Tuesday, August 5, 2025
Homeರಾಜ್ಯನ.1ರೊಳಗೆ ಬಿಬಿಎಂಪಿ ಕ್ಷೇತ್ರ ವಿಂಗಡಣೆ ಪೂರ್ಣಗೊಳಿಸಲು ಸುಪ್ರೀಂ ಸೂಚನೆ

ನ.1ರೊಳಗೆ ಬಿಬಿಎಂಪಿ ಕ್ಷೇತ್ರ ವಿಂಗಡಣೆ ಪೂರ್ಣಗೊಳಿಸಲು ಸುಪ್ರೀಂ ಸೂಚನೆ

Supreme Court orders BBMP constituency delimitation to be completed by November 1

ಬೆಂಗಳೂರು,ಆ.4- ಬಹುನಿರೀಕ್ಷಿತ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ನವೆಂಬರ್‌ 1ರೊಳಗೆ ಪೂರ್ಣಗೊಳಿಸಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.

ಮುಂದುವರೆದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ನವೆಂಬರ್‌ 1ರೊಳಗೆ ಬಿಬಿಎಂಪಿಯ ಕ್ಷೇತ್ರ ಪುನರ್‌ ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅದಾದ ನಂತರ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಸಿದ್ದಪಡಿಸಬೇಕೆಂದು ಆಯೋಗಕ್ಕೆ ಸೂಚಿಸಿ ಮುಂದಿನ ಅರ್ಜಿ ವಿಚಾರಣೆಯನ್ನು ನ.3ಕ್ಕೆ ಮುಂದೂಡಿತು.

ಕ್ಷೇತ್ರ ಪುನರ್‌ ವಿಂಗಡಣೆಗೆ ಕನಿಷ್ಠ 60 ದಿನದಿಂದ 90 ದಿನ ಬೇಕಾಗುತ್ತದೆ. ಹೀಗಾಗಿ ನ್ಯಾಯಾಲಯ ಸ್ವಲ್ಪ ದಿನ ಹೆಚ್ಚಿನ ಸಮಯ ಅವಕಾಶವನ್ನು ನೀಡಬೇಕೆಂದು ಚುನಾವಣಾ ಆಯೋಗದ ಪರ ವಕೀಲ ಕೆ.ಎನ್‌.ಪಣೀಂದ್ರ ಮನವಿ ಮಾಡಿದರು.

ಆದರೆ ಇದನ್ನು ಒಪ್ಪದ ನ್ಯಾಯಾಲಯ ಪ್ರತಿ ಸಂದರ್ಭದಲ್ಲೂ ಈ ರೀತಿ ಸಬೂಬು ಹೇಳಿಕೊಂಡೇ ಚುನಾವಣೆ ಮುಂದೂಡುತ್ತಾ ಬಂದಿದ್ದೀರಿ. ಇನ್ನು ಸಮಯ ಅವಕಾಶ ಕೊಡಲು ಆಗುವುದಿಲ್ಲ. ನ.1ರೊಳಗೆ ಬಿಬಿಎಂಪಿಯ ಪುನರ್‌ ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಮುಂದಿನ ಅರ್ಜಿ ವಿಚಾರಣೆ ವೇಳೆ ಇಲ್ಲಸಲ್ಲದ ಕಾರಣಗಳನ್ನು ಹೇಳಬಾರದೆಂದು ಪೀಠ ಸೂಚನೆ ಕೊಟ್ಟಿತು.

RELATED ARTICLES

Latest News