ಸೀತಾಪುರ,ಆ.7-ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡ ನಡೆಸಿದ ಎನ್‌ಕೌಂಟರ್‌ನಲ್ಲಿ ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರು ಅಪರಾಧಿಗಳು ಸಾವನ್ನಪ್ಪಿದ್ದಾರೆ.
ಪತ್ರಕರ್ತ ರಾಘವೇಂದ್ರ ಬಾಜ್‌ಪೈ ಅವರ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರು ಅಪರಾಧಿಗಳು ಹರ್ದೋಯ್‌ನಿಂದ ಸೀತಾಪುರ ಕಡೆಗೆ ಹೋಗುತ್ತಿದ್ದಾರೆ ಎಂದು ಪೊಲೀಸರಿಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಅಗರ್ವಾಲ್ ತಿಳಿಸಿದ್ದಾರೆ.
ಸುಳಿವಿನ ಮೇರೆಗೆ, ಎಸ್‌ಟಿಎಫ್ ಮತ್ತು ಸೀತಾಪುರ ಪೊಲೀಸರ ಜಂಟಿ ತಂಡವು ಪಿಸಾವನ್ ಪೊಲೀಸ್ ಠಾಣೆ ಪ್ರದೇಶದಲ್ಲಿ ತಪಾಸಣೆ ಮತ್ತು ಕೂಂಬಿಂಗ್ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು ಮತ್ತು ಮೋಟಾರ್ ಸೈಕಲ್‌ನಲ್ಲಿ ಇಬ್ಬರು ಆರೋಪಿಗಳಾದ ರಾಜು ತಿವಾರಿ ಅಲಿಯಾಸ್ ರಿಜ್ವಾನ್ ಮತ್ತು ಸಂಜಯ್ ತಿವಾರಿ ಅವರನ್ನು ಗುರುತಿಸಲಾಯಿತು.
ಅವರಿಗೆ ಎಚ್ಚರಿಕೆ ನೀಡಿ ನಿಲ್ಲಿಸುವಂತೆ ಕೇಳಿದಾಗ, ಇಬ್ಬರೂ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದರು. ಈ ವೇಳೆ ಆತರಕ್ಷಣೆಗಾಗಿ ನಮ ತಂಡ ಗುಂಡು ಹಾರಿಸಿದಾಗ ಇಬ್ಬರೂ ರೋಪಿಗಳು ಸಾವನ್ನಪ್ಪಿದರು ಎಂದು ಹೆಚ್ಚುವರಿ ಮಹಾನಿರ್ದೇಶಕ ಅಮಿತಾಭ್ ಯಶ್ ಹೇಳಿದರು.
ಪತ್ರಕರ್ತ ರಾಘವೇಂದ್ರ ಬಾಜ್‌ಪೈ ಕೊಲೆ ಪ್ರಕರಣದಲ್ಲಿ ಈ ಇಬ್ಬರು ಅಪರಾಧಿಗಳು ಬೇಕಾಗಿದ್ದರು ಮತ್ತು ಅವರನ್ನು ಬಂಧಿಸಿದವರಿಗೆ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಹೋಲಿ ಪ್ರದೇಶದ ವಿಕಾಸನಗರ ನಿವಾಸಿ ಬಾಜ್‌ಪೈ (36) ಅವರನ್ನು ಮಾರ್ಚ್ 8 ರಂದು ಲಕ್ನೋ-ದೆಹಲಿ ರಾಷ್ಟ್ರೀಯ ಹೆದ್ದಾರಿಯ ಹೆಂಪುರ್ ರೈಲ್ವೆ ಮೇಲ್ಸೇತುವೆ ಬಳಿ ಮೋಟಾರ್ ಸೈಕಲ್‌ನಲ್ಲಿ ಸೀತಾಪುರಕ್ಕೆ ಹೋಗುತ್ತಿದ್ದಾಗ ಗುಂಡಿಕ್ಕಿ ಕೊಲ್ಲಲಾಯಿತು.
2006 ರಲ್ಲಿ ಲಖಿಂಪುರದಲ್ಲಿ ಸಬ್ ಇನ್ಸ್ ಪೆಕ್ಟರ್‌ಪರ್ವೇಜ್ ಅಲಿಯನ್ನು ರಾಜು ಕೊಂದು ಅವರ ಸರ್ವಿಸ್ ಪಿಸ್ತೂಲ್ ಅನ್ನು ದೋಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ ಇದಲ್ಲದೆ ಸೀತಾಪುರದಲ್ಲಿ ಸಂಜಯ್ ಒಬ್ಬ ಮಹಿಳೆಯನ್ನು ಕೊಲೆ ಮಾಡಿದ್ದ ಎಂದು ತಿಳಿಸಿದ್ದಾರೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-08-2025)
- 80ರ ವೃದ್ಧನಿಗೆ ಪ್ರೀತಿ ಹೆಸರಲ್ಲಿ ನಾಲ್ವರು ಮಹಿಳೆಯರಿಂದ 9 ಕೋಟಿ ವಂಚನೆ
- ಸವಿತಕ್ಕ ಪುತ್ರನ ಆತಹತ್ಯೆಗೆ “ಡೆತ್ನೋಟ್” ವೆಬ್ಸೀರಿಸ್ ಕಾರಣವಂತೆ..?
- ಎಲ್ಲಾ ರಾಜ್ಯಗಳಲ್ಲೂ ಅನರ್ಹ ಮತದಾರರಿಗೆ ಕೋಕ್
- ಆನ್ಲೈನ್ ಗೇಮ್ಗಾಗಿ ಹಣಕ್ಕೆ ಪೀಡಿಸುತ್ತಿದ್ದ ತಂಗಿ ಮಗನನ್ನೇ ಕೊಂದ ಮಾವ