ಬೆಳಗಾವಿ, ಆ.6- ಪಶ್ಚಿಮ ಘಟಕದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಾಟರ್ಮ್ಯಾನ್ವೊಬ್ಬರು ವಾಹನ ಸಮೇತ ಕೊಚ್ಚಿ ಹೋಗಿರುವ ಘಟನೆ ಬೆಳಗಾವಿಯ ತಾರಿಹಾಳ ಗ್ರಾಮದಲ್ಲಿ ನಡೆದಿದೆ.
ಖಾನಾಪುರ ತಾಲ್ಲೂಕಿನ ಗಾಡಿಕೊಪ್ಪದ ವಾಟರ್ ವ್ಯಾನ್ ಸುರೇಶ ನಿಜಗುಣಿ ಗುಂಡಣ್ಣವರ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ.ಚಂದನಹೊಸುರಿನಲ್ಲಿ ಪೈಪ್ ಲೈನ್ ರಿಪೇರಿ ಕೆಲಸ ಮುಗಿಸಿ ತಾರಿಹಾಳ ಗ್ರಾಮಕ್ಕೆ ಹಿಂತಿರುಗುತ್ತಿದ್ದ ವೇಳೆ ಹಳ್ಳದಲ್ಲಿ ಹರಯುತ್ತಿದ್ದ ನೀರಿನ ರಭಸ ಹೆಚ್ಚಾಗಿದ್ದು, ದ್ವಿಚಕ್ರ ವಾಹನ ಸಮೇತ ಕೊಚ್ಚಿ ಹೋಗಿದ್ದಾರೆ.
ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.