ಬೆಂಗಳೂರು,ಆ.11- ಮುಂದಿನ ನಾಲ್ಕು ವರ್ಷಗಳಲ್ಲಿ ಹೆಚ್ಚುವರಿಯಾಗಿ 500 ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಸೇರ್ಪಡೆ ಮಾಡುವ ಮೂಲಕ 3.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯುವ ಬೆಂಗಳೂರು ಟೆಕ್ ಸಮಿತ್-2025 ಕ್ಕೆ ಸಂಬಂಧಪಟ್ಟಂತೆ 100ಕ್ಕೂ ಹೆಚ್ಚು ಕಂಪನಿಗಳ ಜೊತೆ ಉಪಹಾರ ಕೂಟ ನಡೆಸಿದ ಮುಖ್ಯಮಂತ್ರಿಯವರು ಭವಿಷ್ಯೋದಯ ಧ್ಯೇಯ ವಾಕ್ಯದೊಂದಿಗೆ ನ.18 ರಿಂದ 20 ರವರಗೆ ಸಮೇಳನ ಆಯೋಜಿಸುತ್ತಿರುವುದಾಗಿ ಹೇಳಿದರು.
ಕರ್ನಾಟಕ ಶ್ರೀಮಂತ ಸಂಸ್ಕೃತಿ ಮತ್ತು ತಾಂತ್ರಿಕ ನಾಯಕತ್ವವನ್ನು ಮೈಸೂರು ರಾಜರ ಕಾಲದಿಂದಲೂ ನೀಡಿದೆ. 1997 ರಲ್ಲಿ ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನ ನೀತಿಯನ್ನು ಪ್ರಕಟಿಸಿದ್ದೇವೆ. 2024 ರಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿಯನ್ನು ಪ್ರಕಟಿಸಲಾಯಿತು. ವಿಶ್ವಕ್ಕೆ ಸಂಶೋಧನೆ ಹಾಗೂ ಭವಿಷ್ಯದ ಯೋಜನೆಗಳ ನೀಲನಕ್ಷೆ ರೂಪಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪ್ರತಿಭೆ ಹಾಗೂ ವ್ಯವಹಾರಿಕ ಸ್ನೇಹಿ ನೀತಿಗಳನ್ನು ಹೊಂದಿದ್ದೇವೆ. ರಾಷ್ಟ್ರದ ಸಾಫ್‌್ಟವೇರ್ ರಫ್ತಿನಲ್ಲಿ ಶೇ.44 ರಷ್ಟು ಪಾಲು ಹೊಂದಿದ್ದೇವೆ. ಮಾಹಿತಿ ತಂತ್ರಜ್ಞಾನ ಹಾಗೂ ಅದರ ಸಂಬಂಧಿತ ಆರ್ಥಿಕತೆಯಲ್ಲಿ ಕರ್ನಾಟಕ ಶೇ.26 ರಷ್ಟು ಪಾಲು ಹೊಂದಿದೆ ಎಂದು ತಿಳಿಸಿದರು.
ಸುಮಾರು 875 ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಹೊಂದಿದ್ದು, 2029ರ ವೇಳೆಗೆ ಹೆಚ್ಚುವರಿಯಾಗಿ ಇನ್ನೂ 500 ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕತೆಯನ್ನು 50 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಇದೆ. ಬೆಂಗಳೂರಿನಾಚೆ ಬೆಳವಣಿಗೆಯನ್ನು ಖಾತ್ರಿಪಡಿಸಲು ಹೊರವಲಯಗಳಲ್ಲಿ ತಾಂತ್ರಿಕ ಕ್ಲಸ್ಟರ್‌ಗಳನ್ನು ಸ್ಥಾಪಿಸುವ ಮೂಲಕ ಸಮಗ್ರ ಕರ್ನಾಟಕದ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ 15,300 ನವೋದ್ಯಮಗಳು 45 ಯೂನಿಕಾರ್ನ್‌ಗಳನ್ನು ಸ್ಥಾಪಿಸುವ ಮೂಲಕ ಉದ್ಯಮ ವಲಯಕ್ಕೆ ಸೂಕ್ತವಾದ ಜಾಗ ಎಂದು ಸಾಬೀತುಪಡಿಸಿದ್ದೇವೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್‌್ಸ)ಯಲ್ಲಿ ಬೆಂಗಳೂರು ವಿಶ್ವದ ನಗರಗಳಲ್ಲಿ 5ನೇ ಸ್ಥಾನ ಪಡೆದಿದೆ. ದೇಶದ ಶೇ.50 ರಷ್ಟು ಪ್ರತಿಭೆಗಳು ಹೊರಹೊಮಿವೆ.
ವಿಶ್ವದಲ್ಲೇ ಅತಿ ಹೆಚ್ಚು ಎಐ ಪ್ರತಿಭೆಗಳನ್ನು ಹೊಂದಿರುವ ಎರಡನೇ ಸ್ಥಾನವನ್ನು ಬೆಂಗಳೂರು ಪಡೆದಿದೆ. ನಮ ಜೇಷ್ಠ್ಯತಾ ಕೇಂದ್ರಗಳು ಎಐ, ಐಐಟಿ, ನವೋದ್ಯಮ ಬೆಂಬಲ, ವೃತ್ತಿಪರ ತರಬೇತಿ, ಎಐ ಅನ್ವೇಷಣೆ ಹಾಗೂ ಸೂಕ್ತವಾದ ನೀತಿಗಳ ಮೂಲಕ ಕೃತಕ ಬುದ್ಧಿಮತ್ತೆಯ ಪ್ರತಿಭೆ ಹಾಗೂ ಮೂಲ ಸೌಕರ್ಯಗಳನ್ನು ಹೆಚ್ಚಿಸುತ್ತಿದೆ ಎಂದರು.
2035 ರ ವೇಳೆಗೆ ಕರ್ನಾಟಕವನ್ನು ತಾಂತ್ರಿಕ ಕೇಂದ್ರಿತ ಕೇಂದ್ರವನ್ನಾಗಿಸುವ ಉದ್ದೇಶ ಹೊಂದಿದ್ದು, 20 ಬಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಇದೆ. ಹಾರ್ಡ್‌ವೇರ್ ಪಾರ್ಕ್, ಅನ್ವೇಷಣಾ ವಲಯಗಳು ಮತ್ತು ಗ್ಲೋಬಲ್ ಕ್ವಾಂಟೆಮ್ ಕಾನ್‌ಕ್ಲೇವ್ ಸ್ಥಾಪಿಸುವ ಉದ್ದೇಶವಿದೆ. ಹೊಸ ಮನ್ವಂತರಕ್ಕೆ ಪರಿವರ್ತನೆಯಾಗುತ್ತಿದ್ದು, ಕೈಗಾರಿಕೆ ಹಾಗೂ ಸಂಶೋಧನಾತಕ ಪರಿಸರವನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿ ಕ್ವೀನ್ ಸಿಟಿ ನಿರ್ಮಿಸುವ ಮೂಲಕ ಹೊಸ ಯುಗದ ಕೈಗಾರಿಕೆಗಳಿಗೆ ತಂತ್ರಜ್ಞಾನಗಳನ್ನು ಸ್ಥಾಪಿಸುವ ಮೂಲಕ ವಿಜ್ಞಾನಿಗಳಿಗೆ, ಉದ್ಯಮಿಗಳಿಗೆ, ಹೂಡಿಕೆದಾರರಿಗೆ ಜಾಗತಿಕ ವೇದಿಕೆ ಒದಗಿಸುವುದಾಗಿ ತಿಳಿಸಿದರು.
ಆರೋಗ್ಯ, ವೈದ್ಯಕೀಯ ಶಿಕ್ಷಣ, ವಸತಿ ಹಾಗೂ ಇತರ ವಲಯಗಳ ಅಭಿವೃದ್ಧಿಗೆ ಕ್ವೀನ್ ಸಿಟಿ ಪೂರಕವಾಗಿದೆ. ಕೃಷಿ ಆಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಗ್ರೀನ್ ಎನರ್ಜಿ ಪಾರ್ಕ್‌ಗಳನ್ನು ಸ್ಥಾಪಿಸುವ ಉದ್ದೇಶವಿದೆ. ಈ ಮೂಲಕ ಕರ್ನಾಟಕವನ್ನು ವಿಶ್ವದ ಮುಂಚೂಣಿ ತಾಂತ್ರಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಮತ್ತು ಆರ್ಥಿಕವಾಗಿ ಸಮಗ್ರ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ಹೇಳಿದರು.