ನಾಗ್ಪುರ,ಆ.7- ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಾಜಿ ಶಾಸಕ ಹರ್ಷವರ್ಧನ್ ರೈಭನ್ ಜಾಧವ್‌ಗೆ ಇಲ್ಲಿನ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್‌ಜೆ ರೈ ಶಿಕ್ಷೆ ವಿಧಿಸಿದ್ದಾರೆ. ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಅವರ ಅಳಿಯ ಜಾಧವ್, ನಾಗ್ಪುರ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರಿಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿದ್ದರು.ಅವರು ಈ ಹಿಂದೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅವರು ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಸದಸ್ಯರಾಗಿದ್ದರು.
2014ರ ಡಿಸಂಬರ್‌ನಲ್ಲಿ ಅಂದಿನ ಶಿವಸೇನೆ (ಅವಿಭಜಿತ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಹೋಟೆಲ್‌ನಲ್ಲಿ ಸಭೆ ವೇಳೆ ಜಾಧವ್ ಇನ್‌್ಸಪೆಕ್ಟರ್ ಪರಾಗ್ ಜಾಧವ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು ಎಂದು ಸೋನೆಗಾಂವ್ ಪೊಲೀಸ್ ಠಾಣೆ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಈ ಹಿಂದೆ ತಾತ್ಕಾಲಿಕ ಜಾಮೀನು ನೀಡಲಾಗಿತ್ತು ಆದರೆ ವಿಚಾರಣೆಗೆ ಹಾಜರಾಗಲು ವಿಫಲರಾದರು, ನಂತರ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತು.ಈ ವರ್ಷದ ಫೆಬ್ರವರಿಯಲ್ಲಿ ಜಾಧವ್ ಅವರನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನಂತರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ಆದಾಗ್ಯೂ, ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ನಂತರ ಇಲ್ಲಿನ ಸರ್ಕಾರಿ ಮೇಯೊ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದಾರೆ.ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.ಪಬ್ಲಿಕ್ ಪ್ರಾಸಿಕ್ಯೂಟರ್ ಚಾರುಶೀಲಾ ಪೌನಿಕರ್ ಜಾಧವ್ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸಿದರು.
ಪಕರಣದಡಿಯಲ್ಲಿ ನ್ಯಾಯಾಲಯವು ಜಾಧವ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗು 10,000 ರೂ. ದಂಡವನ್ನು ವಿಧಿಸಲಾಗಿದೆ.ದಂಡವನ್ನು ಪಾವತಿಸಲು ವಿಫಲವಾದರೆ, ನ್ಯಾಯಾಲಯದ ಆದೇಶದ ಪ್ರಕಾರ ಅವರು ಹೆಚ್ಚುವರಿಯಾಗಿ ಮೂರು ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
- 80ರ ವೃದ್ಧನಿಗೆ ಪ್ರೀತಿ ಹೆಸರಲ್ಲಿ ನಾಲ್ವರು ಮಹಿಳೆಯರಿಂದ 9 ಕೋಟಿ ವಂಚನೆ
- ಸವಿತಕ್ಕ ಪುತ್ರನ ಆತಹತ್ಯೆಗೆ “ಡೆತ್ನೋಟ್” ವೆಬ್ಸೀರಿಸ್ ಕಾರಣವಂತೆ..?
- ಎಲ್ಲಾ ರಾಜ್ಯಗಳಲ್ಲೂ ಅನರ್ಹ ಮತದಾರರಿಗೆ ಕೋಕ್
- ಆನ್ಲೈನ್ ಗೇಮ್ಗಾಗಿ ಹಣಕ್ಕೆ ಪೀಡಿಸುತ್ತಿದ್ದ ತಂಗಿ ಮಗನನ್ನೇ ಕೊಂದ ಮಾವ
- ಮತಗಳ್ಳತನದ ವಿರುದ್ಧ ಬೆಂಗಳೂರಲ್ಲಿ ರಾಹುಲ್ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ