ಬೆಂಗಳೂರು,ಆ.4- ನನ್ನನ್ನು ಕ್ಷಮಿಸಿ ….. ಎಂದು ಏಳನೇ ತರಗತಿ ವಿದ್ಯಾರ್ಥಿ ತನ್ನ ಪೋಷಕರಿಗೆ ಪತ್ರ ಬರೆದು ಆತಹತ್ಯೆ ಮಾಡಿಕೊಂಡಿದ್ದಾನೆ. ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಬನಶಂಕರಿ 3ನೇ ಹಂತ, ಬನಗಿರಿ ನಗರದ ನಿವಾಸಿ ಗಣೇಶ್ ಪ್ರಸಾದ್ ಅವರ ಪುತ್ರ ಗಂಧಾರ್ (14) ಆತಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.
ಮ್ಯೂಸಿಕ್ ಆರ್ಟಿಸ್ಟ್ ಆಗಿರುವ ಗಣೇಶ್ ಪ್ರಸಾದ್ ಅವರಿಗೆ ಇಬ್ಬರು ಮಕ್ಕಳು. ಈ ಪೈಕಿ ಗಂಧಾರ್ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.ರಾತ್ರಿ ಎಂದಿನಂತೆ ಊಟ ಮಾಡಿ ಗಂಧಾರ್ ಮಲಗಿದ್ದಾನೆ. ಇಂದು ಬೆಳಗ್ಗೆ ಎಷ್ಟುಹೊತ್ತಾದರೂ ರೂಂ ನಿಂದ ಹೊರಗೆ ಬಂದಿಲ್ಲ.
ಶಾಲೆಗೆ ಕಳುಹಿಸುವ ಸಲುವಾಗಿ ಮಗನನ್ನು ಎಬ್ಬಿಸಲು ತಂದೆ ರೂಂ ಬಳಿ ಹೋಗಿ ಕೂಗಿದರೂ ಹೊರಗೆ ಬಂದಿಲ್ಲ. ತಕ್ಷಣ ಬಾಗಿಲು ತಳ್ಳಿ ನೋಡಿದಾಗ ಗಿಟಾರ್ ನೇತುಹಾಕುವ ಮೊಳೆಗೆ ವೇಲ್‌ನಿಂದ ನೇಣುಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವುದು ಕಂಡು ಗಾಬರಿಯಾಗಿ ಚೀರಿಕೊಂಡಿದ್ದಾರೆ.
ರೂಂನಲ್ಲಿದ್ದ ಕಾಗದ ತೆಗೆದು ನೋಡಿದಾಗ, ಅದರಲ್ಲಿ ನನಗೆ ಕ್ಷಮಿಸಿ ಎಂದು ಆತಹತ್ಯೆಗೂ ಮುನ್ನ ಬರೆದಿರುವುದು ಕಂಡುಬಂದಿದೆ. ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದು ಸಿಕೆ ಅಚ್ಚುಕಟ್ಟು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಡೆತ್‌ನೋಟ್ ವಶಕ್ಕೆ ಪಡೆದು ಬಾಲಕನ ಮೃತದೇಹವನ್ನು ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿದ್ದಾರೆ. ಆತಹತ್ಯೆಗೆ ನಿಖರವಾದ ಕಾರಣವೇನೆಂಬುವುದು ಸದ್ಯಕ್ಕೆ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
- ಹೈಕೋರ್ಟ್ ಎಚ್ಚರಿಕೆ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆದ ಸಾರಿಗೆ ನೌಕರರು
- ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ ಮತ್ತೆ 40 ದಿನಗಳ ಪೆರೋಲ್
- “ಸಿದ್ದರಾಮಯ್ಯನವರೇ, ಈ ನವರಂಗಿ ಆಟ ನಿಲ್ಲಿಸಿ, ರಾಜೀನಾಮೆ ನೀಡಿ ಕರ್ನಾಟಕವನ್ನು ಉಳಿಸಿ” : ಆರ್.ಅಶೋಕ್
- ರಾಹುಲ್ ಗಾಂಧಿಗೆ ಛೀಮಾರಿ ಹಾಕಿದ ಸುಪ್ರೀಂ, ಇಂಡಿ ನಾಯಕರ ಆಕ್ಷೇಪ
- ಉತ್ತರ ಕಾಶಿಯಲ್ಲಿ ಭೀಕರ ಮೇಘ ಸ್ಫೋಟ : ಹಲವರ ಸಾವು, 60ಕ್ಕೂ ಹೆಚ್ಚು ಜನ ನಾಪತ್ತೆ