ಬೆಂಗಳೂರು,ಆ.8– ಖ್ಯಾತ ಹಿನ್ನೆಲೆ ಗಾಯಕಿ ಸವಿತಕ್ಕ ಅವರ 14 ವರ್ಷದ ಪುತ್ರನ ಆತಹತ್ಯೆಗೆ ವೆಬ್ಸಿರೀಸ್ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದಾ ವೆಬ್ಸೀರಿಸ್ ನೋಡುವ ಚಟಕ್ಕೆ ಬಿದ್ದಿದ್ದ ಅಪ್ರಾಪ್ತ ಬಾಲಕ ಸೀರಿಯಲ್ನಿಂದ ಖಿನ್ನತೆಗೆ ಒಳಗಾಗಿ ಆತಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವ ಸಾಧ್ಯತೆಗಳಿವೆ ಎಂಬ ಶಂಕೆ ಸಿಕೆ ಅಚ್ಚುಕಟ್ಟು ಠಾಣೆ ಪೊಲೀಸರಿಗೆ ಬಂದಿದೆ.
ಬನಶಂಕರಿ 3ನೇ ಹಂತ, ಬನಗಿರಿ ನಗರದ ನಿವಾಸಿ ಮ್ಯೂಸಿಕ್ ಆರ್ಟಿಸ್ಟ್ ಗಣೇಶ್ ಪ್ರಸಾದ್ ಮತ್ತು ಸವಿತಕ್ಕ ಅವರ ಪುತ್ರ ಗಂಧಾರ್ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.ಆ.3 ರಂದು ರಾತ್ರಿ ಎಂದಿನಂತೆ ಊಟ ಮಾಡಿ ಗಂಧಾರ್ ಮಲಗಿದ್ದಾನೆ. ಮಾರನೆ ದಿನ ಬೆಳಗ್ಗೆ ಎಷ್ಟುಹೊತ್ತಾದರೂ ರೂಂ ನಿಂದ ಹೊರಗೆ ಬಂದಿರಲಿಲ್ಲ.
ಹಾಗಾಗಿ ಬಾಗಿಲು ತಳ್ಳಿ ನೋಡಿದಾಗ ಗಿಟಾರ್ ನೇತುಹಾಕುವ ಮೊಳೆಗೆ ವೇಲ್ನಿಂದ ನೇಣುಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದ.ಆತನ ಡೆತ್ನೋಟ್ನಲ್ಲಿ ನನ್ನನ್ನು ಕ್ಷಮಿಸಿ, ನಾನು ಸ್ವರ್ಗಕ್ಕೆ ಹೋಗುತ್ತಿದ್ದೇನೆ ಎಂದು ಬರೆದಿರುವುದು ಕಂಡುಬಂದಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಪೊಲೀಸರು ಬಾಲಕನ ಆತಹತ್ಯೆಗೆ ಕಾರಣವೇನೆಂಬುವುದು ಗೊತ್ತಾಗಿರಲಿಲ್ಲ.ನಂತರ ಆತ ಬಳಸುತ್ತಿದ್ದ ಮೊಬೈಲ್ ಪರಿಶೀಲಿಸಿದಾಗ ಹಲವು ವಿಚಾರಗಳು ಬೆಳಕಿಗೆ ಬಂದಿವೆ.
ಗಂಧಾರ್ ಮೊಬೈಲ್ ಹೆಚ್ಚಾಗಿ ಬಳಸುತ್ತಿದ್ದ. ಜಪಾನಿಸ್ ಭಾಷೆಯಲ್ಲಿ ಬಿಡುಗಡೆಯಾಗಿ ಪ್ರಸಿದ್ಧಿ ಪಡೆದಿರುವ ಡೆತ್ನೋಟ್ ವೆಬ್ ಸೀರಿಸ್ನ ಎಲ್ಲಾ ಸಂಚಿಕೆಗಳನ್ನು ತಪ್ಪದೇ ನೋಡಿ ಆ ಪಾತ್ರ ಹೇಳಿದಂತೆ ಹೀರೋ ನಡೆದುಕೊಳ್ಳುತ್ತಿರುವುದನ್ನು ಗಮನಿಸಿದ್ದಾನೆ.
ಅದರಂತೆ ಆ ಮಾಯಾ ಬುಕ್ನಲ್ಲಿ ಯಾರ ಹೆಸರು ಬರೆದು, ಅವರು ಹೇಗೆ ಸಾಯಬೇಕು ಎಂಬ ಊಹೆ ಮಾಡಿಕೊಂಡರೆ ಆ ವ್ಯಕ್ತಿ ಸಾಯುತ್ತಾನೆ. ಕೆಟ್ಟವರು ಯಾರೂ ಭೂಮಿ ಮೇಲೆ ಬದುಕಬಾರದು ಅವರನ್ನು ಕೊಲೆ ಮಾಡಬೇಕೆಂಬುವುದೇ ಆ ವೆಬ್ಸೀರಿಸ್ನ ಕಥಾವಸ್ತು. ಆ ವೆಬ್ ಸೀರಿಸ್ ನೋಡಿ ಅದರ ಪ್ರಭಾವಕ್ಕೆ ಒಳಗಾಗಿ ಬಾಲಕ ಆತಹತ್ಯೆ ಮಾಡಿಕೊಂಡಿದ್ದಾನೆಯೇ ಎಂಬ ಶಂಕೆ ಈಗ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.