Tuesday, August 5, 2025
Homeಬೆಂಗಳೂರುಬೆಂಗಳೂರು : ಮಹಿಳೆ ಮುಂದೆ ಅಸಭ್ಯ ವರ್ತಿಸಿದ ಸೆಕ್ಯುರಿಟಿ ಗಾರ್ಡ್‌

ಬೆಂಗಳೂರು : ಮಹಿಳೆ ಮುಂದೆ ಅಸಭ್ಯ ವರ್ತಿಸಿದ ಸೆಕ್ಯುರಿಟಿ ಗಾರ್ಡ್‌

Bengaluru: Security guard misbehaves in front of woman

ಬೆಂಗಳೂರು,ಆ.4-ಸೆಕ್ಯೂರಿಟಿ ಗಾರ್ಡ್‌ ಮಹಿಳೆಯೊಬ್ಬರ ಮುಂದೆ ಅಸಭ್ಯವಾಗಿ ವರ್ತಿಸಿರುವ ಘಟನೆ ಕೆಂಗೇರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿ ಉಪನಗರದ ಮಾರ್ಟ್‌ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡಿಕೊಂಡಿರುವ ವ್ಯಕ್ತಿಯೊಬ್ಬ ಮಾರ್ಟ್‌ಗೆ ಬರುವ ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದ್ದಾನೆ.

ಇದನ್ನು ಗಮನಿಸಿದ ಮಹಿಳೆಯೊಬ್ಬರು ಮಾರ್ಟ್‌ನ ಮ್ಯಾನೇಜರ್‌ಗೆ ಹೇಳಲು ಹೋಗುತ್ತಿದ್ದಾಗ ಅವರ ಮುಂದೆಯೇ ಪ್ಯಾಂಟ್‌ ಜಿಪ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಅಶ್ಲೀಲವಾಗಿ ನಿಂದಿಸಿದ್ದಾನೆ.

ಮ್ಯಾನೇಜರ್‌ಗೆ ಹೇಳಲು ಹೋದಾಗ ಅವರುಗಳ ಮಧ್ಯೆ ಗಲಾಟೆಯಾಗಿ ಮಾತಿಗೆ ಮಾತು ಬೆಳೆದಿದ್ದು, ಸೆಕ್ಯೂರಿಟಿ ಗಾರ್ಡ್‌ ಮಹಿಳೆ ಮೇಲೆ ಹಲ್ಲೆ ಮಾಡಿದ್ದರಿಂದ ಕತ್ತು , ಕಿವಿ ಭಾಗದಲ್ಲಿ ರಕ್ತ ಗಾಯವಾಗಿದೆ.ಈ ಬಗ್ಗೆ ಮಹಿಳೆ ಕೆಂಗೇರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News