚಾಲಕರಹಿತ ರೈಲುಗಳು ಹಳದಿ ಮಾರ್ಗದಲ್ಲಿ ಓಡಾಟ ನಡೆಸಲಿವೆ. ಸುಮಾರು 20 ನಿಮಿಷಗಳ ಅಂತರದಲ್ಲಿ ಮೆಟ್ರೋ ಓಡಾಟ ಇರಲಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್, ಎಚ್‌ಎಸ್‌ಆರ್ ಲೇಔಟ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಹಾದು ಹೋಗಲಿರೋ ಹಳದಿ ಮೆಟ್ರೋ ಮಾರ್ಗದಲ್ಲಿ ಸದ್ಯಕ್ಕೆ ನಾಲ್ಕು ಮೆಟ್ರೋ ಬೋಗಿಗಳು ಇವೆ.ಉಳಿದ ಮೆಟ್ರೋ ಬೋಗಿಗಳು ಇನ್ನೊಂದು ವಾರದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
- ವೋಟ್ ಚೋರಿ ಆರೋಪ : ಸಹಿ ಸಮೇತ ಮಾಹಿತಿ ನೀಡುವಂತೆ ರಾಹುಲ್ ಗಾಂಧಿಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸೂಚನೆ
- ಒಳಮೀಸಲಾತಿ ಕುರಿತು ಆ.16ರಂದು ವಿಶೇಷ ಸಚಿವ ಸಂಪುಟ ಸಭೆ
- ಟ್ರಂಪ್ನಿಂದ ಆರ್ಥಿಕ ಬ್ಲ್ಯಾಕ್ಮೇಲ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
- ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮನೆ ಮೇಲೆ ಇಡಿ ದಾಳಿ
- ಡಿಸಿಎಂ ಡಿಕೆಶಿ ಚಲಾಯಿಸಿದ್ದ ದ್ವಿಚಕ್ರ ವಾಹನದ ಮೇಲಿದ್ದ ದಂಡ ಪಾವತಿ