ಕಟ್ಮಂಡು ,ಆ.9- ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರನಾದ ಶಸ್ತ್ರಾಸ್ತ್ರ ಪೂರೈಕೆದಾರ ಸಲೀಂ ಅಲಿಯಾಸ್ ಸಲೀಂ ಅವನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಪಿಸ್ತೂಲ್‌ನನ್ನು ನೇಪಾಳದಲ್ಲಿ ವಶಪಡಿಸಿಕೊಂಡು ಆತನನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ನೇಪಾಳದಲ್ಲಿ ಅಡಗಿದ್ದ ಸಲೀಂನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಭದ್ರತಾ ಸಂಸ್ಥೆಗಳ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಸಲೀಂ ಪಿಸ್ತೂಲ್ ಕಳೆದ ಹಲವಾರು ವರ್ಷಗಳಿಂದ ಗ್ಯಾಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್, ಆಸಿಂ ಬಾಬಾ ಸೇರಿದಂತೆ ಅನೇಕರಿಗೆ ಪಾಕಿಸ್ತಾನದಿಂದ ಗುಣಮಟ್ಟದ ಶಸಾ್ತ್ರಸ್ತ್ರ ಗಳನ್ನು ಪೂರೈಸುತ್ತಿದ್ದ. ಅಲ್ಲದೆ ಈತ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ, ಭೂಗತಪಾತಕಿ ದಾವೂದ್ ಇಬ್ರಾಹಿಂನ ಡಿ ಕಂಪನಿಯೊಂದಿಗೆ ಸಂಪರ್ಕ ಹೊಂದಿದ್ದ ಎಂಬ ರಹಸ್ಯವನ್ನು ತನಿಖಾಧಿಕಾರಿಗಳು ಸಾಕ್ಷಿ ಸಮೇತ ಬಯಲಿಗೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ದು ಮುಸೇವಾಲ, ಬಾಬಾ ಸಿದ್ದಿಕಿ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಮುಖ ಅಪರಾಧಗಳಲ್ಲಿ ಸಲೀಂ ಪಿಸ್ತೂಲ್‌ನ ಹೆಸರು ಕಾಣಿಸಿಕೊಂಡಿದೆ. ಅಲ್ಲದೆ ಸಿದ್ದು ಮುಸೇವಾಲ ಹಂತಕರ ಪೈಕಿ ಒಬ್ಬನಿಗೆ ಈತನೇ ಮಾರ್ಗದರ್ಶಕನಾಗಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
1972 ರಲ್ಲಿ ದೆಹಲಿಯ ಸೀಲಾಂಪುರದಲ್ಲಿ ಜನಿಸಿದ ಶೇಖ್‌ಸಲೀಂ ಆರ್ಥಿಕ ಸಮಸ್ಯೆಯಿಂದಾಗಿ 8ನೇ ತರಗತಿಗೆ ಓದನ್ನು ಬಿಟ್ಟು ಟ್ಯಾಕ್ಸಿ ಚಾಲಕನಾಗಿದ್ದ. ಆನಂತರ 2018 ರಲ್ಲಿ ದೆಹಲಿಯಲ್ಲಿ ಬಂಧನವಾದ ಬಳಿಕ ವಿದೇಶಕ್ಕೆ ಪರಾರಿಯಾಗಿ ಅಲ್ಲಿಂದ ಶಸಾ್ತ್ರಸ್ತ್ರ ಪೂರೈಕೆ ಜಾಲ ನಿರ್ವಹಿಸಲು ಆರಂಭಿಸಿದ್ದ.
- ಉತ್ತರಕಾಶಿ ಮೇಘಸ್ಫೋಟ ದುರಂತ: 729 ಮಂದಿ ಸ್ಥಳಾಂತರ
- ಕ್ವಿಟ್ ಇಂಡಿಯಾ ಚಳವಳಿಯ ಹುತಾತ್ಮರನ್ನು ಸ್ಮರಿಸಿದ ಕಾಂಗ್ರೆಸ್
- ಚುನಾವಣಾ ಆಯೋಗ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ : ಎಚ್.ಕೆ. ಪಾಟೀಲ್
- ಸಹಪಾಠಿಗಳ ಕಿರುಕುಳದಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
- ಧರ್ಮಸ್ಥಳ ಗ್ರಾಮದ ಹೊಸ ಸ್ಥಳದಲ್ಲಿ ಉತ್ಖನನ