ಬೆಂಗಳೂರು,ಆ.10- ಆಪರೇಷನ್ ಸಿಂದೂರ್ ಮೂಲಕ ಭಾರತೀಯ ಸೈನಿಕರ ಪರಾಕ್ರಮವನ್ನು ವಿಶ್ವವೇ ನೋಡಿದೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾದ ಮೂಲಕ ಶಸಾ್ತ್ರಸ್ತ್ರಗಳ ಆಮದು ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ನಗರದ ಐಐಐಟಿ ಆಡಿಟೋರಿಯಂನಲ್ಲಿ ನಡೆದ ಹಳದಿ ಮೆಟ್ರೋ ರೈಲು ಉದ್ಘಾಟನೆ ಹಾಗೂ ಮೂರನೇ ಹಂತದ ಮೆಟ್ರೋ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಎಲ್ಲರಿಗೂ ನಮಸ್ಕಾರ, ನಾಡಪ್ರಭು ಕೆಂಪೇಗೌಡ, ಅಣ್ಣಮದೇವಿಗೆ ನನ್ನ ಭಕ್ತಿಪೂರ್ವಕ ನಮನಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿಯವರು, ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಮೇಕ್ ಇನ್ ಇಂಡಿಯಾದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.ಆಪರೇಷನ್ ಸಿಂಧೂರ ಯಶಸ್ವಿಯಾದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ.
ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಮೂಲಕ ವಿಶ್ವಕ್ಕೆ ಭಾರತದ ವಿಶ್ವರೂಪ ತೋರಿಸಿದ್ದೇವೆ. ಆಪರೇಷನ್ ಸಿಂಧೂರದ ಸಫಲತೆ ಹಿಂದೆ ಮೇಕ್ ಇನ್ ಇಂಡಿಯಾದ ಶಕ್ತಿ ಇದೆ. ಇದರಲ್ಲಿ ಬೆಂಗಳೂರು ಹಾಗೂ ಇಲ್ಲಿನ ಯುವ ತಂತ್ರಜ್ಞರ ಯೋಗದಾನವೂ ಇದೆ. ಆಪರೇಷನ್ ಸಿಂಧೂರ ಯಶಸ್ಸಿಗೆ ಕಾರಣಾದ ಬೆಂಗಳೂರು ನವಯುವಕರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.
ಆಪರೇಷನ್ ಸಿಂದೂರ್ ನಡೆದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದೇನೆ. ಪಾಕ್ ಭಯೋತ್ಪಾದಕರ ವಿರುದ್ಧ ನಮ ಯೋಧರು ನಡೆಸಿದ ಪರಾಕ್ರಮವನ್ನು ಜಗತ್ತು ನೋಡಿದೆ ಎಂದು ಬಣ್ಣಿಸಿದರು.ಯೋಧರು ನಡೆಸಿದ ಯಶೋಗಾಥೆಯಲ್ಲಿ ಮೇಕ್ ಇನ್ ಇಂಡಿಯಾ ಮೂಲಕ ತಯಾರಿಸಿದ ಶಸಾ್ತ್ರಸ್ತ್ರಗಳು ನಮ ಎದುರಾಳಿಗಳಿಗೆ ಮರ್ಮಾಘಾತ ಕೊಟ್ಟಿದೆ. ಅದರಲ್ಲೂ ಬೆಂಗಳೂರಿನ ಪಾತ್ರ ಇನ್ನೂ ಹಿರಿದಾಗಿದೆ ಎಂದು ಪ್ರಶಂಸಿಸಿದರು.
ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸೇನೆ ಸಫಲತೆ ಹಾಗೂ ಗಡಿಯನ್ನು ದಾಟಿ ಉಗ್ರರ ನೆಲೆಗಳನ್ನು ನಾಶಪಡಿಸಿರುವುದು ಇಡೀ ದೇಶಕ್ಕೆ ಭಾರತದ ಹೊಸ ಸ್ವರೂಪದ ದರ್ಶನವನ್ನು ಮಾಡಿದಂತಾಗಿದೆ. ಇದರ ಹಿಂದೆ ತಂತ್ರಜ್ಞಾನ, ರಕ್ಷಣೆ, ಮೇಕ್ ಇನ್ ಇಂಡಿಯಾದ ತಾಕತ್ತು ಇತ್ತು. ಕರ್ನಾಟಕದ ವಿಶೇಷವಾಗಿ ಬೆಂಗಳೂರು ಯುವಕರ ಪಾತ್ರವನ್ನು ನಾನು ಮರೆಯಲಾರೆ ಎಂದರು.
ಹಳದಿ ಹಾಗೂ ಕಿತ್ತಳೆ ಮೆಟ್ರೋ ಮಾರ್ಗಗಳು ಬೆಂಗಳೂರು ಸಂಚಾರಕ್ಕೆ ದೊಡ್ಡ ಬಲ. ಎರಡೂ ಮಾರ್ಗಗಳಿಂದ 25 ಲಕ್ಷ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಬೆಂಗಳೂರಿನ ಕಂಪನಿಗಳು ಜಾಗತಿಕವಾಗಿ ಸ್ಪರ್ಧಿಸುತ್ತಿದೆ. ಸ್ಪರ್ಧಿಸುವುದು ಮಾತ್ರ ಅಲ್ಲ ನಾವು ಮುನ್ನಡೆಸುವ ಮಟ್ಟಕ್ಕೆ ಬೆಳೆಯಬೇಕು. ಕರ್ನಾಟಕವನ್ನು ವಿಕಾಸದತ್ತ ಕೊಂಡೊಯ್ಯುತ್ತೇವೆ. ಮೇಕ್ ಇನ್ ಇಂಡಿಯಾದಲ್ಲಿ ಉತ್ಪಾದನೆಯಲ್ಲಿ ಬೆಂಗಳೂರು, ಕರ್ನಾಟಕದ ಪಾಲು ಹೆಚ್ಚು ಹೆಚ್ಚಿರಬೇಕು ಎಂದರು.
ಉತ್ಪಾದನೆಯಾಗುವ ವಸ್ತುಗಳು ನ್ಯೂನತೆಯಿಲ್ಲದೆ ಉತೃಷ್ಟವಾಗಿರಬೇಕು ಎಂದರು.ಭಾರತದ ಅಗತ್ಯಗಳನ್ನು ಪೂರೈಸಲು ಒಟ್ಟಿಗೆ ಹೆಜ್ಜೆ ಇಡಬೇಕಿದೆ. ಭಾರತ ಉನ್ನತ ಸ್ಥಾನಕ್ಕೆ ಏರಬೇಕು. ಕೇಂದ್ರ ಸರ್ಕಾರ ಇರಲಿ, ರಾಜ್ಯ ಸರ್ಕಾರ ಇರಲಿ, ನಾವೆಲ್ಲರೂ ದೇಶದ ಜನರ ಸೇವೆಗೆ ಇದ್ದೇವೆ. ಒಟ್ಟಿಗೆ ದೇಶ, ದೇಶದ ಜನರ ಹಿತಕ್ಕೆ ಕೆಲಸ ಮಾಡಬೇಕು ಎನ್ನುವ ಮೂಲಕ ಕೇಂದ್ರದ ತಾರತಮ್ಯ ನೀತಿ ಆರೋಪಕ್ಕೆ ತಿರುಗೇಟು ನೀಡಿದರು.
ಭಾರತ ಇಂದು ವಿಶ್ವದಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ 5ನೇ ಸ್ಥಾನದಲ್ಲಿದೆ. ನಾವು ಮೂರನೇ ಸ್ಥಾನಕ್ಕೆ ತಲುಪಬೇಕು. ಈ ಗುರಿ ತಲುಪಬೇಕಾದರೆ ಇನ್ನೂ ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ ಎಂದು ಮನವಿ ಮಾಡಿದರು.2014ಕ್ಕೂ ಮೊದಲು ದೇಶದ 5 ನಗರಗಳಲ್ಲಿ ಮಾತ್ರ ಮೆಟ್ರೋ ರೈಲು ಇತ್ತು. ನಾವು ಇಂದು 24 ನಗರಗಳಿಗೆ ವಿಸ್ತರಣೆ ಮಾಡಿದ್ದೇವೆ. ಮೆಟ್ರೋ ಹೊಂದಿದ ವಿಶ್ವದ ಮೂರನೇ ರಾಷ್ಟ್ರ ಎಂದರೆ ಅದು ಭಾರತ. 2014 ರವರೆಗೆ 20 ಸಾವಿರ ಕಿ.ಮೀ. ವಿದ್ಯುದೀಕರಣ ಮಾಡಲಾಗಿತ್ತು. ಈಗ ಅದರ ಸಂಖ್ಯೆ 40 ಸಾವಿರಕ್ಕೆ ಏರಿಕೆಯಾಗಿದೆ. 74 ಇದ್ದ ವಿಮಾನನಿಲ್ದಾಣಗಳ ಸಂಖ್ಯೆ 160ಕ್ಕೇರಿದೆ ಎಂದು ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು.
2014 ಕ್ಕೂ ಮೊದಲು 7 ಏಮ್ಸೌ ಹಾಗೂ 321 ವೈದ್ಯಕೀಯ ಕಾಲೇಜುಗಳಿದ್ದವು. ಈಗ ಏಮ್ಸೌ ಸಂಖ್ಯೆ 22ಕ್ಕೆ ಹಾಗೂ 704 ವೈದ್ಯಕೀಯ ಕಾಲೇಜುಗಳಿವೆ. ನಮ ಸರ್ಕಾರ ಪ್ರತಿಯೊಂದೂ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿದೆ. ಭಾರತ ಇಂದು ವಿಶ್ವದ 3ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮುತ್ತಿದೆ ಎಂದು ಕೊಂಡಾಡಿದರು.
ಬೆಂಗಳೂರು ಹೊಸ ಭಾರತದ ಪ್ರಗತಿಯ ಸಂಕೇತವಾಗಿದೆ. ಈ ನಗರವು ಜಾಗತಿಕ ವಲಯದಲ್ಲಿ ಕೀರ್ತಿ ಪತಾಕೆಯನ್ನು ಹಾರಿಸಿದೆ. ಇದರ ಯಶಸ್ಸಿಗೆ ಇಲ್ಲಿನ ಜನರ ಶ್ರಮ ಮತ್ತು ಪ್ರತಿಭೆ ಕಾರಣ. ಇಂತಹ ನಗರಗಳನ್ನು ಭವಿಷ್ಯಕ್ಕಾಗಿ ರೂಪಿಸಬೇಕೆಂದು ಕರೆ ಕೊಟ್ಟರು.
ಕೇಂದ್ರ ಸರ್ಕಾರವು ಬೆಂಗಳೂರಿಗೆ ಎಲ್ಲಾ ರೀತಿಯಲ್ಲೂ ಅನುದಾನವನ್ನು ನೀಡಿದೆ. ಇದರಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಪರೋಕ್ಷವಾಗಿ ಬೇಡಿಕೆಗೆ ಅನುದಾನ ಇಟ್ಟಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟರು.ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಕರ್ನಾಟಕದಲ್ಲಿ ರೈಲ್ವೆ ಮೂಲಸೌಕರ್ಯ ಹೂಡಿಕೆ ಸುಮಾರು 9 ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಬಹುನಿರೀಕ್ಷಿತ ಬೆಂಗಳೂರು-ಬೆಳಗಾವಿ ಸೇವೆ ಸೇರಿದಂತೆ ಮೂರು ಹೊಸ ವಂದೇ ಭಾರತ್ ಎಕ್‌್ಸಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡುವ ಮುನ್ನ ಮಾತನಾಡಿದ ವೈಷ್ಣವ್, 2014 ರ ಮೊದಲು ಕರ್ನಾಟಕದ ವಾರ್ಷಿಕ ಸರಾಸರಿ ರೈಲ್ವೆ ಹಂಚಿಕೆ ಕೇವಲ 835 ಕೋಟಿ ರೂ.ಗಳಷ್ಟಿತ್ತು, ಆದರೆ 2025-26 ರ ಆರ್ಥಿಕ ವರ್ಷದಲ್ಲಿ ಅದು 7,564 ಕೋಟಿ ರೂ.ಗಳಷ್ಟಿದೆ ಎಂದು ಹೇಳಿದರು.
ಪ್ರಸ್ತುತ, ಕರ್ನಾಟಕದ ರೈಲ್ವೆ ಜಾಲದಲ್ಲಿ ನಮ ಒಟ್ಟು ಹೂಡಿಕೆ 54,000 ಕೋಟಿ ರೂ.ಗಳಷ್ಟಿದೆ ಎಂದು ಅವರು ಹೇಳಿದರು. ಅಮೃತ ಭಾರತ ನಿಲ್ದಾಣ ಕಾರ್ಯಕ್ರಮದಡಿಯಲ್ಲಿ 61 ನಿಲ್ದಾಣಗಳನ್ನು ಪುನರ್ನಿರ್ಮಿಸಲಾಗುತ್ತಿದೆ, 123 ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್‌ಗಳು ನಿರ್ಮಾಣ ಹಂತದಲ್ಲಿವೆ ಮತ್ತು ವಿದ್ಯುದ್ದೀಕರಣ ಕಾರ್ಯಗಳು ವೇಗವಾಗಿ ಪ್ರಗತಿಯಲ್ಲಿವೆ.
ಬೆಂಗಳೂರು-ಬೆಳಗಾವಿ ವಂದೇ ಭಾರತ್ ಯೋಜನೆಯನ್ನು ಜನರ ಬಹುದಿನಗಳ ಬೇಡಿಕೆ ಎಂದು ಕರೆದ ವೈಷ್ಣವ್, ಈ ರೈಲು ಉತ್ತರ ಕರ್ನಾಟಕ ಮತ್ತು ಭಾರತದ ಐಟಿ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಹೇಳಿದರು. ಅಮೃತಸರ-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ಮತ್ತು ನಾಗ್ಪುರ (ಅಜ್ನಿ)-ಪುಣೆ ಮಾರ್ಗಗಳ ವಂದೇ ಭಾರತ್ ರೈಲುಗಳಿಗೆ ಸಹ ಚಾಲನೆ ನೀಡಲಾಗುವುದು.
ಕಳೆದ 11 ವರ್ಷಗಳಲ್ಲಿ ನಮ್ಮ ಎಲೆಕ್ಟ್ರಾನಿಕ್ ಉತ್ಪಾದನೆ 6 ಪಟ್ಟು ಬೆಳೆದಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆ 12 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ. ಎಲೆಕ್ಟ್ರಾನಿಕ್ ರಫ್ತು 8 ಪಟ್ಟು ಹೆಚ್ಚಾಗಿದೆ. ಇಂದು, ಅದು 3 ಲಕ್ಷ ಕೋಟಿ ರೂಪಾಯಿಗಳಿಗೆ ಬೆಳೆದಿದೆ ಎಂದರು. ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ. ಭಾರತವು ಅಮೆರಿಕಕ್ಕೆ ಪ್ರಮುಖ ಸ್ಮಾರ್ಟ್‌ಫೋನ್ ಪೂರೈಕೆದಾರ ರಾಷ್ಟ್ರವಾಗಿದೆ. ನಮ ಪ್ರಧಾನ ಮಂತ್ರಿಯವರ ದೃಷ್ಟಿಕೋನ ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವುದು. ಅದು ಕೆಲವರಿಗೆ ಸೀಮಿತವಾಗಿರದೆ ಎಲ್ಲರಿಗೂ ಲಭ್ಯವಾಗಬೇಕು ಎಂಬುದು ನಮ ಉದ್ದೇಶ ಎಂದರು.