Friday, November 7, 2025
Homeರಾಜ್ಯಚಿಕ್ಕೋಡಿ-ಗೋಕಾಕ್ ಬಂದ್: ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ರೈತರ ಆಕ್ರೋಶ

ಚಿಕ್ಕೋಡಿ-ಗೋಕಾಕ್ ಬಂದ್: ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ರೈತರ ಆಕ್ರೋಶ

ಬೆಳಗಾವಿ/ ಬೆಂಗಳೂರು, ನ.7- ತಾವು ಬೆಳೆದಿರುವ ಕಬ್ಬಿಗೆ ಸೂಕ್ತವಾದ ಬೆಲೆಯನ್ನು ನಿಗದಿ ಪಡಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ರೈತರು ನಡೆಸುತ್ತಿರುವ ಹೋರಾಟ 9 ದಿನಕ್ಕೆ ಕಾಲಿಟ್ಟಿದ್ದು, ಸಮಸ್ಯೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಅತ್ತ ಸಕ್ಕರೆ ಕಾರ್ಖಾನೆ ಮಾಲೀಕರು ರೈತರು ಮುಂದಿಟ್ಟಿರುವ ನಿಗಧಿತ ಬೆಲೆಯನ್ನು ಕೊಡಲು ಒಪ್ಪುತ್ತಿಲ್ಲ, ಇತ್ತ ಅನ್ನದಾತರು ತಮ ಬೇಡಿಕೆ
ಯಿಂದ ಹಿಂದೆ ಸರಿಯದ ಕಾರಣ, ಸರ್ಕಾರಕ್ಕೆ ಇದು ದಿನದಿಂದ ದಿನಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಇನ್ನೊಂದೆಡೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ, ಗುಲಬರ್ಗಾ, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಪುಣೆ-ಬೆಂಗಳೂರು ಹೆದ್ದಾರಿ ಬಂದ್:ಬೆಳಗಾವಿಯ ಹತ್ತರಗಿ ಟೋಲ್ ಬಳಿ ಕಬ್ಬು ಬೆಳೆಗಾರರು ಹೋರಾಟ ತೀವ್ರಗೊಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ಗಳನ್ನು ತಂದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ ಏಕಾಏಕಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಹೋರಾಟಕ್ಕೆ ಆಟೋ ಸಂಘಟನೆ, ಮಾಜಿ ಸೈನಿಕರ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಚಿಕ್ಕೋಡಿ-ಗೋಕಾಕ್ ಬಂದ್: ಈ ನಡುವೆ ಚಿಕ್ಕೋಡಿ ಹಾಗೂ ಗೋಕಾಕ್ ಬಂದ್ಗೆ ಕರೆಕೊಡಲಾಗಿದ್ದು, ಈ ಎರಡು ನಗರಗಳು ಭಾಗಶಃ ಬಂದ್ ಆಗಿದೆ. ಚಿಕ್ಕೋಡಿ ಮತ್ತು ಗೋಕಾಕ ನಗರಗಳಲ್ಲಿ ವಕೀಲರು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಚಿಕ್ಕೋಡಿ, ಗೋಕಾಕ, ರಾಯಭಾಗ, ಹತ್ತರಗಿ ಮತ್ತು ಬೆಳಗಾವಿ ನಗರದಲ್ಲಿ ರೈತರು ಮತ್ತು ಪೊಲೀಸರ ನಡುವೆ ಬಿರುಸಿನ ವಾಗ್ವಾದಗಳಾಗಿವೆ. ರಾಷ್ಟ್ರೀಯ ಹೆದ್ದಾರಿ 4 ತಡೆಹಿಡಿದಿದ್ದ ರೈತರನು ಮನವೊಲಿಸಲು ಬೆಳಗಾವಿ ಜಿಲ್ಲಾ ಪೊಲೀಸರು ವಿಲರಾಗಿದ್ದು, ಒಂದು ಬದಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು.

ವಾಗ್ವಾದ:ಗೋಕಾಕ್ನ ನಗರದ ನಾಕಾ ನಂಬರ್ 1ರ ಬಳಿ ಪ್ರತಿಭಟನಾನಿರತ ರೈತರು ರಾಜ್ಯ ಹೆದ್ದಾರಿಯನ್ನು ತಡೆಯಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ಉಂಟಾಯಿತು. ರೈತರು ಹೆದ್ದಾರಿ ತಡೆಯಲು ಮುಂದಾದಾಗ, ಪೊಲೀಸರು ಅವರನ್ನು ತಡೆದರು. ರೈತರ ಮಾರ್ಗದಲ್ಲಿ ಪೊಲೀಸ್ ವ್ಯಾನ್ ನಿಲ್ಲಿಸಿದ್ದರಿಂದ ರೊಚ್ಚಿಗೆದ್ದ ರೈತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ತೀವ್ರಗೊಂಡು ಕೆಲ ರೈತರು ತಮ ಆಗ್ರಹಕ್ಕೆ ನ್ಯಾಯ ಕೇಳುವ ಸಲುವಾಗಿ ನೆಲದ ಮೇಲೆ ಬಿದ್ದು ಪ್ರತಿಭಟಿಸಿದರು.

ಸರ್ಕಾರ ಇಂದು ಸಂಜೆ 5 ಗಂಟೆ ಒಳಗೆ ಪ್ರತಿ ಟನ್ ಕಬ್ಬಿಗೆ ಎಫ್ಆರ್ಪಿ ಪ್ರಕಾರ 3,500 ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಬಾಗಲಕೋಟೆಯಲ್ಲಿ ರೈತರು ರಾಯಚೂರು-ಹೈದರಾಬಾದ್ಗೆ ಸಂಪರ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದರು. ನಮ ಬೇಡಿಕೆಯನ್ನು ಮತ್ತೆ ನಿರ್ಲಕ್ಷಿಸಿದರೆ ಕರ್ನಾಟಕದಾದ್ಯಂತ ಲಕ್ಷಾಂತರ ರೈತರು ಬೆಳಗಾವಿಗೆ ಮೆರವಣಿಗೆ ನಡೆಸಲಿದ್ದಾರೆ. ಸರ್ಕಾರ ಟನ್ಗೆ 3,500 ರೂ. ಘೋಷಿಸಿದ ಕ್ಷಣದಿಂದಲೇ ನಾವು ಪ್ರತಿಭಟನೆಯನ್ನು ಕೊನೆಗೊಳಿಸಲು ಸಿದ್ಧರಿದ್ದೇವೆ. ಆದರೆ ಅದಕ್ಕೂ ಮೊದಲು ಸಾಧ್ಯವೇ ಇಲ್ಲ ಎಂದು ಪ್ರತಿಭಟನಾ ನಿರತ ರೈತರು ಹೇಳಿದ್ದಾರೆ.

RELATED ARTICLES

Latest News