ನವದೆಹಲಿ, ಆ.5- ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ಸಂಸ್ಥೆಯ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪಿ. ಬಿ ಬಾಲಾಜಿ ಅವರನ್ನು ನೇಮಕ ಮಾಡಲಾಗಿದೆ.ಹೀಗಾಗಿ ಬಾಲಾಜಿ ಅವರು ಬ್ರಿಟಿಷ್ ಕಾರು ತಯಾರಕ ಸಂಸ್ಥೆಯನ್ನು ಮುನ್ನಡೆಸುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಸ್ತುತ ಟಾಟಾ ಮೋಟಾರ್ಸ್‌ನಲ್ಲಿ ಗ್ರೂಪ್ ಸಿಎಫ್‌ಒ ಆಗಿರುವ ಬಾಲಾಜಿ, ಆಡ್ರಿಯನ್ ಮಾರ್ಡೆಲ್ ಅವರ ಅವಧಿಯ ಕೊನೆಯಲ್ಲಿ ನಿವೃತ್ತರಾದ ನಂತರ ನವೆಂಬರ್‌ನಲ್ಲಿ ಹೊಸ ಹುದ್ದೆಗೆ ಕಾಲಿಡಲಿದ್ದಾರೆ.
ಟಾಟಾ ಗ್ರೂಪ್‌ನ ಅನುಭವಿ ಬಾಲಾಜಿ, ಜಾಗ್ವಾರ್ ಲ್ಯಾಂಡ್ ರೋವರ್ ಆಟೋಮೋಟಿವ್ ಪಿಎಲ್‌ಸಿ (ಯುಕೆ), ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್‌್ಸ, ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಏರ್ ಇಂಡಿಯಾ ಸೇರಿದಂತೆ ಹಲವಾರು ಗ್ರೂಪ್ ಕಂಪನಿಗಳ ಮಂಡಳಿಗಳಲ್ಲಿದ್ದಾರೆ.
ಪಿಬಿ ಬಾಲಾಜಿ ಯಾರು?
ಪಿಬಿ ಬಾಲಾಜಿ ಐಐಟಿ ಮದ್ರಾಸ್‌ನಿಂದ (1991) ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಮತ್ತು ಐಐಎಂ ಕಲ್ಕತ್ತಾದಿಂದ (1993) ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದಾರೆ.
ಬಾಲಾಜಿ 1995 ರಲ್ಲಿ ಯೂನಿಲಿವರ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಭಾರತ, ಸಿಂಗಾಪುರ್, ಯುಕೆ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಾದ್ಯಂತ ಹಿರಿಯ ಕಾರ್ಪೊರೇಟ್ ಹಣಕಾಸು ಪಾತ್ರಗಳನ್ನು ವಹಿಸಿಕೊಂಡರು. ಅವರು 2017 ರವರೆಗೆ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ನವೆಂಬರ್ 2017 ರಲ್ಲಿ, ಬಾಲಾಜಿ ಅವರು ಟಾಟಾ ಮೋಟಾರ್ಸ್‌ನಲ್ಲಿ ಗ್ರೂಪ್ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇರಿದರು ಮತ್ತು ಒಂದು ತಿಂಗಳ ನಂತರ ಜಾಗ್ವಾರ್ ಲ್ಯಾಂಡ್ ರೋವರ್ ಆಟೋಮೋಟಿವ್ ಪಿಎಲ್‌ಸಿ (ಯುಕೆ) ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ (ಸ್ವತಂತ್ರೇತರ) ನಿರ್ದೇಶಕರಾಗಿ ನೇಮಕಗೊಂಡರು.
- ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ವಾಯುಪ್ರದೇಶ ನಿಷೇಧಿಸಿ ಭಾರಿ ನಷ್ಟ ಅನುಭವಿಸಿದ ಪಾಕ್
- ಮಂಗಳವಾರ ಪಾಕ್ ಮಾಜಿ ಪ್ರಧಾನಿ ಇಮ್ರಾನ್ಖಾನ್ ಜಾಮೀನು ಅರ್ಜಿ ವಿಚಾರಣೆ
- ಅಂತರರಾಷ್ಟ್ರೀಯ ಐಎಂಇಸಿ ಯೋಜನೆಯಲ್ಲಿ ಭಾರತದ ಪಾತ್ರ ನಿರ್ಣಾಯಕ ; ಇಟಲಿ
- ಉತ್ತರಪ್ರದೇಶ : ಟ್ರಾನ್ಸ್ಜೆಂಡರ್ ಮಹಿಳೆ ಮತ್ತು ಸಹೋದರನ ಬರ್ಬರ ಕೊಲೆ
- ಮತಗಳ್ಳತನದ ವೆಬ್ಪೇಜ್ ಆರಂಭಿಸಿದ ಕಾಂಗ್ರೆಸ್