Monday, August 4, 2025
Homeರಾಷ್ಟ್ರೀಯ | Nationalಅಕ್ಕ ಮತ್ತು ತಮ್ಮನನ್ನು ಕೊಂದು ಸುಟ್ಟು ಹಾಕಿದ ಯುವಕ

ಅಕ್ಕ ಮತ್ತು ತಮ್ಮನನ್ನು ಕೊಂದು ಸುಟ್ಟು ಹಾಕಿದ ಯುವಕ

Patna gruesome double murder: Siblings burned alive over love affair, police uncover chilling motive

ಪಾಟ್ನಾ,ಆ.3- ತನ್ನೊಂದಿಗಿನ ಸಂಬಂಧ ಕಡಿದುಕೊಂಡು ಬೇರೊಬ್ಬನೊಂದಿಗೆ ಸಲುಗೆಯಿಂದ ಇದ್ದಾಳೆ ಎಂದು ಅನುಮಾನಿಸಿ ಯುವಕನೊಬ್ಬ ತನ್ನ ಗೆಳೆಯನೊಂದಿಗೆ ಸೇರಿ 14 ವರ್ಷದ ಬಾಲಕಿಯನ್ನು ಹಾಗೂ ಆಕೆಯ ತಮ್ಮನನ್ನು ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ಪಾಟ್ನಾ ಜಿಲ್ಲೆಯ ನಾಗವಾನ್‌ ಗ್ರಾಮ ನಡೆದಿದೆ.

ಶುಭಂ ಅಲಿಯಾಸ್‌‍ ಸನ್ನಿ ಕುಮಾರ್‌ ಹಾಗೂ ರೋಷನ್‌ಕುಮಾರ್‌ ಕೊಲೆ ಆರೋಪಿಗಳು. ಅಕ್ಕ-ತಮ ಇಬ್ಬರು ಶಾಲೆಯಿಂದ ಮನೆಗೆ ವಾಪಸ್ಸಾದ ಸಂದರ್ಭದಲ್ಲಿ ಶುಭಮ್‌ ಅಲಿಯಾಸ್‌‍ ಸನ್ನಿಕುಮಾರ್‌ ಮತ್ತು ರೋಶನ್‌ಕುಮಾರ್‌ ಅಲ್ಲಿಗೆ ಬಂದು ಏಕಾಏಕಿ ಬಾಲಕಿಯ ಕುತ್ತಿಗೆ ಹಿಸುಕಿ ಕೊಂದಿದ್ದಾರೆ. ಆಕೆಯ ತಮನನ್ನು ಇಟ್ಟಿಗೆಯಿಂದ ಹೊಡೆದು ಸಾಯಿಸಿದ್ದು, ನಂತರ ಮೃತದೇಹಗಳಿಗೆ ಬೆಂಕಿ ಹಚ್ಚಿದ್ದಾರೆ.

ಬೆಂಕಿಯಿಂದ ಹೊಗೆ ಬರುತ್ತಿದ್ದದ್ದನ್ನು ಕಂಡುಕೊಂಡ ನೆರೆಹೊರೆಯವರು ಸಂತ್ರಸ್ತರ ತಾಯಿಯ ಗಮನಕ್ಕೆ ತಂದಾಗ ಮಕ್ಕಳನ್ನು ಸುಟ್ಟು ಹಾಕಿರುವುದು ಗೊತ್ತಾಗಿದೆ. ಸಂತ್ರಸ್ತ ಮಕ್ಕಳ ತಾಯಿ ಪಾಟ್ನಾದ ಏಮ್ಸೌನ ಭದ್ರತಾ ಸಿಬ್ಬಂದಿಯಾಗಿದ್ದಾರೆ.

ಘಟನೆ ವಿವರ:
ಆರೋಪಿಗಳು ಒಂದು ವಾರದ ಹಿಂದೆಯೇ ಕೊಲೆಗೆ ಯೋಜನೆ ರೂಪಿಸಿದ್ದರು. ಸುಭಮ್‌ ಕೊಲೆ ಮಾಡಿದ್ದು, ರೋಶನ್‌ಕುಮಾರ್‌ ಸಾಕ್ಷ್ಯ ನಾಶಮಾಡಲು ಸಹಾಯ ಮಾಡಿದ್ದಾನೆ ಎಂದು ಪಾಟ್ನಾದ ಹಿರಿಯ ಪೊಲೀಸ್‌‍ ವರಿಷ್ಠಾಧಿಕಾರಿ (ಎಸ್‌‍ಎಸ್‌‍ಪಿ) ಕಾರ್ತಿಕೇಯ್‌ ಕೆ.ಶರ್ಮಾ ತಿಳಿಸಿದ್ದಾರೆ.

ಇಬ್ಬರೂ ಆರೋಪಿಗಳು ಬಲಿಪಶುಗಳ ಮನೆಗೆ ಹೋದರು. ಸುಭಮ್‌ ಮೊದಲು ಮಲಗಿದ್ದ ಸಹೋದರನ ಮೇಲೆ ಇಟ್ಟಿಗೆಯಿಂದ ದಾಳಿ ಮಾಡಿ, ನಂತರ ಬಾಲಕಿಯ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿದರು ಎಂದು ಅವರು ಹೇಳಿದರು. ನಂತರ ಆರೋಪಿಗಳು ಅವರ ದೇಹದ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಹುಡುಗಿ ಬೇರೊಬ್ಬ ಹುಡುಗನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಸುಭಮ್‌ ಅನುಮಾನಿಸಿದ್ದ. ಈ ನಡುವೆ ಯುವತಿ ಆತನೊಂದಿಗೆ ಮಾತನಾಡಲು ಹಿಂದೇಟು ಹಾಕುತ್ತಿದ್ದಳು. ಇದರಿಂದ ಆತ ಇನ್ನಷ್ಟು ಕುಪಿತಗೊಂಡಿದ್ದ ಎಂದು ಎಸ್‌‍ಎಸ್‌‍ಪಿ ತಿಳಿಸಿದ್ದಾರೆ.

RELATED ARTICLES

Latest News