ಬೆಂಗಳೂರು,ಆ.6-ಸ್ನೇಹಿತನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ತಿರುಪಾಳ್ಯದ ನಿವಾಸಿ ಮಂದಿರ ಮಂಡಲ್ (27) ಕೊಲೆಯಾದ ದುರ್ದೈವಿ. ಮತ್ತು ಸುಮನ್‌ಮಂಡಲ್ (28) ಕೊಲೆ ಮಾಡಿ ಆತಹತ್ಯೆಗೆ ಶರಣಾದ ಆರೋಪಿ. ಇವರಿಬ್ಬರು ಪಶ್ಚಿಮ ಬಂಗಾಳದವರು.
ಪಶ್ಚಿಮ ಬಂಗಾಳದ ಬಿಜೋನ್ ಮಂಡಲ್ ಎಂಬುವವರು ಎಂಟು ವರ್ಷದ ಹಿಂದೆ ಮಂದಿರ ಮಂಡಲ್ ಅವರನ್ನು ವಿವಾಹವಾಗಿದ್ದು, ದಂಪತಿಗೆ 6 ವರ್ಷದ ಮಗನಿದ್ದಾನೆ.
ತಿರುಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮಂದಿರ ಮಂಡಲ್ ಕುಟುಂಬ ವಾಸವಾಗಿದ್ದು, ಕೆಲಸದ ನಿಮಿತ್ತ ಇವರ ಪತಿ ಬಿಜೋನ್‌ಮಂಡಲ್ ಅವರು ಸ್ನೇಹಿತ ಸುಮನ್ ಮಂಡಲ್ ಜೊತೆ ಅಂಡಮಾನ್‌ಗೆ ತೆರಳಿದ್ದಾರೆ.
ಕಳೆದ 15 ದಿನಗಳ ಹಿಂದೆ ಸುಮನ್ ಮಂಡಲ್ ಅಂಡಮಾನ್‌ನಿಂದ ವಾಪಸ್ ಹೆಬ್ಬಗೋಡಿಗೆ ಬಂದಿದ್ದಾನೆ. ನಿನ್ನೆ ಸಂಜೆ ಮಂದಿರ ಅವರ ಮನೆಗೆ ಸುಮನ್ ಹೋಗಿದ್ದಾಗ, ಆ ಸಂದರ್ಭದಲ್ಲಿ ಮಂದಿರ ಹಾಗೂ ಸುಮನ್ ನಡುವೆ ಯಾವುದೋ ವಿಚಾರವಾಗಿ ಜಗಳವಾಗಿದೆ. ಒಂದು ಹಂತದಲ್ಲಿ ಇವರಿಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿದಾಗ ಮನೆಯಲ್ಲಿದ್ದ ಚಾಕುವಿನಿಂದ ಮಂದಿರ ಅವರ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ.
ನಂತರ ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಮಂದಿರ ಅವರ ಮನೆಯ ರೂಂನಲ್ಲಿರುವ ಫ್ಯಾನ್‌ಗೆ ಸುಮನ್ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ.ಇವರ ಮನೆಯಲ್ಲಿ ಗಲಾಟೆಯಾಗುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಇವರ ಮನೆ ಬಳಿಬಂದು ನೋಡಿದಾಗ ಮಂದಿರ ಕೊಲೆಯಾಗಿರುವುದು ಕಂಡು ಬಂದಿದೆ.
ತಕ್ಷಣ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಘಟನೆಗೆ ನಿಖರ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಈ ಕೊಲೆಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.