ಬೆಂಗಳೂರು, ಆ.11– ಹಿರಿಯ ನಟಿ ಬಿ.ಸರೋಜಾದೇವಿ, ವಿಜ್ಞಾನಿ ಕಸ್ತೂರಿ ರಂಗನ್, ಸಾಹಿತಿಗಳಾದ ಜಿ.ಎಸ್.ಸಿದ್ದಲಿಂಗಯ್ಯ, ಹೆಚ್.ಎಸ್.ವೆಂಕಟೇಶ ಮೂರ್ತಿ ಹಾಗೂ ಚಿನ್ನಸ್ವಾಮಿ ಕ್ರೆಡಾಂಗಣದ ಬಳಿಯ ಕಾಲ್ತುಳಿತ, ಪಹಲ್ಗಾಮ್ಉಗ್ರರ ದಾಳಿ ಮತ್ತು ಅಹಮದಾಬಾದ್ನ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಳೆಗಾಲದ ವಿಧಾನ ಮಂಡಲದ ಅಧಿವೇಶನದ ಮೊದಲ ದಿನವಾದ ಇಂದು ಬೆಳಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು.
ರಾಜ್ಯದ ಮಾಜಿ ಸಚಿವ ಬೇಗಾನೆ ರಾಮಯ್ಯ,ವಿಧಾನಸಭೆಯ ಮಾಜಿ ಸದಸ್ಯರಾದ ಕಾಕಸೋ ಪಾಂಡುರಂಗ ಪಾಟೀಲ್.ಎನ್.ರಾಜಣ್ಣ, ವಿಧಾನಸಭೆಯ ಮಾಜಿ ನಾಮ ನಿರ್ದೇಶಿತ ಸದಸ್ಯ ಡೆರ್ರಿಕ್ಎಂ.ಬಿ.ಲಿನ್ಾ,ವಿಧಾನ ಪರಿಷತ್ತಿನ ಮಾಜಿ ಹಂಗಾಮಿ ಸಭಾಪತಿಗಳಾದ ಡಾ.ಎನ್.ತಿಪ್ಪಣ್ಣ, ಮಾಜಿ ಉಪಸಭಾಪತಿ ಹಾಗೂ ಹಂಗಾಮಿ ಸಭಾಪತಿ ಡೇವಿಡ್ ಸಿಮೆಯೋನ್,ರಾಜ್ಯಸಭೆಯ ಮಾಜಿ ಸದಸ್ಯರೂ ಆದ ಇಸ್ರೋ ಮಾಜಿ ಅಧ್ಯಕ್ಷರಾದ ಡಾ.ಕೆ.ಕಸ್ತೂರಿ ರಂಗನ್.ಖ್ಯಾತ ಕೃಷಿ ವಿಜ್ಞಾನಿ ಪೊ.ಸುಬ್ಬಣ್ಣ ಅಯ್ಯಪ್ಪನ್,ಅಣು ವಿಜ್ಞಾನಿ ಎಂ.ಆರ್.ಶ್ರೀನಿವಾಸನ್,ಹಿರಿಯ ಸಾಹಿತಿ ಪೊ ಜಿ.ಎಸ್.ಸಿದ್ದಲಿಂಗಯ್ಯ, ಹಿರಿಯ ಕವಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ,ಬಹುಭಾಷಾ ಹಿರಿಯ ನಟಿ ಬಿ.ಸರೋಜಾದೇವಿ, ಕ್ರೈಸ್ತರ ಧರ್ಮಗುರು ಪೋಪ್್ರಾನ್ಸಿಸ್ಅವರುಗಳು ನಿಧನ ಹೊಂದಿರುವುದನ್ನು ಹಾಗೂ ಪಹಲ್ಗಾಮ್ನಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಕರ್ನಾಟಕದ ನಾಗರಿಕರು ಒಳಗೊಂಡಂತೆ ಒಟ್ಟಾರೆ ಮೃತಪಟ್ಟಿರುವವರಿಗೆ, ಆರ್.ಸಿ.ಬಿ.ತಂಡದ ವಿಜಯೋತ್ಸವದ ಸಲುವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ 11ಜನರಿಗೆ, ಇತ್ತೀಚೆಗೆ ಗುಜರಾತ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 265 ಮಂದಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಸಭಾಧ್ಯಕ್ಷರು ಸದನದಲ್ಲಿ ಮಂಡಿಸಿದರು.
ನಂತರ ಅಗಲಿದವರ ಕುರಿತು ವಿವರಣೆ ನೀಡಿದ ಸಭಾಧ್ಯಕ್ಷರು, ಬೇಗಾನೆ ರಾಮಯ್ಯ ಅವರು ಚಿಕ್ಕಮಗಳೂರು ಜಿಲ್ಲೆ ಬೇಗಾನೆಯಲ್ಲಿ ಜನಿಸಿದ್ದು,ಎಂ.ಎ ಹಾಗೂ ಬಿ.ಎಲ್.ಪದವಿಯನ್ನು ಪಡೆದಿದ್ದರು. 1978ರಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ 6ನೇ ವಿಧಾನಸಭೆಗೆ ಚುನಾಯಿತರಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ನೀರು ಪೂರೈಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.ತಮ ಅಧಿಕಾರಾವಧಿಯಲ್ಲಿ ಕುಡಿಯುವ ನೀರಿಗಾಗಿ ಹಳ್ಳಿಹಳ್ಳಿಗಳಲ್ಲಿ ಬೋರ್ವೆಲ್ಕೊರೆಸಿ ಬೋರ್ವೆಲ್ ರಾಮಯ್ಯ ಎಂದೇ ಪ್ರಖ್ಯಾತರಾಗಿದ್ದರು ಎಂದು ಹೇಳಿದರು.
ಬೆಳಗಾವಿಯ ಕಾಕಸೋ ಪಾಂಡುರಂಗಪಾಟೀಲ್ ರವರು ನಿಪ್ಪಾಣಿವಿಧಾನಸಭಾ ಕ್ಷೇತ್ರದಿಂದ 1999ರಲ್ಲಿ ಮೊದಲ ಬಾರಿಗೆ 11ನೇ ವಿಧಾನಸಭೆಗೆ ಚುನಾಯಿತರಾಗಿ, ನಂತರ 12 ಮತ್ತು13ನೇ ವಿಧಾನ ಸಭೆಗೆ ಪುನರ್ ಆಯ್ಕೆಗೊಂಡಿದ್ದರು.ಡೆರ್ರಿಕ್ಎಂ.ಬಿ.ಲೀನ್ಾ ಅಖಿಲ ಭಾರತ ಪ್ರಗತಿಪರ ಆಂಗ್ಲೋ-ಇಂಡಿಯನ್ ಸಂಘದ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದರು.1990ರಲ್ಲಿ ಮೊದಲ ಬಾರಿಗೆ 9ನೇ ವಿಧಾನಸಭೆಯ ಆಂಗ್ಲೋ-ಇಂಡಿಯನ್ಸದಸ್ಯಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದು,ನಂತರ 2008ರಲ್ಲಿ 13ನೇ ವಿಧಾನಸಭೆಗೆ 2ನೇ ಬಾರಿಗೆ ಪುನರ್ನಾಮ ನಿರ್ದೇಶಿತಗೊಂಡಿದ್ದರು.
ಎನ್.ರಾಜಣ್ಣವೃತ್ತಿಯಲ್ಲಿ ಕೃಷಿಕರಾಗಿದ್ದು,ಹೈನುಗಾರಿಕೆ ನಡೆಸುತ್ತಿದ್ದರು. ದಂಡು ಪ್ರದೇಶದ ಗೋಪಾಲಕರ ಸಂಘದ ಅಧ್ಯಕ್ಷರು, ಪ್ರಾಣಿದಯಾ ಸಂಘದ ಪ್ರತಿನಿಧಿ ಹ್ದುೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪೋಷಕರಾಗಿ ಸೇವೆಸಲ್ಲಿಸಿದ್ದರು. 1994ರಲ್ಲಿಭಾರತೀನಗರ ಕ್ಷೇತ್ರದಿಂದ 10ನೇ ವಿಧಾನಸಭೆಗೆ ಚುನಾಯಿತರಾಗಿದ್ದರು ಎಂದು ವಿವರಿಸಿದರು.ಡೇವಿಡ್ಸಿಮೆಯೋನ್1996ರಿಂದ2002ರವರೆಗೆ ವಿಧಾನಪರಿಷತ್ತಿನ ನಾಮ ನಿರ್ದೇಶಿತ ಸದಸ್ಯರಾಗಿದ್ದರು.
ಡಾ.ಎನ್.ತಿಪ್ಪಣ್ಣ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ 1988-1994, 1994-2000ಮತ್ತು2006-2012ರವರೆಗೆ ಚುನಾಯಿತರಾಗಿದ್ದರು.2008ರಲ್ಲಿ ಹಂಗಾಮಿ ಸಭಾಪತಿಗಳಾಗಿದ್ದರು ಎಂದರು.
ಕೇರಳದ ಎರ್ನಾಕುಲಂನಲ್ಲಿ ಜನಿಸಿದ್ದ ಡಾ.ಕೆ.ಕಸ್ತೂರಿರಂಗನ್ ಇಸ್ರೋದಲ್ಲಿ ತಮ ವೃತ್ತಿ ಜೀವನ ಆರಂಭಿಸಿ ಭಾರತದ ಮೊದಲ ಎರಡು ಭೂವೀಕ್ಷಣಾ ಉಪಗ್ರಹಗಳಾದ ಭಾಸ್ಕರ-ಐ, ಭಾಸ್ಕರ-ಐಐರ ಯೋಜನಾ ನಿರ್ದೇಶಕರಾಗಿ,ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದಾರೆ.
2003 ರಿಂದ 2009 ರವರೆಗಿನ ಅವಧಿಗೆ ರಾಜ್ಯಸಭಾಸದಸ್ಯರಾಗಿ ನಾಮ ನಿರ್ದೇಶಿಗೊಂಡಿದ್ದರು. ಪದವಿಭೂಷಣ ಸೇರಿ ಹಲವು ಪ್ರಶಸ್ತಿಗೆ ಪಾತ್ರರಾಗಿದ್ದರು ಎಂದು ಕೊಂಡಾಡಿದರು. ಚಾಮರಾಜನಗರ ಜಿಲ್ಲೆಯ ಅಲ್ಲೆರೆ ಗ್ರಾಮದಲ್ಲಿ ಜನಿಸಿದ್ದ ಪೊ.ಸುಬ್ಬಣ್ಣಅಯ್ಯಪ್ಪನ್ ಮೀನುಗಾರಿಕೆ ಮತ್ತು ಜಲಜೀವಿ ಸೂಕ್ಷಜೀವ ವಿಜ್ಞಾನ ಕುರಿತಂತೆ ಹಲವಾರು ಸಂಶೋಧನಾ ಪ್ರಬಂಧಗಳನ್ನುರಚಿಸಿದ್ದಾರೆ. ಕೇಂದ್ರಿಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಭಾರತೀಯ ಕೃಷಿ ಸಂಶೋಧನಾ ಮಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು ಎಂದರು.
ಎಂ.ಆರ್.ಶ್ರೀನಿವಾಸನ್ ಭಾರತದ ಮೊದಲ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ ಹಾಗೂ ಮದ್ರಾಸ್ ಪರಮಾಣು ವಿದ್ಯುತ್ ಸ್ಥಾವರದ ಪ್ರಾಜ್ಟೆ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. .ಪದಶ್ರೀ, ಪದಭೂಷಣ,ಪದವಿಭೂಷಣ ಪ್ರಶಸ್ತಿಗಳು ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರಾಗಿದ್ದಾರೆ ಎಂದರು.ತುಮಕೂರು ಜಿಲ್ಲೆಯ ಬೆಳ್ಳಾವಿಯಲ್ಲಿ ಜನಿಸಿದ್ದ ಪೊ.ಜಿ.ಎಸ್.ಸಿದ್ದಲಿಂಗಯ್ಯ ಸಾಹಿತಿ, ಕವಿ, ವಿಮರ್ಶಕರಾಗಿ ಕನ್ನಡಸಾಹಿತ್ಯ ಲೋಕಕ್ಕೆ ತಮದೇ ಆದ ಕೊಡುಗೆ ನೀಡಿದ್ದಾರೆ. ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಇವರು ಕೃತಿಗಳನ್ನುರಚಿಸಿದ್ದಾರೆ.ಕನ್ನಡ ಸಾಹಿತ್ಯಪರಿಷತ್ತಿನ 17ನೇ ಅಧ್ಯಕ್ಷರಾಗಿದ್ದರು.
ಚಿತ್ರದುರ್ಗ ಜಿಲ್ಲೆಯ ಹೂದಿಗೆರೆ ಗ್ರಾಮದಲ್ಲಿ ಜನಿಸಿದ ಹೆಚ್.ಎಸ್.ವೆಂಕಟೇಶ್ಮೂರ್ತಿ ಕನ್ನಡದಲ್ಲಿ ಕಥನ ಕವನಗಳು ಕುರಿತಂತೆ ಮಹಾ ಪ್ರಬಂಧವನ್ನುಮಂಡಿಸಿ ಪಿಹೆಚ್ಡಿ ಪಡೆದಿದ್ದರು,ಪ್ರಾಧ್ಯಾಪಕರಾಗಿದ್ದರು. ಭಾವಗೀತೆಗಳ ರಚನೆಯ ಮೂಲಕ ಕನ್ನಡಿಗರ ಹೃದಯದಲ್ಲಿ ನೆಲೆಯೂರಿದ್ದರು. ಕನ್ನಡದಲ್ಲಿ 100ಕ್ಕು ಹೆಚ್ಚು ಪುಸ್ತಕಗಳನ್ನು ರಚಿಸಿದ್ದು, ಚಿನ್ನಾರಿಮುತ್ತ, ಕೊಟ್ರೀಶಿಯ ಕನಸು, ಶೌರ್ಯ,ಮತದಾನ ಸೇರಿದಂತೆಹಲವು ಚಲನಚಿತ್ರಗಳಿಗೆ ಗೀತಸಾಹಿತ್ಯವನ್ನು ಹಾಗೂ ಸಂಭಾಷಣೆಯನ್ನು ರಚಿಸಿರುತ್ತಾರೆ.85ನೇಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾಗಿದ್ದರು ಎಂದು ವಿವರಿಸಿದರು.
ಬಿ.ಸರೋಜಾದೇವಿ 17ನೇ ವಯಸ್ಸಿನಲ್ಲಿ ಚಿತ್ರರಂಗವನ್ನು ಪ್ರವೇಶಿಸಿ ಮೇರುನಟಿಆಗಿ ಮೆರೆದಿದ್ದರು.ಕನ್ನಡ, ತಮಿಳು, ತೆಲಗು ಮತ್ತು ಹಿಂದಿ ಭಾಷೆಯ ಚಿತ್ರಗಳು ಸೇರಿದಂತೆ ಒಟ್ಟು 200 ಚಿತ್ರಗಳಲ್ಲಿ ನಟಿಸಿದ್ದರು. ಭಾರತೀಯ ಚಿತ್ರರಂಗದಲ್ಲಿ ಸುಮಾರು ಏಳು ದಶಕಗಳಕಾಲ ಯಶಸ್ವಿನಟಿಯಾಗಿ ಗುರುತಿಸಿಕೊಂಡಿದ್ದರು. ಕನ್ನಡದ ಮೊದಲ ಚರ್ತು ಭಾಷಾತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
ದಕ್ಷಿಣ ಅಮೆರಿಕಾದ ಅರ್ಜೆಂಟಿನಾದ ಬ್ಯೂನಿಸ್ ಐರಿಸ್ನಲ್ಲಿ ಜನಿಸಿದ್ದ ಪೋಪ್್ರಾನ್ಸಿಸ್ ರಸಾಯನಿಕ ತಂತ್ರಜ್ಞಾನದಲ್ಲಿ ಡಿಪೋಮಾ ಪಡೆದಿದ್ದರು.ತಮ17ನೇ ವಯಸ್ಸಿನಲ್ಲಿಯೇ ಆಧ್ಯಾತದತ್ತ ಒಲವು ಹೊಂದಿ ಸೆಮಿನರಿ ಸೇರಿದ್ದ ರೋಮನ್ ಕ್ಯಾಥೋಲಿಕ್ ಚರ್ಚ್ನ 266 ಪೋಪ್ರಾಗಿ ಆಯ್ಕೆಯಾಗಿದ್ದರು.ವ್ಯಾಟಿಕನ್ಚರ್ಚ್ ಪುನರುಜ್ಜಿವನ, ಹಲವು ಸಮಾಜ ಸುಧಾರಣಾ ವಿಚಾರಗಳನ್ನು ಪ್ರತಿಪಾದಿಸಿದ್ದರು ಎಂದು ಹೇಳಿದರು.
ಕಾಶೀರದ ಪಹಲ್ಲಾಮ್ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಕರ್ನಾಟಕ ಮಂಜನಾಥ್ರಾವ್ಮತ್ತು ಭರತ್ಭೂಷಣ್ ಅವರು ಸೇರಿದಂತೆ ಒಟ್ಟು 28 ಜನ ಪ್ರವಾಸಿಗರು ಮೃತಪಟ್ಟಿರುವುದು ಅತ್ಯಂತ ದು:ಖದ ಸಂಗತಿಯಾಗಿರುತ್ತದೆ ಎಂದು ಸಭಾಧ್ಯಕ್ಷರು ವಿಷಾದಿಸಿದರು.
ಐ.ಪಿ.ಎಲ್.ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್.ಸಿ.ಬಿ ತಂಡವು ವಿಜಯಗಳಿಸಿದ ಹಿನ್ನೆಲೆಯಲ್ಲಿ, ತಂಡದ ಸದಸ್ಯರಿಗೆ ಕಂಠೀರವ ಕ್ರೆಡಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಭೂಮಿಕ್, ಸಹನಾ, ಪೂರ್ಣಚಂದ್ರ, ದಿವ್ಯ, ಚಿನಯಿ, ದಿವ್ಯಾಂತಿ, ಶ್ರವಣ್,ದೇವಿ, ಶಿವಲಿಂಗು, ಮನೋಜ್, ಅಕ್ಷತಾ ಅವರುಗಳು ಮೃತಪಟ್ಟಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದರು.
ಭಾರತದ ಇತಿಹಾಸದಲ್ಲೇ 2ನೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಜೂನ್ 13ರಂದು ಸಂಭವಿಸಿದ್ದು, 230 ಪ್ರಯಾಣಿಕರು 12 ಸಿಬ್ಬಂದಿ ಮೃತಪಟ್ಟಿದ್ದಾರೆ. ವಿಮಾನ ಅಪ್ಪಳಿಸಿ ವೈದ್ಯಕೀಯ ಕಾಲೇಜು ಹಾಸ್ಟೆಲ್ನ 24 ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ ಎಂದು ಹೇಳಿದರು.ಸಂತಾಪ ಸೂಚನಾ ನಿರ್ಣಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಆರ್.ಅಶೋಕ್,ಸಿ.ಬಿ.ಸುರೇಶ್ಬಾಬು, ಅರಗಜ್ಞಾನೇಂದ್ರ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕರು ಬೆಂಬಲಿಸಿ ಮಾತನಾಡಿದರು. ನಂತರ ಒಂದು ನಿಮಿಷ ಮೌನಾಚರಣೆಯ ಮೂಲಕ ಅಗಲಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.