ಬೆಂಗಳೂರು,ಆ.3-ನಗರದ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಪಿಜಿ ಮಾಲೀಕ ಅತ್ಯಾಚಾರ ಎಸಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೆ ಪೊಲೀಸರು ಪಿಜಿ ಮಾಲೀಕ ಮೂಲತಃ ಕೇರಳದ ನಿವಾಸಿ ಅಶ್ರಫ್(37) ಎಂಬಾತನನ್ನು ಬಂಧಿಸಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಶ್ರಫ್ ಪಿಜಿ ನಡೆಸುತ್ತಿದ್ದಾನೆ. ಅದಕ್ಕೆ 10 ದಿನಗಳ ಹಿಂದೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಸೇರಿಕೊಂಡಿದ್ದಾರೆ. ಶನಿವಾರ ರಾತ್ರಿ ಆರೋಪಿ ಅಶ್ರಫ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ದೂರು ನೀಡದಂತೆ ಬೆದರಿಕೆ ಹಾಕಿದ್ದ. ನಂತರ ನೊಂದ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದು, ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಬಿಹಾರ ವಿಧಾನಸಭೆ ಚುನಾವಣೆ : ಇಂದು ಮೊದಲ ಹಂತದ ಮತದಾನ
- ಮನೆ ತೊರೆದ ಪತ್ನಿ, ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ
- ಜಿಎಸ್ಟಿ ಇಳಿಕೆಯ ಹೊರತಾಗಿಯೂ ಅಕ್ಟೋಬರ್ನಲ್ಲಿ ವಾಣಿಜ್ಯ ತೆರಿಗೆಗಳ ಸಂಗ್ರಹದಲ್ಲಿ ಗಣನೀಯ ಹೆಚ್ಚಳ
- ಬಿಹಾರ ಚುನಾವಣೆ : ಹಾಡಿನ ಮೂಲಕ ಮತದಾನಕ್ಕೆ ಪ್ರೇರಿಪಿಸುತ್ತಿರುವ ಐಎಎಸ್ ಅಧಿಕಾರಿ
- ಫಿಲಿಪೈನ್ಸ್ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ : ಚಂಡಮಾರುತಕ್ಕೆ 241 ಜನ ಬಲಿ
