Friday, October 3, 2025
Homeಬೆಂಗಳೂರುಕಣ್ಮನ ಸೆಳೆಯುತ್ತಿದೆ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ, ಹೂವಿನ ಸೊಬಗು ಕಣ್ತುಂಬಿಕೊಂಡ ಜನರು

ಕಣ್ಮನ ಸೆಳೆಯುತ್ತಿದೆ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ, ಹೂವಿನ ಸೊಬಗು ಕಣ್ತುಂಬಿಕೊಂಡ ಜನರು

Lalbagh flower show attracts attention

ಬೆಂಗಳೂರು, ಆ.10- ಸ್ವಾತಂತ್ರೋತ್ಸವದ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಇಂದು ಜನರು ತಂಡೋಪತಂಡವಾಗಿ ಭೇಟಿ
ನೀಡಿ ಹೂಗಳಲ್ಲಿ ನಿರ್ಮಾಣಗೊಂಡಿರುವ ಕಿತ್ತೂರು ಕೋಟೆ, ಕಿತ್ತೂರು ರಾಣಿ ಚೆನ್ನಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಇತರೆ ಕಲಾಕೃತಿಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

ವಿಕ್‌ಎಂಡ್‌ ದಿನವಾದ ನಿನ್ನೆ 54,489 ಮಂದಿ ವೀಕ್ಷಣೆ ಮಾಡಿದ್ದು, 32,16,720 ರೂ. ಸಂಗ್ರಹವಾಗಿದೆ. ತುಂತುರು ಮಳೆ, ಮೋಡ ಕವಿದ ವಾತಾವರಣದ ನಡುವೆಯೂ ಮಕ್ಕಳು, ಪೋಷಕರು, ವಿದ್ಯಾರ್ಥಿಗಳು ಭೇಟಿ ನೀಡಿ ಹೂವಿನ ಸೊಬಗನ್ನು ಕಣ್ತುಂಬಿಕೊಂಡರು. ಗಾಜಿನ ಮನೆಯ ಎಡಭಾಗದಲ್ಲಿ ವಿವಿಧ ಬಗೆಯ ಪುಷ್ಪಗಳಿಂದ ಅರಳಿ ನಿಂತು ನರ್ತಿಸುವ ನವಿಲು ಆಕೃತಿ ಎಲ್ಲರ ಗಮನ ಸೆಳೆಯುವಂತಿದೆ.

ಸೆಲ್ಫಿಗೆ ಮುಗಿ ಬಿದ್ದ ಜನ: ಒಂದಕ್ಕಿಂತ ಒಂದು ಕಲಾಕೃತಿಗಳು ಹೆಚ್ಚಿನ ಗಮನ ಸೆಳೆಯುತ್ತಿದ್ದು, ಜನರು ಕಲಾಕೃತಿಗಳ ಮುಂದೆ ನಿಂತು ತಮ ತಮ ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು. ಇಂದು ಭಾನುವಾರವಾದ್ದರಿಂದ ಶಾಲಾ-ಕಾಲೇಜು, ಕಚೇರಿಗಳಿಗೆ ರಜೆ ಇದ್ದು, ಪೋಷಕರು ತಮ ಮಕ್ಕಳೊಂದಿಗೆ ಲಾಲ್‌ಬಾಗ್‌ಗೆ ಭೇಟಿ ನೀಡಿ ವಿಕ್ಷಿಸಿದರು.

ಲಾಲ್‌ಬಾಗ್‌ನ ತೋಟಗಾರಿಕೆ ಮಾಹಿತಿ ಕೆಂದ್ರದಲ್ಲಿ ಪೂರಕ ಕಲೆಗಳ ಪ್ರದರ್ಶನ ಆಯೋಜಿಸಿದ್ದು, ಅಲ್ಲಿಗೂ ಕೂಡ ಜನರು ಭೇಟಿ ನೀಡಿ ವೀಕ್ಷಣೆ ಮಾಡಿದರು. ಅದರಲ್ಲೂ ಇಕೆಬಾನ, ಬೋನ್ಸಾಯ್‌ ಗಿಡಗಳ ಪ್ರದರ್ಶನ ಎಲ್ಲರನ್ನೂ ತನ್ನತ್ತ ಆಕರ್ಷಿಸುವಂತಿದೆ. ಪುಷ್ಪ ರಂಗೊಲಿ, ತರಕಾರಿ ಕೆತ್ತನೆ, ಡಚ್‌ ಹೂವಿನ ಜೋಡಣೆ , ರಮಣಿಯವಾಗಿದೆ.

ಕಿತ್ತೂರು ಸಂಸ್ಥಾನ ಮತ್ತು ಅಲ್ಲಿನ ಹೋರಾಟದ ಚರಿತ್ರೆಯು ಹೂವಿನಲ್ಲಿ ಅರಳಿ ನಿಂತಿದ್ದು , ವೀರರಾಣಿ ಕಿತ್ತೂರು ಚೆನ್ನಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳು , ಪುಷ್ಪ ಚಿತ್ತಾರಗಳ ನಡುವೆ ಗಮನ ಸೆಳೆಯುತ್ತಿವೆ. ಲಾಲ್‌ಬಾಗ್‌ನಲ್ಲಿ ಎತ್ತ ಕಣ್ಣೂ ಹಾಯಿಸಿದರೂ ಹೂಗಳ ರಾಶಿ ಮನಸ್ಸಿಗೆ ಮುದ ನೀಡುವಂತಿದೆ.

RELATED ARTICLES

Latest News