Monday, August 11, 2025
Homeರಾಷ್ಟ್ರೀಯ | Nationalತಿಮಪ್ಪನ ಹುಂಡಿಯಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 129 ಕೋಟಿ ರೂ.ಗಳ ಕಾಣಿಕೆ ಸಂಗ್ರಹ

ತಿಮಪ್ಪನ ಹುಂಡಿಯಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 129 ಕೋಟಿ ರೂ.ಗಳ ಕಾಣಿಕೆ ಸಂಗ್ರಹ

Tirupati Temple collect Rs 129 crore in donations in a single month

ಅಮರಾವತಿ, ಆ.11- ತಿರುಪತಿ ತಿಮಪ್ಪನ ಹುಂಡಿಗೆ ಕೋಟಿ ಕೋಟಿ ಹಣ ಬೀಳುತ್ತಿದೆ. ಕಳೆದ ತಿಂಗಳು ಹುಂಡಿಗೆ ಭಕತರು 129 ಕೋಟಿ ರೂ.ಗಳ ಕಾಣಿಕೆ ಸಲ್ಲಿಸಿದ್ದಾರೆ. ತಿರುಮಲದಲ್ಲಿರುವ ವೆಂಕಟೇಶ್ವರ ದೇವರ ಸನ್ನಿಧಿಯಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಜುಲೈ ತಿಂಗಳಲ್ಲಿಯೇ 129.45 ಕೋಟಿ ರೂ. ಸಂಗ್ರಹವಾಗಿದೆ.

2024ರ ಜುಲೈನಲ್ಲಿ 125.35 ಕೋಟಿ ರೂ. ಕಾಣಿಕೆ ಸಂಗ್ರಹವಾಗಿತ್ತು. ಆದರೆ ಈ ಬಾರಿ 129.45 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ಸಲಕ್ಕಿಂತ 4.09 ಕೋಟಿ ರೂ. ಅಧಿಕ ಕಾಣಿಕೆ ಸಂಗ್ರಹವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಮೂಲಗಳು ತಿಳಿಸಿವೆ.

ಬೇಸಿಗೆ ರಜೆ ಮುಗಿದು ಶಾಲಾ-ಕಾಲೇಜುಗಳು ತೆರೆದಿದ್ದರೂ ಕೂಡ ಜುಲೈನಲ್ಲಿ ಭಕ್ತರ ಬರುವಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ವರ್ಷ ಇಲ್ಲಿಯವರೆಗೆ 23.76 ಲಕ್ಷ ಭಕ್ತರು ತಿರುಪತಿಗೆ ಆಗಮಿಸಿ, ದರ್ಶನ ಪಡೆದುಕೊಂಡಿದ್ದಾರೆ. ಟಿಟಿಡಿ ಅಧಿಕಾರಿಗಳ ಮಾಹಿತಿ ಪ್ರಕಾರ, ಕಳೆದ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಶೇ.7.4ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News