ಬೆಂಗಳೂರು, ಆ.4– ಶ್ರಾವಣ ಮಾಸ ಸಾಲುಸಾಲು ಹಬ್ಬಗಳನ್ನು ಹೊತ್ತು ತಂದಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು ನಾಲ್ಕು ದಿನ ಬಾಕಿ ಇದ್ದು ಏಲಕ್ಕಿ ಬಾಳೆಹಣ್ಣಿನ ಬೆಲೆ ಗಗನಕ್ಕೆ ಏರುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಶ್ರಾವಣದಲ್ಲಿ ಹಬ್ಬಗಳು, ಮದುವೆ, ನಾಮಕರಣ, ಗೃಹಪ್ರವೇಶ, ದೇವಾಲಯಗಳಲ್ಲಿ ಪೂಜೆ ಸೇರಿದಂತೆ ಶುಭಕಾರ್ಯಗಳು ಹೆಚ್ಚಾಗಿ ನಡೆಯಲಿದ್ದು, ಪೂಜೆಯಲ್ಲಿ ಪ್ರಮುಖ ಆಕರ್ಷಣೆ ಹಾಗೂ ಅಗ್ರಗಣ್ಯಸ್ಥಾನ ಪಡೆದಿರುವ ಬಾಳೆಹಣ್ಣಿನ ಬೆಲೆ ಏರಿಕೆಯಾಗಿದ್ದು, ಆಷಾಢಮಾಸದಲ್ಲಿ ಕೆಜಿಗೆ 60 ರೂ.ಗಳಿಂದ 70 ರೂ.ಗೆ ಮಾರಾಟವಾಗುತ್ತಿದ್ದ ಬಾಳೆಹಣ್ಣು ಪ್ರಸ್ತುತ 100 ರೂ. ತಲುಪಿದ್ದು, ಹಬ್ಬಕ್ಕೆ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಹೆಚ್ಚಾಗಿ ಬಾಳೆ ಬೆಳೆಯುವ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆಷಾಢದಲ್ಲಿ ಬೀಸಿದ ಭಾರೀ ಗಾಳಿಗೆ ಬಾಳೆಗಿಡಗಳು ಮುರಿದುಬಿದ್ದಿದ್ದು, ಇಳುವರಿ ಕುಂಠಿತವಾಗಿದೆ. ಜೊತೆಗೆ ರೋಗಬಾಧೆಯಿಂದಲೂ ಸಹ ಈ ಬಾರಿ ರೈತರಿಗೆ ಇಳುವರಿಯಲ್ಲಿ ಭಾರೀ ನಷ್ಟವಾಗಿದೆ. ಇರುವ ತೋಟಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹಾಪ್‌ಕಾಮ್ಸೌನಲ್ಲಿ ಏಲಕ್ಕಿ ಬಾಳೆಗೆ 85 ರೂ.ಗಳಿಂದ 87 ರೂ. ಬೆಲೆ ನಿಗದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ 120 ರೂ.ಗಳಿಗೆ ಮಾರಾಟವಾಗುತ್ತಿದೆ.
ಇದರಿಂದ ಬಾಳೆಕಾಯಿ ಮಂಡಿಯವರು ಹಾಗೂ ವರ್ತಕರು ರೈತರ ತೋಟಗಳಿಗೆ ಭೇಟಿ ನೀಡಿ ಖರೀದಿಗೆ ಮುಂದಾಗಿದ್ದಾರೆ. ಆದರೂ ಸಹ ಅಪರೂಪಕ್ಕೊಮೆ ಬೆಲೆ ಬಂದಿದೆ. ನಾವು ತೋಟ ಕೊಡುವುದಿಲ್ಲ. ನಾವೇ ಮಾರಾಟ ಮಾಡುತ್ತೇವೆ ಎಂದು ಕೆಲ ರೈತರು ಮಾರುಕಟ್ಟೆಗೆ ಬಾಳೆಕಾಯಿಯನ್ನು ತಂದು ಉತ್ತಮ ಬೆಲೆಗೆ ಮಾರಾಟ ಮಾಡಿದ್ದಾರೆ.
ಪಚ್ಬಾಳೆ ಬೆಲೆಯೂ ಏರಿಕೆ :
ಸಾಮಾನ್ಯವಾಗಿ ಪಚ್ಬಾಳೆ ಕೆಜಿಗೆ 30 ರೂ. ದಾಟಿದರೆ ಹೆಚ್ಚು. ಆದರೆ ಕೆಲವು ತಿಂಗಳುಗಳಿಂದ 45 ರೂ.ಗೆ ಮಾರಾಟವಾಗುತ್ತಿದ್ದು, ಪ್ರಸ್ತುತ ಈ ಹಣ್ಣು ಕೂಡ 50 ರೂ. ತಲುಪಿದೆ. ಬಡವರು ಹಬ್ಬ ಮಾಡುವುದೇ ದುಸ್ತರವಾಗಿದೆ. ಆದರೂ ಸಹ ಸಂಪ್ರದಾಯವನ್ನು ಬಿಡಬಾರದು ಎಂದು ದುಬಾರಿ ಬೆಲೆ ತೆತ್ತು ಹಬ್ಬಕ್ಕೆ ಅಗತ್ಯವಸ್ತುಗಳ ಖರೀದಿಯಲ್ಲಿ ಗ್ರಾಹಕರು ತೊಡಗಿದ್ದಾರೆ.
- ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ವಾಯುಪ್ರದೇಶ ನಿಷೇಧಿಸಿ ಭಾರಿ ನಷ್ಟ ಅನುಭವಿಸಿದ ಪಾಕ್
- ಮಂಗಳವಾರ ಪಾಕ್ ಮಾಜಿ ಪ್ರಧಾನಿ ಇಮ್ರಾನ್ಖಾನ್ ಜಾಮೀನು ಅರ್ಜಿ ವಿಚಾರಣೆ
- ಅಂತರರಾಷ್ಟ್ರೀಯ ಐಎಂಇಸಿ ಯೋಜನೆಯಲ್ಲಿ ಭಾರತದ ಪಾತ್ರ ನಿರ್ಣಾಯಕ ; ಇಟಲಿ
- ಉತ್ತರಪ್ರದೇಶ : ಟ್ರಾನ್ಸ್ಜೆಂಡರ್ ಮಹಿಳೆ ಮತ್ತು ಸಹೋದರನ ಬರ್ಬರ ಕೊಲೆ
- ಮತಗಳ್ಳತನದ ವೆಬ್ಪೇಜ್ ಆರಂಭಿಸಿದ ಕಾಂಗ್ರೆಸ್