ಬೆಂಗಳೂರು,ಆ.9-ಸ್ನೇಹಿತರುಗಳ ನಡುವೆ ಗಲಾಟೆ ನಡೆದು ರೌಡಿಶೀಟರ್‌ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.ಚಿಕ್ಕಬಾಣವಾರದ ನಿವಾಸಿ ಪ್ರತಾಪ್ (29) ಕೊಲೆಯಾದ ರೌಡಿ. ಈತ ಗಂಗಮಗುಡಿ ಪೊಲೀಸ್ ಠಾಣೆಯ ರೌಡಿಶೀಟರ್.
ತಡರಾತ್ರಿ 12.30 ರ ಸುಮಾರಿನಲ್ಲಿ ಪ್ರತಾಪ್ ಸ್ನೇಹಿತರೊಂದಿಗೆ ಮಾರುತಿನಗರದ ಬಾರ್‌ವೊಂದಕ್ಕೆ ಹೋಗಿ ಮದ್ಯಪಾನ ಮಾಡಿದ್ದಾನೆ.ನಂತರ ಹೊರಬಂದು ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ ಅವರುಗಳ ಮಧ್ಯೆಯೇ ಯಾವುದೋ ವಿಚಾರಕ್ಕೆ ಗಲಾಟೆಯಾಗಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಆ ವೇಳೆ ಜಗಳ ವಿಕೋಪಕ್ಕೆ ತಿರುಗಿದ್ದು, ಜೊತೆಯಲ್ಲಿದ್ದ ಸ್ನೇಹಿತನೇ ಚಾಕುವಿನಿಂದ ಪ್ರತಾಪನಿಗೆ ಇರಿದಿದ್ದಾನೆ.ತೀವ್ರರಕ್ತಸ್ರಾವದಿಂದ ಗಂಭೀರ ಗಾಯಗೊಂಡಿದ್ದ ಪ್ರತಾಪ್‌ನನ್ನು ಸಪ್ತಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿ ತಿಳಿದು ಸೋಲದೇವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮೂವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಹಳದಿ ಮೆಟ್ರೋಗೆ ಚಾಲನೆ ನೀಡಿ ಪ್ರಧಾನಿ ಮೋದಿ ಭಾಷಣ, ಇಲ್ಲಿದೆ ಹೈಲೈಟ್ಸ್
- ಕಣ್ಮನ ಸೆಳೆಯುತ್ತಿದೆ ಲಾಲ್ಬಾಗ್ ಫಲಪುಷ್ಪ ಪ್ರದರ್ಶನ, ಹೂವಿನ ಸೊಬಗು ಕಣ್ತುಂಬಿಕೊಂಡ ಜನರು
- ಧರ್ಮಸ್ಥಳದಲ್ಲಿ ಗಲಾಟೆ : ಆರು ಮಂದಿ ಅರೆಸ್ಟ್, ನಾಳೆಯಿಂದ ಮತ್ತೆ ಉತ್ಖನನ
- ಚುನಾವಣಾ ಆಯೋಗದ ವಿರುದ್ಧ ಅಬ್ಬರಿಸಿ ಸಾಕ್ಷಿ ನೀಡದೆ ಮೌನಕ್ಕೆ ಶರಣಾದ ಕಾಂಗ್ರೆಸ್ ನಾಯಕರು
- ಆಪರೇಷನ್ ಸಿಂಧೂರ್ ಮತ್ತು ಸೇನೆಯ ಪರಾಕ್ರಮವನ್ನು ಪ್ರಶ್ನಿಸಿ ಘನತೆ ಕೆಡಿಸಿಕೊಂಡ ರಾಹುಲ್ ಗಾಂಧಿ : ಕಿರಣ್ ರಿಜಿಜು